ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ 8 ತಿಂಗಳ ಕಾರ್ಯವೈಖರಿ ಕುರಿತು ಬಿಜೆಪಿ ವ್ಯಂಗ್ಯ

ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ 8 ತಿಂಗಳ ಕಾರ್ಯವೈಖರಿಯನ್ನು ಬಿಜೆಪಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

ಕಾಂಗ್ರೆಸ್​ ಹಾಗೂ ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ಎಚ್​.ಡಿ.ಕುಮಾರಸ್ವಾಮಿ ಕಳೆದ 8 ತಿಂಗಳ ಕಾರ್ಯ ವೈಖರಿಯಲ್ಲಿ ಕೇವಲ ಕುಟುಂಬದ ಗೆಲುವಿನ ಬಗ್ಗೆ ಮಾತ್ರ ಗಮನಹರಿಸಿದ್ದಾರೆ ಹೊರತು ರಾಜ್ಯದ ಅಭಿವೃದ್ಧಿಗೆ ಕಿಂಚಿತ್ತೂ ಗಮನಹರಿಸಿಲ್ಲ ಎಂದು ಹೇಳಿದೆ.

ಸಿಎಂ ಕುಮಾರಸ್ವಾಮಿ ಅವರು ಮೊದಲ ಎರಡು ತಿಂಗಳು ಸರ್ಕಾರವನ್ನು ಹೇಗೆ ರಚಿಸಬೇಕೆಂಬ ಗೊಂದಲದಲ್ಲಿದ್ದರು. ಮೂರು ಮತ್ತು ನಾಲ್ಕನೇ ತಿಂಗಳಲ್ಲಿ ಪತ್ನಿ ಗೆಲುವಿಗೆ ಹೇಗೆ ಸಹಕಾರ ನೀಡುವುದು ಎಂಬ ಚಿಂತನೆಯಲ್ಲಿದ್ದರು. ಐದು ಮತ್ತು ಆರನೇ ತಿಂಗಳಲ್ಲಿ ಮಗನ ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದರು. ಏಳು ಮತ್ತು ಎಂಟನೇ ತಿಂಗಳಲ್ಲಿ ಮಂಡ್ಯದಲ್ಲಿ ಪುತ್ರನನ್ನು ಗೆಲ್ಲಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್​ ನಲ್ಲಿ ವ್ಯಂಗ್ಯವಾಡಿದೆ.

ಈ ಮೂಲಕ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸ್ಥಾನವನ್ನು ಕುಟುಂಬದ ಅವಶ್ಯಕತೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.

CM seat is catering the needs of family business: BJP Tweet

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ