ಕರ್ಲಾನ್ ಸ್ಲೀಪಥಾನ್ 2019 ರಲ್ಲಿ 250 ಕ್ಕೂ ಹೆಚ್ಚು ಆರೋಗ್ಯ ಉತ್ಸಾಹಿಗಳು ಭಾಗಿ

1.ವಿಶ್ವ ನಿದ್ರಾ ದಿನದ ಅಂಗವಾಗಿ ಉತ್ತಮ ಆರೋಗ್ಯಕ್ಕೆ ನಿದ್ದೆಯ ಅವಶ್ಯಕತೆ ಬಗ್ಗೆ ಅರಿವು ಮೂಡಿಸುವ ಸ್ಲೀಪಥಾನ್ 
2.ಇದೇ ಮೊದಲ ಬಾರಿಗೆ ಕರ್ಲಾನ್ ಕಂಪನಿ ಆಯೋಜಿಸಿದ್ದ ಕಾರ್ಯಕ್ರಮ

ಬೆಂಗಳೂರು, ಮಾರ್ಚ್ 10, 2019: ನಿದ್ದೆಯ ಅಸ್ವಸ್ಥತೆಗಳು ಜಗತ್ತಿನಾದ್ಯಂತ ಗಣನೀಯ ಪ್ರಮಾಣದ ಜನರ ಮೇಲೆ ಪರಿಣಾಮ ಬೀರುತ್ತಿವೆ.

ದುರಾದೃಷ್ಠವಶಾತ್, ಬಹುತೇಕ ಅಸ್ವಸ್ಥತೆಗಳು ಗುರತಿಸಲ್ಪಡದೇ ಮತ್ತು ಚಿಕಿತ್ಸಾ ಪದ್ಧತಿಯಲ್ಲಿ ಚಿಕಿತ್ಸೆ ಇಲ್ಲದೇ ಹೋಗುತ್ತಿವೆ. ಆದಾಗ್ಯೂ, ಒಂದು ಉತ್ತಮ ನಿದ್ದೆಯು ಆರೋಗ್ಯಕ್ಕೆ ಅಗತ್ಯವಾಗಿದೆ ಎಂಬುದನ್ನು ಎಲ್ಲರೂ ಅರಿತಿದ್ದೇವೆ. ಬಹುಮುಖ್ಯವಾಗಿ, ಇತ್ತೀಚಿನ ಅಂಕಿಅಂಶಗಳ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಈ ನಿದ್ದೆಯ ಅಸ್ವಸ್ಥತೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.

ವಿಶ್ವ ನಿದ್ರಾ ದಿನ ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತು ಆರೋಗ್ಯಕ್ಕೆ ಮೂರು ಆಧಾರಸ್ತಂಭಗಳಾದ ನಿದ್ದೆ, ವ್ಯಾಯಾಮ ಮತ್ತು ಪೌಷ್ಟಿಕತೆಯನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಮುಂಚೂಣಿಯಲ್ಲಿರುವ ಹೋಂ ಕಂಫರ್ಟ್ ಸಲೂಶನ್ ಪೂರೈಕೆದಾರ ಮತ್ತು ಹಾಸಿಗೆ ಬ್ರ್ಯಾಂಡ್ ಆಗಿರುವ ಕರ್ಲಾನ್ ಇಂದು ಸ್ಲೀಪಥಾನ್ 2019 ಅನ್ನು ಆಯೋಜಿಸಿತ್ತು. ಇದೇ ಮೊದಲ ಬಾರಿಗೆ ಉತ್ತಮ ಆರೋಗ್ಯ ಮತ್ತು ಕ್ಷೇಮಕ್ಕೆ ಉತ್ತಮ ನಿದ್ದೆಯ ಮಹತ್ವ ಏನೆಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಈ ಸ್ಲೀಪಥಾನ್ ಅನ್ನು ಆಯೋಜನೆ ಮಾಡಲಾಗಿತ್ತು. ಕರ್ಲಾನ್‍ನ ಮುಖ್ಯ ಮಾರುಕಟ್ಟೆ ಅಧಿಕಾರಿ ಅಶುತೋಶ್ ವೈದ್ಯ ಅವರು ಈ ಸ್ಲೀಪಥಾನ್‍ಗೆ ಹಸಿರು ನಿಶಾನೆ ತೋರಿದರು. ಈ ವೇಳೆ, ಅಪೊಲೊ ಕ್ಲಿನಿಕ್ಸ್‍ನ ಕ್ಲಿನಿಕಲ್ ಸೈಕೋಲಾಜಿಸ್ಟ್ ಡಾ.ಪವನರಾವ್ ಮತ್ತು ಆರ್ಥೋಪೆಡಿಕ್, ಟ್ರೊಮಾ ಅಂಡ್ ರಿಕನ್‍ಸ್ಟ್ರಕ್ಟಿವ್ ಸರ್ಜರಿಯ ಸೀನಿಯರ್ ಕನ್ಸಲ್ಟೆಂಟ್ ಜಾಯಿಂಟ್ ರೀಪ್ಲೇಸ್‍ಮೆಂಟ್ ಡಾ.ಪ್ರವೀಣ್ ಬಸಗೌಡರ್ ಅವರು ಮುಖ್ಯ ಅತಿಥಿಗಳಾಗಿದ್ದರು.

3ಕೆ ಮತ್ತು 1ಕೆ ಎಂಬ ಎರಡು ವಿಭಾಗಗಳಲ್ಲಿ ಈ ರನ್ ಅನ್ನು ಆಯೋಜಿಸಿದ್ದು, ವಿವಿಧ ಕ್ಷೇತ್ರಗಳ 250 ಕ್ಕೂ ಹೆಚ್ಚು ಉತ್ಸಾಹಿಗಳು ಇದರಲ್ಲಿ ಪಾಲ್ಗೊಂಡಿದ್ದರು.

ಕರ್ಲಾನ್‍ನ ಮುಖ್ಯ ಮಾರುಕಟ್ಟೆ ಅಧಿಕಾರಿ ಅಶುತೋಶ್ ವೈದ್ಯ ಅವರು ಮಾತನಾಡಿ, “ರಾತ್ರಿಯ ಉತ್ತಮ ನಿದ್ರೆಯು ವ್ಯಾಯಾಮ, ಪೌಷ್ಟಿಕತೆ, ಆಹಾರ ಮತ್ತು ಜೀವನಶೈಲಿಯಷ್ಟೇ ಮುಖ್ಯವಾದುದು. ಕರ್ಲಾನ್‍ನಲ್ಲಿ ನಾವು ಒಟ್ಟಾರೆ ಆರೋಗ್ಯ ಮತ್ತು ಕ್ಷೇಮಕ್ಕೆ ಉತ್ತಮ ನಿದ್ದೆ ಅಗತ್ಯ ಎಂಬುದನ್ನು ಮತ್ತು ಅದರ ಪ್ರಾಮುಖ್ಯತೆಯನ್ನು ತಿಳಿಸಲು ಇಂತಹ ಉಪಕ್ರಮವನ್ನು ಕೈಗೊಂಡಿದ್ದೇವೆ. ಸಮಾನ ಮನಸ್ಕರ ಜತೆಗೂಡಿ ಈ ವರ್ಷದಿಂದ ಇಂತಹ ಅಭಿಯಾನವನ್ನು ಆರಂಭಿಸಿದ್ದೇವೆ’’ ಎಂದು ತಿಳಿಸಿದರು.

“ವಿಶ್ವ ನಿದ್ರಾ ದಿನದ ಅಂಗವಾಗಿ ನಾವು ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ದೆಯ ಮಹತ್ವ ಏನೆಂಬುದನ್ನು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದ್ದೇವೆ. ಒಂದು ಜವಾಬ್ದಾರಿಯುತವಾದ ಕಾರ್ಪೊರೇಟ್ ನಾಗರಿಕನಾಗಿ ನಾವು ಸ್ವಯಂಪ್ರೇರಿತವಾಗಿ ಇಂತಹ ಉಪಕ್ರಮವನ್ನು ಕೈಗೊಂಡು ಮುನ್ನಡಿ ಇಟ್ಟಿದ್ದೇವೆ’’ ಎಂದೂ ಅವರು ತಿಳಿಸಿದರು.

ಅಪೊಲೊ ಕ್ಲಿನಿಕ್ಸ್‍ನ ಕ್ಲಿನಿಕಲ್ ಸೈಕೋಲಾಜಿಸ್ಟ್ ಡಾ.ಪವನ ರಾವ್ ಅವರು ಮಾತನಾಡಿ, “ಜೀವನಶೈಲಿ ಮತ್ತು ಆಹಾರ ಪದ್ಧತಿಗಳಲ್ಲಿನ ಬದಲಾವಣೆಗಳು ನಿದ್ರೆಯ ಮೇಲೆ ಹಿಡಿತ ಸಾಧಿಸಿವೆ. ನಿದ್ದೆ, ವ್ಯಾಯಾಮ ಮತ್ತು ಪೌಷ್ಟಿಕತೆಗಳು ಆರೋಗ್ಯದ 3 ಆಧಾರಸ್ತಂಭಗಳಿದ್ದಂತೆ ಮತ್ತು ಒಟ್ಟಾರೆ ಕ್ಷೇಮಕ್ಕೆ ಇವು ಮೂಲಾಧಾರವಾಗಿದೆ. ದೀರ್ಘಕಾಲದ ನಿದ್ರೆಯ ಅಸ್ವಸ್ಥತೆಗಳು ಗುಣಪಡಿಸಲಾರದಂತಹ ಗಂಭೀರ ಸ್ವರೂಪದ್ದಾಗಿರುತ್ತವೆ ಮತ್ತು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತವೆ. ಈ ನಿಟ್ಟಿನಲ್ಲಿ ಆರೋಗ್ಯಕ್ಕೆ ನಿದ್ದೆ ಎಷ್ಟು ಅಗತ್ಯ ಮತ್ತು ಪ್ರಮುಖ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವತ್ತ ಕರ್ಲಾನ್ ದಿಟ್ಟ ಹೆಜ್ಜೆ ಇಟ್ಟಿದೆ’’ ಎಂದು ಶ್ಲಾಘಿಸಿದರು.

ಆರ್ಥೋಪೆಡಿಕ್, ಟ್ರೊಮಾ ಅಂಡ್ ರಿಕನ್‍ಸ್ಟ್ರಕ್ಟಿವ್ ಸರ್ಜರಿಯ ಸೀನಿಯರ್ ಕನ್ಸಲ್ಟೆಂಟ್ ಜಾಯಿಂಟ್ ರೀಪ್ಲೇಸ್‍ಮೆಂಟ್ ಡಾ.ಪ್ರವೀಣ್ ಬಸಗೌಡರ್ ಅವರು ಮಾತನಾಡಿ, “ನಿದ್ದೆಯ ಅಭಾವ ಅಪಾಯಕಾರಿಯಾದ ಪರಿಣಾಮವನ್ನುಂಟು ಮಾಡುತ್ತದೆ ಎಂಬುದನ್ನು ನಾವೆಲ್ಲಾ ತಿಳಿದಿದ್ದೇವೆ. ಇದೇ ಅಳತೆಗೋಲಿನಂತೆ ನಿದ್ರೆಗೂ ಸಮಾನ ಪ್ರಾಮುಖ್ಯತೆ ಇದೆ. ಇದು ಗುಣಮಟ್ಟದ ನಿದ್ರೆಗೆ ಅನ್ವಯಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಅಪೂರ್ಣ ನಿದ್ದೆಯಿಂದಾಗಿ ನೋವು, ಬೆನ್ನುನೋವು ಕಾಣಿಸಿಕೊಳ್ಳುವುದುಂಟು. ಇವುಗಳು ಪರಿಪೂರ್ಣವಾದ ನಿದ್ದೆ ಮೇಲೆ ಪರಿಣಾಮ ಬೀರುತ್ತವೆ. ಒಂದು ವೇಳೆ ಇದನ್ನು ತಪಾಸಣೆ ಮಾಡಿಸಿಕೊಂಡು ಸರಿಪಡಿಸಿಕೊಳ್ಳದಿದ್ದರೆ ಒಂದರ ನಂತರ ಮತ್ತೊಂದು ಎಂಬಂತೆ ವ್ಯತಿರಿಕ್ತ ಪರಿಣಾಮಗಳು ಎದುರಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಗುಣಪಡಿಸಲಾರದಂತಹ ರೋಗಕ್ಕೂ ತುತ್ತಾಗಬೇಕಾಗುತ್ತದೆ’’ ಎಂದು ಎಚ್ಚರಿಕೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ