ಕೃಷ್ಣಮೃಗ ಬೇಟೆ ಪ್ರಕರಣ: ಸೈಫ್​ ಅಲಿಖಾನ್​, ಸೋನಾಲಿ ಬೇಂದ್ರೆ,ಟಬುಗೆ ರಾಜಸ್ಥಾನ ಹೈಕೋರ್ಟ್ ನೋಟೀಸ್

ಜೋದ್ ಪುರ: ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್​ ನಟರಾದ ಸೈಫ್​ ಅಲಿಖಾನ್​, ಸೋನಾಲಿ ಬೇಂದ್ರೆ ಹಾಗೂ ಟಬು ಅವರಿಗೆ ರಾಜಸ್ಥಾನ ಹೈಕೋರ್ಟ್​ ನೋಟಿಸ್​ ನೀಡಿದೆ.

1998ರಲ್ಲಿ ‘ಹಮ್ ಸಾಥ್‌ ಸಾಥ್‌ ಹೈ’ ಚಿತ್ರದ ಶೋಟಿಂಗ್ ವೇಳೆ ಕಂಕಾನಿ ಗ್ರಾಮಕ್ಕೆ ಬೇಟೆಯಾಡಲು ತೆರಳಿದ್ದ ನಟ ಸಲ್ಮಾನ್ ಖಾನ್, ಸೈಫ್ ಅಲಿಖಾನ್, ಟಬು ಹಾಗೂ ಸೋನಾಲಿ ಬೇಂದ್ರೆ ಸೇರಿದಂತೆ ಹಲವರು ಎರಡು ಕೃಷ್ಣಮೃಗಗಳನ್ನು ಹತ್ಯೆ ಮಾಡಿದ್ದರು. ಈ ಪ್ರಕರಣ ಸಂಬಂಧ್ ವಿಚಾರಣೆ ನಡೆಸಿದ್ದ ಜೋಧಪುರ ನ್ಯಾಯಾಲಯ 2018ರಲ್ಲಿ ಈ ಐವರನ್ನೂ ಬಿಡುಗಡೆಗೊಳಿಸಿ ತೀರ್ಪು ನೀಡಿತ್ತು. ತೀರ್ಪಿನ ವಿರುದ್ಧ ರಾಜಸ್ಥಾನ ಸರ್ಕಾರ ಹೈಕೋರ್ಟ್​ಗೆ ಮನವಿ ಸಲ್ಲಿಸಿತ್ತು.

ಸರ್ಕಾರದ ಮನವಿ ಕೈಗೆತ್ತಿಕೊಂಡಿರುವ ಹೈಕೋರ್ಟ್​​, ಇಂದು ಸೈಫ್​ ಅಲಿಖಾನ್, ನಟಿ ಟಬು,ಸೋನಾಲಿ ಬೇಂದ್ರೆ ಹಾಗೂ ಸ್ಥಳೀಯ ಕಲಾವಿದರಾದ ನೀಲಂ ಕೊಠಾರಿ, ದುಷ್ಯಂತ ಸಿಂಗ್​ ಅವರಿಗೆ ನೋಟೀಸ್​ ನೀಡಿದೆ. ಇನ್ನು ನಟ ಸಲ್ಮಾನ್​ ಖಾನ್​ಗೆ ಈಗಾಗಲೇ ಶಿಕ್ಷೆಯಾಗಿದ್ದು ಕಳೆದ ವರ್ಷ ಏಪ್ರಿಲ್​ನಲ್ಲಿ ಜಾಮೀನು ಸಿಕ್ಕಿದೆ.

Blackbuck poaching case: Rajasthan High Court issues notice to Saif Ali Khan, Sonali Bendre and Tabu

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ