ವಿಜಯಪುರ,ಮಾ.11- ತಾಳಿಕೋಟೆ ಪಟ್ಟಣದ ಎಪಿಎಂಪಿಯಲ್ಲಿನ ಗೋದಾಮಿನ ಮೇಲೆ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು , 7.90 ಲಕ್ಷ ಮೌಲ್ಯದ 293 ಕ್ವಿಂಟಾಲ್ ಅಕ್ಕಿ , ಲಾರಿ ಹಾಗೂ ಟಾಟಾ ಏಸರ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಹಲವೆಡೆ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಳ್ಳುತ್ತಿದೆ ಮತ್ತು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಆಹಾರ ಅಧಿಖಾರಿಗಳು ದಾಳಿ ಕೈಗೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಅದರಂತೆ ತಮ್ಮ ದಾಳಿಯನ್ನು ಮುಂದುವರೆಸಿರುವ ಅಧಿಕಾರಿಗಳು ತಾಳಿಕೋಟೆ ಪಟ್ಟಣದ ಎಪಿಎಂಪಿಯ ಗೋದಾಮಿಗೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ ಸಂಗ್ರಹಿಸಿದ್ದ 7,91,000 ರೂ. ಬೆಲೆಯ 293 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಅಲ್ಲದೆ Iಏ 18 ಆಎ 5614 ನಂಬರಿನ ಲಾರಿ, ಓಅ 28ಆ 8503 ನಂಬರಿನ ಟಾಟಾ ಏಸರ್ನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಲಾರಿ ಚಾಲಕ ಪರಾರಿಯಾಗಿದ್ದು, ಟಾಟಾ ಏಸರ್ ಚಾಲಕನಾದ ಶಿವಾನಂದ ನಾಯಕ ಅವರನ್ನು ಬಂಧಿಸಲಾಗಿದೆ.
ಆಹಾರ ನಿರೀಕ್ಷಕ ಅಂಬರೀಷ ತಾಂಡೂರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಗೋದಾಮಿನ ಮಾಲೀಕ ಗೊಲ್ಲಾಳಪ್ಪ ಹಿರೇಗೌಡರ ಹಾಗೂ ವಾಹನಗಳ ಮಾಲೀಕರು, ಚಾಲಕರ ಮೇಲೆ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.