ಜೋದ್ ಪುರ: ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಟರಾದ ಸೈಫ್ ಅಲಿಖಾನ್, ಸೋನಾಲಿ ಬೇಂದ್ರೆ ಹಾಗೂ ಟಬು ಅವರಿಗೆ ರಾಜಸ್ಥಾನ ಹೈಕೋರ್ಟ್ ನೋಟಿಸ್ ನೀಡಿದೆ.
1998ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಚಿತ್ರದ ಶೋಟಿಂಗ್ ವೇಳೆ ಕಂಕಾನಿ ಗ್ರಾಮಕ್ಕೆ ಬೇಟೆಯಾಡಲು ತೆರಳಿದ್ದ ನಟ ಸಲ್ಮಾನ್ ಖಾನ್, ಸೈಫ್ ಅಲಿಖಾನ್, ಟಬು ಹಾಗೂ ಸೋನಾಲಿ ಬೇಂದ್ರೆ ಸೇರಿದಂತೆ ಹಲವರು ಎರಡು ಕೃಷ್ಣಮೃಗಗಳನ್ನು ಹತ್ಯೆ ಮಾಡಿದ್ದರು. ಈ ಪ್ರಕರಣ ಸಂಬಂಧ್ ವಿಚಾರಣೆ ನಡೆಸಿದ್ದ ಜೋಧಪುರ ನ್ಯಾಯಾಲಯ 2018ರಲ್ಲಿ ಈ ಐವರನ್ನೂ ಬಿಡುಗಡೆಗೊಳಿಸಿ ತೀರ್ಪು ನೀಡಿತ್ತು. ತೀರ್ಪಿನ ವಿರುದ್ಧ ರಾಜಸ್ಥಾನ ಸರ್ಕಾರ ಹೈಕೋರ್ಟ್ಗೆ ಮನವಿ ಸಲ್ಲಿಸಿತ್ತು.
ಸರ್ಕಾರದ ಮನವಿ ಕೈಗೆತ್ತಿಕೊಂಡಿರುವ ಹೈಕೋರ್ಟ್, ಇಂದು ಸೈಫ್ ಅಲಿಖಾನ್, ನಟಿ ಟಬು,ಸೋನಾಲಿ ಬೇಂದ್ರೆ ಹಾಗೂ ಸ್ಥಳೀಯ ಕಲಾವಿದರಾದ ನೀಲಂ ಕೊಠಾರಿ, ದುಷ್ಯಂತ ಸಿಂಗ್ ಅವರಿಗೆ ನೋಟೀಸ್ ನೀಡಿದೆ. ಇನ್ನು ನಟ ಸಲ್ಮಾನ್ ಖಾನ್ಗೆ ಈಗಾಗಲೇ ಶಿಕ್ಷೆಯಾಗಿದ್ದು ಕಳೆದ ವರ್ಷ ಏಪ್ರಿಲ್ನಲ್ಲಿ ಜಾಮೀನು ಸಿಕ್ಕಿದೆ.
Blackbuck poaching case: Rajasthan High Court issues notice to Saif Ali Khan, Sonali Bendre and Tabu