ಬೋಯಿಂಗ್​ 737 ವಿಮಾನ ನಿಷೇಧಿಸಿದ ಸಿಂಗಪುರ

ಸಿಂಗಪುರ: ಇಥಿಯೋಪಿಯಾದಿಂದ ನೈರೋಬಿಗೆ ಸಂಚರಿಸುತ್ತಿದ್ದ ಬೋಯಿಂಗ್​ 737 ವಿಮಾನ ಪತನಗೊಂಡು ಪ್ರಯಾಣಿಕರು ಸಾವನ್ನಪ್ಪಿರುವ ಬೆನ್ನಲ್ಲೇ ಬೋಯಿಂದ 737 ಮ್ಯಾಕ್ಸ್​ 8 ವಿಮಾನ ಸಂಚಾರವನ್ನು ನಿಷೇಧಿಸಿ ಸಿಂಗಪುರ ವಿಮಾನಯಾನ ನಿಯಂತ್ರಣಾ ಪ್ರಾಧಿಕಾರ ಆದೇಶ ನೀಡಿದೆ.

ಅಮೆರಿಕ ಏರ್​ಲೈನ್​ಗೆ ಸೇರಿದ ಬೋಯಿಂದ 737 ಮ್ಯಾಕ್ಸ್​ 8 ವಿಮಾನ ಭಾನುವಾರ ನೈರೋಬಿಗೆ ಹೊರಟ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಘಟನೆಯಲ್ಲಿ 157 ಜನರು ಮೃತಪಟ್ಟಿದ್ದರು. ಈ ಘಟನೆಗೆ ಒಂದು ತಿಂಗಳ ಹಿಂದೆ ಇದೇ ವಿಮಾನ ಮಾದರಿಯ ಲಯನ್​ ಏರ್​ಜೆಟ್​ ಇಂಡೋನೇಷಿಯಾದಲ್ಲಿ ಪತನಗೊಂಡು 189 ಮಂದಿ ಸಾವನ್ನಪ್ಪಿದ್ದರು. ಈ ಘಟನೆಗಳನ್ನು ಪರಿಗಣಿಸಿದ ಸಿಂಗಪುರ ಸಿವಿಲ್ ವಿಮಾನಯಾನ ಪ್ರಾಧಿಕಾರ ನಿಷೇಧದ ನಿರ್ಧಾರ ಕೈಗೊಂಡಿದೆ.

ಬೋಯಿಂಗ್​ 737 ಮ್ಯಾಕ್ಸ್​ ಮಾದರಿಯ ಎಲ್ಲ ವಿಮಾನಗಳು ಸಿಂಗಪುರದಿಂದ ಹಾರಾಡುವುದನ್ನು, ಬೇರೆ ದೇಶದಿಂದ ಸಿಂಗಪುರಕ್ಕೆ ಬರುವುದನ್ನು ತಾತ್ಕಾಲಿಕವಾಗಿ ಬಂದ್​ ಮಾಡಿದ್ದೇವೆ. ಇಂದು ಮಧ್ಯಾಹ್ನ 2 ಗಂಟೆಯಿಂದಲೇ ಈ ಆದೇಶ ಅನ್ವಯ ಎಂದು ಪ್ರಾಧಿಕಾರ ತಿಳಿಸಿದೆ.

Singapore bans use of Boeing 737 MAX in its airspace

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ