ಸಿಂಗಪುರ: ಇಥಿಯೋಪಿಯಾದಿಂದ ನೈರೋಬಿಗೆ ಸಂಚರಿಸುತ್ತಿದ್ದ ಬೋಯಿಂಗ್ 737 ವಿಮಾನ ಪತನಗೊಂಡು ಪ್ರಯಾಣಿಕರು ಸಾವನ್ನಪ್ಪಿರುವ ಬೆನ್ನಲ್ಲೇ ಬೋಯಿಂದ 737 ಮ್ಯಾಕ್ಸ್ 8 ವಿಮಾನ ಸಂಚಾರವನ್ನು ನಿಷೇಧಿಸಿ ಸಿಂಗಪುರ ವಿಮಾನಯಾನ ನಿಯಂತ್ರಣಾ ಪ್ರಾಧಿಕಾರ ಆದೇಶ ನೀಡಿದೆ.
ಅಮೆರಿಕ ಏರ್ಲೈನ್ಗೆ ಸೇರಿದ ಬೋಯಿಂದ 737 ಮ್ಯಾಕ್ಸ್ 8 ವಿಮಾನ ಭಾನುವಾರ ನೈರೋಬಿಗೆ ಹೊರಟ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಘಟನೆಯಲ್ಲಿ 157 ಜನರು ಮೃತಪಟ್ಟಿದ್ದರು. ಈ ಘಟನೆಗೆ ಒಂದು ತಿಂಗಳ ಹಿಂದೆ ಇದೇ ವಿಮಾನ ಮಾದರಿಯ ಲಯನ್ ಏರ್ಜೆಟ್ ಇಂಡೋನೇಷಿಯಾದಲ್ಲಿ ಪತನಗೊಂಡು 189 ಮಂದಿ ಸಾವನ್ನಪ್ಪಿದ್ದರು. ಈ ಘಟನೆಗಳನ್ನು ಪರಿಗಣಿಸಿದ ಸಿಂಗಪುರ ಸಿವಿಲ್ ವಿಮಾನಯಾನ ಪ್ರಾಧಿಕಾರ ನಿಷೇಧದ ನಿರ್ಧಾರ ಕೈಗೊಂಡಿದೆ.
ಬೋಯಿಂಗ್ 737 ಮ್ಯಾಕ್ಸ್ ಮಾದರಿಯ ಎಲ್ಲ ವಿಮಾನಗಳು ಸಿಂಗಪುರದಿಂದ ಹಾರಾಡುವುದನ್ನು, ಬೇರೆ ದೇಶದಿಂದ ಸಿಂಗಪುರಕ್ಕೆ ಬರುವುದನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದೇವೆ. ಇಂದು ಮಧ್ಯಾಹ್ನ 2 ಗಂಟೆಯಿಂದಲೇ ಈ ಆದೇಶ ಅನ್ವಯ ಎಂದು ಪ್ರಾಧಿಕಾರ ತಿಳಿಸಿದೆ.
Singapore bans use of Boeing 737 MAX in its airspace