ಕ್ಯಾಚ್ಗಳನ್ನ ಕೈಚೆಲ್ಲಿ ಪಂದ್ಯ ಕೈಚೆಲ್ಲಿದ ಬ್ಲೂ ಬಾಯ್ಸ್

ನಿನ್ನೆ ಮೊಹಾಲಿ ಅಮಗಳದಲ್ಲಿ ಟೀಂ ಇಂಡಿಯಾ ಗೆಲ್ಲಬೇಕಾಗಿತ್ತು. ಮೊಹಾಲಿ ಅಂಗಳದಲ್ಲಿ ಮೊದಲ ಬ್ಯಾಟಿಂಗ್ ಮಾಡಿ 359 ರನ್ಗಳ ಬಿಗ್ ಟಾರ್ಗೆಟ್ ನೀಡಿದ ಹೊರತಾಗಿಯೂ ಕೊಹ್ಲಿ ಪಡೆ ಕಳಪೆ ಬೌಲಿಂಗ್ ಮತ್ತು ಆಟಗಾರರ ಕೆಟ್ಟ ಫೀಲ್ಡಿಂಗ್ನಿಂದಾಗಿ ಪಂದ್ಯವನ್ನ ಕೈಚೆಲ್ಲಿಕೊಳ್ಳಬೇಕಾಯಿತು.

ಕ್ಯಾಚ್ ವಿನ್ matches  ಅನ್ನೋ ಮಾತಿದೆ ಈ ಮಾತು ನಿನ್ನೆ ಕೊಹ್ಲಿ ಪಡೆಗೆ ಸರಿಯಾಗಿ ಅನ್ವಯವಾಗುತ್ತದೆ. ಕಳಪೆ ಬೌಲಿಂಗ್ ಟೀಂ ಇಂಡಿಯಾದ ಸೋಲಿಗೆ ಕಾರಣವಾಗಿದ್ರು ನಿರ್ಣಾಯಕ ಹಂತದಲ್ಲಿ ಮಿಸ್ಟ್ ಫೀಲ್ಡ್, ಡ್ರಾಪ್ ಕ್ಯಾಚ್ಗಳೇ ಕೊಹ್ಲಿ ಪಡೆಯ ಸೋಲಿಗೆ ಕಾರಣವಾಯ್ತು. ಹಾಗಾದ್ರೆ ಬನ್ನಿ ಟೀಂ ಇಂಡಿಯಾ ಸೋತಿದ್ದು ಎಲ್ಲಿ ಮಿಸ್ ಫೀಲ್ಡ್ ಮಾಡಿದ ಪ್ಲೇಯರ್ಸ್ ಯಾರು ಅನ್ನೋದನ್ನ ತೋರಿಸ್ತೀವಿ ನೋಡಿ.

39ನೇ ಓವರ್ :ಸ್ಟಂಪ್ ಮಿಸ್ ಮಾಡಿದ ರಿಷಭ್ ಪಂತ್
ಐದನೇ ವಿಕೆಟ್ಗೆ ಭರ್ಜರಿಯಾದ ಭ್ಯಾಟಿಂಗ್ ಮಾಡಿ ಶತಕ ಬಾರಿಸಿದ್ದ ಪೀಟರ್ ಹ್ಯಾನ್ಸ್ ಕಾಮ್ 109 ರನ್ಗಳಿಸಿದ್ದಾಗ ಜೀವದಾನ ಪಡೆದ್ರು. ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ 39ನೇ ಓವರ್ನ ಐದನೇ ಎಸೆತದಲ್ಲಿ ಹ್ಯಾನ್ಸ್ಕಾಮ್ ದೊಡ್ಡ ಹೊಡೆತ ಹೊಡೆಯಲು ಹೋಗಿ ಎಡವಿದ್ರು. ಚೆಂಡು ನೇರವಾಗಿ ರಿಷಭ್ ಕಾಳಿಗೆ ಬಡಿಯಿತು. ಆ ಕ್ಷಣ ರಿಷಭ್ ಸ್ಟಂಪ್ ಮಾಡುವಲ್ಲಿ ವಿಫಲರಾದ್ರು. ರಿಷಭ್ ಸ್ಟಂಪ್ ಮಾಡಿದಿದ್ರೆ ಆಸಿಸ್ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಬೀಳುತ್ತಿತ್ತು.

44ನೇ ಓವರ್ :ರನೌಟ್ ಮಿಸ್ ಮಾಡಿದ ರಿಷಭ್ ಪಂತ್
ರಿಷಭ್ ಪಂತ್ ಇಲ್ಲಿಗೆ ಕಳಪೆ ವಿಕೆಟ್ ಕೀಪಿಂಗ್ ಇಲ್ಲಿಗೆ ನಿಲ್ಲಲಿಲ್ಲ ಇದಾದ ನಂತರ ಮತ್ತೋಮ್ಮೆ ಯಡವಟ್ಟು ಮಾಡಿದ್ರು. ಯಜ್ವಿಂದರ್ ಚಹಲ್ ಅವರ 44ನೇ ಓವರ್ನ ಮೂರನೇ ಎಸೆತದಲ್ಲಿ ಆ್ಯಲೆಕ್ಸ್ ಕ್ಯಾರಿ ಒಂಟಿ ರನ್ ತೆಗೆಯಲು ಹೋದ್ರು. ಅಲ್ಲಿಯೇ ಪಕ್ಕದಲ್ಲಿದ್ದ ರಿಷಭ್ ಚೆಂಡನ್ನ ಕೈಗೆತ್ತಿಕೊಂಡು ಸುಲಭವಾಗಿ ಔಟ್ ಮಾಡಬಹುದಿತ್ತು. ಆದರೆ ಹಿಂದು ಮುಂದು ನೋಡದೇ ಚೆಂಡನ್ನ ವಿಕೆಟ್ನತ್ತ ಪಂತ್ ಎಸೆದು ಬಿಟ್ರು. ಚೆಂಡು ವಿಕೆಟ್ಗೆ ಬಡಿಯಲ್ಲಿಲ್ಲ . ಒಂದು ವೇಳೆ ಪಂತ್ ರನೌಟ್ ಮಾಡಿದಿದ್ರೆ ಪಂದ್ಯಕ್ಕೆ ದೊಡ್ಡ ತಿರುವು ಸಿಗುತ್ತಿತ್ತು.

47ನೇ ಓವರ್ :ಕ್ಯಾಚ್ ಕೈಚೆಲ್ಲಿದ ಕೇದಾರ್ ಜಾಧವ್
ಇದಾದ ನಂತರ ಭುವನೇಶ್ವರ್ ಕುಮಾರ್ ಅವರ 47ನೇ ಓವರ್ನಲ್ಲಿ ಎರಡು ಕ್ಯಾಚ್ ಕೈಚೆಲ್ಲಿದ್ದು ಟೀಂ ಇಂಡಿಯಾದ ಫೀಲ್ಡಿಂಗ್ ಹಿಡಿದ ಕೈಗನ್ನಡಿಯಂತಿತ್ತು.

ಭುವನೇಶ್ವರ್ ಕುಮಾರ್ ಅವರ ಎರಡನೇ ಎಸೆತದಲ್ಲಿ ಟರ್ನರ್ ನೀಡಿದ ಕ್ಯಾಚ್ನ್ನ ಮಿಡ್ವಿಕೆಟ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೇದಾರ್ ಜಾಧವ್ ಕೈಚೆಲ್ಲಿದ್ರು.

ಒಂದು ವೇಳೆ ಕೇದಾರ್ ಜಾಧವ್ ಟರ್ನರ್ ನೀಡಿದ ಕ್ಯಾಚ್ನ್ನು ಹಿಡಿದಿದ್ರೆ ಭಾರತಕ್ಕೆ ಗೆಲ್ಲಲು ಇನ್ನು ಅವಕಾಶವಿತ್ತು . ಕ್ಯಾಚ್ನ್ನ ಕೈಚೆಲ್ಲುವುದರೊಂದಿಗೆ ಟೀಂ ಇಂಡಿಯಾ ಪಂದ್ಯವನ್ನ ಕೈಚೆಲ್ಲಿತು.

47ನೇ ಓವರ್ :ಸುಲಭ ಕ್ಯಾಚ್ ಡ್ರಾಪ್ ಮಾಡಿದ ಶಿಖರ್ ಧವನ್
ಇದಾದ ನಂತರ ಮೂರನೇ ಎಸೆತದಲ್ಲಿ ಟರ್ನರ್ ನೀಡಿದ ಸುಲಭ ಕ್ಯಾಚ್ನ್ನ ಮಿಡ್ ಆಫ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಶಿಖರ್ ಧವನ್ ಕೈಚೆಲ್ಲಿದ್ರು. ಇದನ್ನು ನೋಡಿದ ರೋಹಿತ್ ಶರ್ಮಾ ತಮ್ಮ ಸಿಟ್ಟನ ಹೊ ಹಾಕಿದ್ರು. ಸುಲಭವಾಗಿ ಬಂದ ಕ್ಯಾಚ್ನ್ನು ಶಿಖರ್ ಧವನ್ ರಂತ ಅನುಭವಿ ಆಟಗಾರನೇ ಕೈಚೆಲ್ಲಿದ್ರೆ ಯುವ ಆಟಗಾರರ ಗತಿ ಏನು ಎನ್ನವುಂತಿತ್ತು.

ಒಟ್ಟಾರೆ ಸರಣಿ ಗೆದ್ದು ನಿಟ್ಟುಸಿರು ಬಿಡಬೇಕಿದ್ದ ಟೀಂ ಇಂಡಿಯಾ ಕಳಪೆ ಫೀಲ್ಡಿಂಗ್ ತಂಡದ ಪಾಲಿಗೆ ಮುಳುವಾಯಿತು ಅನ್ನೊದೇ ಟೀಂ ಇಂಡಿಯಾ ಅಭಿಮಾನಿಗಳ ಪಾಲಿಗೆ ಬೇಸರದ ವಿಷಯವಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ