ಪ್ರಧಾನಿ ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ; ಬರ ಪರಿಹಾರಕ್ಕೆ ಮನವಿ

ನವದೆಹಲಿ: ರಾಜ್ಯವೂ ಬರ ಪರಿಸ್ಥಿತಿಯಿಂದ ತತ್ತಾರಿಸಿದ್ದು, ಕೇಂದ್ರ ಸರ್ಕಾರವೂ ಆರ್ಥಿಕ ನೆರವಿಗೆ ಮುಂದಾಗಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಿದರು.

ದೆಹಲಿಯ ಲ್ಲಿನ ಪ್ರಧಾನಿಯವ ಗೃಹಕಚೇರಿಯಲ್ಲಿ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ, ರಾಜ್ಯದ ಬರ ಪರಿಸ್ಥಿತಿ ಕುರಿತು ಅವರಿಗೆ ಮನವರಿಕೆ ಮಾಡಿಕೊಟ್ಟರು. ರಾಜ್ಯದಲ್ಲಿ 150ಕ್ಕೂ ಹೆಚ್ಚು ತಾಲೂಕುಗಳು ನಿರಂತರ ಬರಕ್ಕೆ ತುತ್ತಾಗಿದೆ. ಇದರಿಂದ ನೀರಿನ ಸಮಸ್ಯೆ, ಮೇವಿನ ಸಮಸ್ಯೆ ಉದ್ಭವಿಸಿದೆ. ರಾಜ್ಯ ಈ ಬಾರಿ ಅತಿವೃಷ್ಟಿ, ಅನಾವೃಷ್ಟಿಗೆ ತುತ್ತಾಗಿದ್ದು ಕೃಷಿ ಚಟುವಟಿಕೆಗೆ ತೊಡಗಾಗಿದೆ. ಇದರ ನಿವಾರಣೆಗಾಗಿ ಪರಿಹಾರ ನೀಡುವಂತೆ ಕೋರಿಕೊಂಡರು.

ರಾಜ್ಯ ಈ ಬಾರಿ ಬರ ಹಾಗೂ ಪ್ರವಾಹಕ್ಕೆ ತುತ್ತಾಗಿದೆ. ಇದರಿಂದಾಗಿ 32,335 ಕೋಟಿ ಆರ್ಥಿಕ ನಷ್ಟದಲ್ಲಿ ರಾಜ್ಯ ಸಿಲುಕಿದೆ. ಇದರಿಂದಾಗಿದೆ ರಾಜ್ಯದ ಅಭಿವೃದ್ಧಿ ಯೋಜನೆ ಹಾಗೂ ಕಲ್ಯಾಣ ಯೋಜನೆ ಮೇಲೆ ಕೂಡ ಇದು ಪರಿಣಾಮಬೀರಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ನೆರವಿಗೆ ಕೇಂದ್ರ ಸರ್ಕಾರ ಮುಂದಾಬೇಕು ಎಂದು ಕೇಳಿಕೊಂಡರು.

. ರಾಜ್ಯದ ಎಸ್​ಡಿಆರ್​ಎಫ್​ ನಿಧಿ ಹೊರತು ಪಡಿಸಿ ರಾಜ್ಯ ಸರ್ಕಾರ 386 ಕೋಟಿ ಬಿಡುಗಡೆ ಮಾಡಿದೆ . ಅಲ್ಲದೇ ಪ್ರವಾಹ ಮತ್ತು ಬರಕ್ಕೆ ತುತ್ತಾದ ರೈತರು  ಸೇರಿದಂತೆ ಎಲ್ಲ ಬೆಳೆ ಸಾಲಮನ್ನಾ ಮಾಡಲಾಗಿದೆ, ಇದರ ಹೊರತಾಗಿ ಬರ ಪರಿಹಾರಕ್ಕಾಗಿ 2064 ಕೋಟಿ ಪರಿಹಾರ ಅಗತ್ಯವಿದ್ದು, ಈ ಹಣವನ್ನು ಎನ್​ಡಿಆರ್​ಎಫ್​ ಮೂಲಕ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.

ಇದೇ ವೇಳೆ ನರೇಗಾ ಯೋಜನೆ ಹಣ ಬಿಡುಗಡೆಗೂ ಅವರು ಮನವಿ ಸಲ್ಲಿಸಿದರು. ನರೇಗಾ ಯೋಜನೆಗೆ ಕೇಂದ್ರ ಸರ್ಕಾರ ನೀಡುವ ಹಣ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಕೂಲಿಕಾರ್ಮಿಕರು ತೊಂದರೆಯಲ್ಲಿ ಸಿಲುಕಿದ್ದಾರೆ. ವೇತನ, ಬಾಕಿ ಹಣ 1315 ಕೋಟಿಯನ್ನು  ಬಿಡುಗಡೆ ಮಾಡುವಂತೆ  ಈಗಾಗಲೇ ಈ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಖುದ್ಧು ಮುಖ್ಯಮಂತ್ರಿಗಳು ಪ್ರಧಾನಿಯನ್ನು ಭೇಟಿಯಾಗಿ ಈ ಕುರಿತು ವಿವರಣೆ ನೀಡಿದ್ದಾರೆ.

ಇದೇ ವೇಳೆ ಸುಪ್ರೀಂ ಕೋರ್ಟ್​ ನ್ಯಾಯಾಮೂರ್ತಿ ರಂಜನ್​ ಗೊಗೋಯ್​ ಅವರನ್ನು ಸಿಎಂ ಭೇಟಿಯಾಗಲಿದ್ದು,  ಹಾಸನದಲ್ಲಿ ನೂತನವಾಗಿ ನಿರ್ಮಾಣವಾಗಿರು ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗಾಗಿ ಅವರನ್ನು ಆಹ್ವಾನಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ