ಗಡಿಬಿಡಿಯಲ್ಲಿ ಮಗುವನ್ನೇ ಮರೆತು ವಿಮಾನ ಏರಿದ ತಾಯಿ

ರಿಯಾದ್: ವಾಹನ ಹತ್ತುವಾಗ ಗಡಿಬಿಡಿಯಲ್ಲಿ ಲಗೇಜ್, ಬ್ಯಾಗ್ ನಂತಹ ವಸ್ತುಗಳನ್ನು ಮರೆತು ಪರದಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ತಾಯಿ, ವಿಮಾನ ಹತ್ತುವ ಭರದಲ್ಲಿ ತನ್ನ ಮಗುವನ್ನೇ ಮರೆತು ವಿಮಾನ ಏರಿದ ಘಟನೆ ಸೌದಿ ಅರೇಬಿಯಾದ ಜೆಡ್ಡಾ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಮಹಿಳೆಯೊಬ್ಬಳು ತನ್ನ ಮಗುವನ್ನು ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ಬಿಟ್ಟು ವಿಮಾನವೇರಿದ್ದಾರೆ. ವಿಮಾನವೇರಿದ ಸ್ವಲ್ಪ ಸಮಯದ ಬಳಿಕ ಮಹಿಳೆಗೆ ಮಗುವಿನ ನೆನಪಾಗಿದೆ. ಆಗ ವಿಮಾನದ ಸಿಬ್ಬಂದಿಗೆ ಆಕೆ ವಿಷಯ ತಿಳಿಸಿ ಆತಂಕ ವ್ಯಕ್ತಪಡಿಸಿದ್ದಾಳೆ. ವಿಮಾನದ ಸಿಬ್ಬಂದಿ ಹಾಗೂ ಪೈಲಟ್ ಕೂಡಲೇ ಏರ್ ಟ್ರಾಫಿಕ್ ಕಂಟ್ರೋಲ್​ಗೆ (ಎಟಿಸಿ) ಮಾಹಿತಿ ನೀಡಿದ್ದಾರೆ.

ತಾಯಿ ಹಾಗೂ ಮಗುವಿನ ವಿಚಾರವಾದ ಹಿನ್ನೆಲೆಯಲ್ಲಿ ವಿಮಾನವನ್ನು ಮತ್ತೆ ಜೆಡ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಲಾಗಿದೆ. ಮಗುವಿನ ಜತೆ ತಾಯಿ ಮತ್ತೆ ಪ್ರಯಾಣ ಮುಂದುವರಿಸಿದ್ದಾರೆ.

Baby Not On Board: Plane forced to turn back after mother forgets her newborn at airport

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ