ಉಗ್ರರನ್ನು ಮಟ್ಟಹಾಕಲು ನಮ್ಮ ಅವಧಿಯಲ್ಲಿ ಭಾರತ ಹೊಸ ನೀತಿ ಅನುಸರಿಸುತ್ತಿದೆ; ಪ್ರಧಾನಿ

ನವದೆಹಲಿ: ಉಗ್ರರನ್ನು ಮಟ್ಟಹಾಕಲು ಭಾರತ ನಮ್ಮ ಸರ್ಕಾರದ ಅವಧಿದಲ್ಲಿ ಹೊಸ ನೀತಿಯನ್ನು ಅನುಸರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನೊಯ್ಡಾದಲ್ಲಿ ಬಿಜೆಪಿ ರ್ಯಾಲಿ ಉದ್ದೇಶಿ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯ ವೈಮಾನಿಕ ದಾಳಿ ಶ್ಲಾಘಿಸುತ್ತಾ ಕಾಂಗ್ರೆಸ್ ಹಾಗೂ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಉಗ್ರರನ್ನು ಮಟ್ಟಹಾಕಲು ಭಾರತ ನಮ್ಮ ಅವಧಿಯಲ್ಲಿ ಹೊಸ ನೀತಿ ಅನುಸರಿಸುತ್ತಿದೆ. ಈ ಹಿಂದೆ ಮುಂಬೈ ದಾಳಿಯಾದಗಾಲೂ ಯುಪಿಎ ಸರ್ಕಾರ ಇದೇ ರೀತಿ ಪ್ರತಿಕ್ರಿಯೆ ನೀಡಬೇಕಾಗಿತ್ತು ಎಂದರು.

ಭಾರತೀಯ ರಕ್ತ ಹೊಂದಿರುವವರು ಯಾರೂ ಪಾಕಿಸ್ತಾನದ ಬಾಲಕೋಟ್ ನ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಕ್ಯಾಂಪ್ ಮೇಲೆ ನಡೆದ ವೈಮಾನಿಕ ದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸುವುದಿಲ್ಲ. ಮುಂಬೈ ದಾಳಿಯ ನಂತರ ನಮ್ಮ ಸೇನಾಪಡೆಗಳು ಉಗ್ರರ ವಿರುದ್ಧ ಪ್ರತೀಕಾರಕ್ಕೆ ಸಿದ್ಧವಾಗಿದ್ದವು. ಆದರೆ ಹಿಂದಿನ ಸರ್ಕಾರ ಅದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಸೇನಾಪಡೆಗಳು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದರು.

2016ರಲ್ಲಿ ಉರಿ ಉಗ್ರ ದಾಳಿಯ ನಂತರ ನಾವು ಮೊದಲ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಉಗ್ರರಿಗೆ ತಕ್ಕ ಪಾಠ ಕಲಿಸಿದೆವು. ಭಾರತ ಈಗ ಹೊಸ ರೀತಿ ಮತ್ತು ನೀತಿಯೊಂದಿಗೆ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.

India now follows new policy of dealing with terrorists: PM Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ