ಹಾವೇರಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲ ಕೆಲಸವೇ ಮಹಿಳೆಯರಿಗೆ ಮೀಸಲು ಜಾರಿ ಮಾಡುವುದು, ಲೋಕಸಭೆ, ರಾಜ್ಯಸಭೆ, ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ತರುವುದರ ಜೊತೆಗೆ ಮಹಿಳೆಯರು ಶಾಸನಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವಕಾಶವಾಗುತ್ತದೆ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮೀಸಲಾತಿ ಜಾರಿಗೆ ತರುವುದಾಗಿ ಐಎಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಘೋಷಣೆ ಮಾಡಿದ್ದಾರೆ.
ಶನಿವಾರ ಇಲ್ಲಿನ ಮುನಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಕಾಂಗ್ರೆಸ್ ಪರಿವರ್ತನಾ ಬೃಹತ್ ರ್ಯಾಲಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನಸಮಾನ್ಯರಿಗೆ, ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಹೊರೆಯಾಗಿರುವ ಗಬ್ಬರ್ಸಿಂಗ್ ಟ್ಯಾಕ್ಸ್ ಸರಗಳಿಸುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣದಲ್ಲಿ ಜಿಎಸ್ಟಿಯಲ್ಲಿ ಬದಲಾವಣೆ ಮಾಡುವುದಾಗಿ ಅವರು ಘೋಷಿಸಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿಯಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದ್ದು. ಹಾವೇರಿಯಲ್ಲಿಯ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದ ಅಪಾರ ಸಂಖ್ಯೆಯಲ್ಲಿ ಕಂಡು ಬಂದ್ ಜನರನ್ನು ಕಂಡು ನಿಗದಿಗಿಂತ ತುಸು ಹೆಚ್ಚಿನ ಸಮಯ ಭಾಷಣಮಾಡಿದ ರಾಹುಲ್ ಗಾಂಧಿ ಕರ್ನಾಟಕದ ಮತದಾರರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿದರು.
ಪ್ರಧಾನಿ ಮೋದಿ ಅವರು 4ವರ್ಷಗಳ ವರೆಗೆ ಸುಮ್ಮನಿದ್ದು, ಇದೀಗ ಹಸಿಸುಳ್ಳುಗಳನ್ನು ನೂರುಬಾರಿ ಹೇಳುತ್ತಾ ಸುಳ್ಳುಗಳನ್ನೆ ಸತ್ಯವೆಂಬು ಬಿಂಬಿಸುತ್ತಿದ್ದಾರೆ. ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ನೀವು ನಮ್ಮ ಮೇಲೆ ನಂಬಿಕೆ ಇಡಿ. ನಮ್ಮನ್ನು ಆರಿಸಿ ತನ್ನಿ, ಕಾಂಗ್ರೆಸ್ ಸರ್ಕಾರ ಜನಸಮಾನ್ಯರ ಜೀವನಮಟ್ಟ ಸುಧಾರಣೆಗೆ ಸಾಮನ್ಯ ಕನಿಷ್ಠ ಕಾರ್ಯಕ್ರಮವನ್ನು ಜಾರಿಗೆ ತರಲಿದೆ ಎಂದರು.
ಜನರು ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಜನಸಮಾನ್ಯರ ಆಸ್ತಿ ವಶಪಡಿಸಿಕೊಳ್ಳುತ್ತಿದೆ. ಜನರು ತರಿಗೆ ರೂಪದಲ್ಲಿ ನೀಡುತ್ತಿರುವ ಹಣ ಅನಿಲ್ ಅಂಬಾನಿ, ಅದಾನಿ, ಚೋಕ್ಸಿ ಅಂತಹವರ ಅಕೌಂಟ್ಗೆ ಹೋಗುತ್ತಿದೆ.
ಇಂತಹ ಎಲ್ಲ ಅವ್ಯವಹಾರವನ್ನ ತಡೆಗಟ್ಟುತ್ತೇವೆ. ಕಾಂಗ್ರೆಸ್ ಜನರ ಖಾತೆಗಳಿಗೆ ಹಣ ನೀಡುವ ಮೂಲಕ ಜನಸಮಾನ್ಯರ ಜೀವನ ಮಟ್ಟ ಸುಧಾರಣೆಗೆ ಅಗತ್ಯ ಕ್ರಮಕೈಗೊಳ್ಳುತ್ತದೆ ಎಂದು ರಾಹುಲ್ಗಾಂಧಿ ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷ ದೇಶದ ರೈತರ ಪರ, ಜನಸಾಮನ್ಯರ ಪರವಾಗಿರುತ್ತದೆ ಎಂದ ಅವರು ರಾಜ್ಯದ ಪ್ರತಿಯೊಬ್ಬ ಕಾಂಗ್ರೆಸ್? ಕಾರ್ಯಕರ್ತರಿಗೆ ನಾನು ಧನ್ಯವಾದ ಅರ್ಪಣೆ ಮಾಡುತ್ತೇನೆ. ಕರ್ನಾಟಕದಲ್ಲಿ ಎರಡು ವಿಚಾರ ಧಾರೆಗಳಿವೆ. ಒಂದು ಅದು ಬಿಜೆಪಿ ವರ್ಗ, ಇನ್ನೊಂದು ಕಾಂಗ್ರೆಸ್ ವರ್ಗ. ಕಾಂಗ್ರೆಸ್ರೈತರು, ಬಡವರು, ದೀನ ದಲಿತರು, ವ್ಯಾಪಾರಿ ವರ್ಗದವರ ಪರ ಇರುತ್ತೇವೆ.
ನಾವು ಅಧಿಕಾರಕ್ಕೆ ಬಂದರೆ ಮೆಹೂಲ್ ಚೋಕ್ಸಿ, ನೀರವ್ ಮೋದಿ ಅವರನ್ನ ಜೈಲಿಗೆ ಹಾಕುತ್ತೇವೆ ಎಂದು ಅವರು ಗುಡುಗಿದರು.
ಬಿಜೆಪಿ ಎರಡು ಹಿಂದೂಸ್ಥಾನವನ್ನ ನಿರ್ಮಾಣ ಮಾಡಿದ್ದಾರೆ. ಆದರೆ, ನಾವು ಏಕ ಭಾರತಕ್ಕಾಗಿ ಹೋರಾಟ ಮಾಡುತ್ತೇವೆ. ಏಕ ಭಾರತವೇ ನಮ್ಮ ಧ್ಯೇಯ ನಾವು ಎಲ್ಲ ಬಡವರಿಗೆ ಕನಿಷ್ಠ ವೇತನ ನೀಡುತ್ತೇವೆ. ಮೋದಿ ಹಾಗೇ ಚಿಲ್ಲರೆ ಹಣ ನೀಡಲು ಹೋಗಲ್ಲ, ಎಲ್ಲರೂ ಗೌರವದಿಂದ ಬದುಕುವಷ್ಟು ಹಣ ನೀಡುತ್ತೇವೆ , ಬಿಜೆಪಿ ರೈತರಿಗೆ ದಿನಕ್ಕೆ ಕೇವಲ 3.5 ರೂ ನೀಡುವ ಯೋಜನೆ ಘೋಷಣೆ ಮಾಡಿ ರೈತರ ಕಣ್ಣಿಗೆ ಮಣ್ಣೆರೆಚಿದ್ದಾರೆ. ಪಿಯುಶ ಘೋಯಲ್ಅವರು ಲೋಕಸಭೆಯಲ್ಲಿ ಬಜೆಟ್ ಮಂಡಿಸುತ್ತಿದ್ದ ವೇಳೆ ಬಿಜೆಪಿ ಸದಸ್ಯರು ಬೆಂಚ್ ತಟ್ಟಿದ್ದರು. ಆದರೆ ರೈತರಿಗೆ ದಿನಕ್ಕೆ 3.5ರೂ ನೀಡುವ ಯೋಜನೆಗೆ 10ನಿಮಿಷ ಬೆಜೆಪಿ ಸದ್ಯ ಮೇಜು ಕುಟ್ಟಿದ್ದರು. ನಾವು ಛತ್ತೀಸ್ಗಢದಲ್ಲಿ ಕನಿಷ್ಠ ವೇತನ ನೀಡುವ ಯೋಜನೆ ಜಾರಿಗೆ ಮಾಡಿದ್ದೇವೆ. ನಾವು ಜಾರಿಗೆ ತಂದ ಯೋಜನೆಯನ್ನು ನೋಡಿ ಬಜೆಟ್ನಲ್ಲಿ ಜನರಿಗೆ ಹಣ ನೀಡುವ ಯೋಜನೆಯನ್ನು ಮೋದಿಯವರು ಘೋಷಿಸಿದ್ದಾರೆ ಎಂದು ರಾಹುಲ್ ಗಾಂಧಿ ಮೋದಯವರನ್ನುತರಾಟೆಗೆ ತಗೆದುಕೊಂಡರು.
ಕಾಂಗ್ರೆಸ್ ಮತ್ತೊಂದು ಕ್ರಾಂತಿ ಮಾಡಲು ಹೊರಟಿದೆ. ಎಲ್ಲ ಬಡವರಿಗೂ ಕನಿಷ್ಠ ಆದಾಯ ಬರುವ ಯೋಜನೆ ಜಾರಿಗೆ ತರಲು ಮುಂದಾಗಿದೆ ಎಂದ ಗಾಂಧಿಯವರು, ಮನ್ರೇಗಾ, ಟೆಲಿಕಾಂ, ಹಸಿರು, ಐಟಿ, ಕಂಪ್ಯೂಟರ್ ಕ್ರಾಂತಿ ಮಾಡಿದ್ದು ಕಾಂಗ್ರೆಸ್ ಸರ್ಕಾರ.
ನಾವು ತಂದಿದ್ದ ಭೂ ರಕ್ಷಣಾ ಕಾಯ್ದೆ ತೆಗೆದು ಹಾಕಲು ಬಿಜೆಪಿಯವರು ಮೂರು ಬಾರಿ ಪ್ರಯತ್ನ ಪಟ್ಟರು, ನಾವು ಆ ಬಿಲ್ ತೆಗೆದುಹಾಕಲು ಬಿಡಲಿಲ್ಲ. ಆದರೆ ರಾಜ್ಯ ಸರ್ಕಾರಗಳಿಗೆ ಆ ಹಕ್ಕು ನೀಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ರಾಹುಲ್ ವಾಗ್ದಾಳಿ ನಡೆಸಿದರು.
ಭೂಮಿ ಮೇಲೆ ಆಗುತ್ತಿದ್ದ ಭ್ರಷ್ಟಾಚಾರ ತಡೆಯಲು ನಾವು ಪ್ರಯತ್ನ ಮಾಡಿದ್ದೆವು, ಯುಪಿಎ ಸರ್ಕಾರ ಬಡವರ ಭೂಮಿ ಉಳಿಸಲು ಹೊಸ ಕಾನೂನು ಜಾರಿಗೆ ತಂದಿದೆ. ಲೋಕಸಭೆಯಲ್ಲಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಪ್ರಧಾನಿ ಮೋದಿಯವರಿಗೆ ಸಾಧ್ಯವೇ ಆಗಲಿಲ್ಲ. ಲೋಕಸಭೆಯಲ್ಲಿ ನಾನು ನಾಲ್ಕು ಪ್ರಶ್ನೆಗಳನ್ನು ಕೇಳಿದ್ದೆ , ನನ್ನ ಪ್ರಶ್ನೆಗಳ ಬಳಿಕ 1.5 ಗಂಟೆ ಮೋದಿ ಭಾಷಣ ಮಾಡಿದರು, ಆದರೆ ನನ್ನ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ದೋಕ್ಲಾಮ್ದಲ್ಲಿ ಏನೇನು ನಡೀತು. ಚೀನಾ ಜಾಗ ವಶಪಡಿಸಿಕೊಂಡರೂ ಪ್ರಧಾನಿ ಅವರು ಚೀನಾ ಅಧ್ಯಕ್ಷರ ಜತೆ ಗುಜರಾತ್ ನಲ್ಲಿ ಉಯ್ಯಾಲೆ ಆಡುವಾಗ, ಚೀನಾದ ದೋಕ್ಲಾಮ್ ವಶ ಪಡಿಸಿಕೊಂಡರಲ್ಲ ಆವಾಗ ಏನ್ ಮಾಡ್ತಿದ್ದೀರಿ ಎಂದು ಅವರು . ಎಲ್ಲಿ ಹೋಯಿತು ಮೋದಿಯವರು 56 ಇಂಚಿನ ಎದೆ ಎಂದು ರಾಹುಲ್ ಪ್ರಶ್ನಿಸಿದರು.
ಪ್ರಧಾನಿ ಮೋದಿಯವರು ದೇಶದ ಜನರಿಗೆ ಉತ್ತರ ನೀಡಬೇಕು:
ಪ್ರಧಾನಿ ಮೋದಿ ಅವರು 600 ಕೋಟಿ ಏರ್ಕ್ರಾಫ್ಟ್ ಅನ್ನು 1600 ರೂ.ಗೆ ಖರೀದಿ ಮಾಡಿದ್ಯಾಕೆ? ಎಂದು ರಾಹುಲ್ ಗಾಂಧಿ ನಾವು ಜಾಗತಿಕ ಭಯೋತ್ಪಾದನೆಯನ್ನು ಮಟ್ಟ ಹಾಕಲು ನಮ್ಮ ಪಕ್ಷ ಸದಾ ಬದ್ಧವಿದೆ. ಆದರೆ ರಕ್ಷಣಾ ಇಲಾಖೆಯ ಅಧಿಕಾರಿ ಅಜಿತ್ ದೋವಲ್ ಉಗ್ರ ಮಸೂದ್ ಅಜರ್ ಅವರನ್ನ ಕಂದಾಹಾರಗೆ ಬಿಟ್ಟು ಬಂದ ಫೋಟೋ ನೆಟ್ನಲ್ಲಿ ಇದೆ. ಪುಲ್ವಾಮ ಘಟನೆಗೆ ಕಾರಣರಾದ ಮಸೂದ್ ಅಜರ್ನನ್ನು ಬಿಟ್ಟ ನೀವೇ ಈ ಘಟನೆಗೆ ಹೊಣೆ, ಮಸೂದ್ ಅಜರ್ ಅವರನ್ನ ಜೈಲಿನಿಂದ ಬಿಟ್ಟ ಪ್ರಧಾನಿಯವರು ಈ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಹಿಂದಿನ ಘಟನೆಯನ್ನು ಮೋದಿ ಅವರೇ ಮರೆತು ಬಿಟ್ಟಿದ್ದೀರಾ? ಎಂದು ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯ ಸರ್ಕಾರ ರೈತರ ಸಾಲಮನ್ನಾವನ್ನು ಲಾಲಿಪಾಪ್ ಎಂದು ಪ್ರಧಾನಿಯವರು ಟೀಕಿಸಿದ್ದರು. ಆದರೆ ಪ್ರಧಾನಿ ಮಾಡಿದ್ದಾದರೂ ಏನು? ಕಾಂಗ್ರೆಸ್ ಅಧಿಕಾರಕ್ಕೆ ಬಂದ 48 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ. ಅನಿಲ್ ಅಂಬಾನಿಗೆ ದೇಶದ ಜನರ 30 ಸಾವಿರ ಕೋಟಿ ಹಣವನ್ನ ಪ್ರಧಾನಿ ಕೊಟ್ಟಿದ್ದಾರೆ
ಅನಿಲ್?ಅಂಬಾನಿ ಜತೆ ಫ್ರಾನ್ಸ್ಗೆ ಭೇಟಿ ನೀಡಿದ್ದರು, ಹೆಚ್ಎಎಲ್ಗೆ ಕಾಂಟ್ರಾಕ್ಟ್ ನೀಡದೇ ಸ್ನೇಹಿತ ಅನಿಲ್ ಅಂಬಾನಿಗೆ ಕಾಂಟ್ರಾಕ್ಟ್ ನೀಡಿದ್ದಾರೆ. ಆಮೂಲಕ ದೇಶದ ಯುವ ಜನತೆಯನ್ನು ವಂಚಿಸಿದ್ದಾರೆ ಎಂದು ರಾಗ ರಾಗ ಎಳೆದರು. ನೋಟ್ ಬ್ಯಾನ್ ಪ್ರಧಾನಿ ಮೋದಿಅವರು ಕೈಗೊಂಡ ಮೂರ್ಖ ತೀರ್ಮಾನ ಎಂದ ರಾಹುಲ್ ಇದರಿಂದ ಅನೇಕ ಜನಸಾಮಾನ್ಯರು ಸಾವನ್ನಪ್ಪಿದರು, ಅನೇಕರು ತೊಂದರೆ ಅನುಭವಿಸಿದರು ಎಂದರು.
ಸಮಾವೇಶದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ ದೇಶದ ಚೌಕಿದಾರ ಚೋರ್ ರಾಗಿದ್ದಾರೆ. ಸುಳ್ಳಿನ ಸರದಾರ ಯಾರಾದರೂ ಇದ್ದರೆ ಅದು ಮೋದಿ ಅಂದ ಅವರು ದೇಶದ ರಕ್ಷಣಾ ಇಲಾಖೆಯಲ್ಲಿ ಇರುವ ರಫೇಲ್ ದಾಖಲೆ ಕಳ್ಳತನವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳುವ ಮಟ್ಟಿಗೆ ಇಳಿದಿದ್ದಾರೆ. ಇವರನ್ನು ಚೋರ್ ಎನ್ನದೇ ಬೇರೆ ಏನು ಹೇಳಬೇಕು. ನಿನ್ನೇ ದಿನ ಮಾತ್ರ ರಫೆಲ್ ದಾಖಲೆ ಕಳವು ಆಗಿಲ್ಲ ಎಂದು ಹೇಳುತ್ತಾರೆ. ಇವರನ್ನು ಹೇಗೆ ನಂಬಬೇಕು ಎಂದು ಅವರು ಹೇಳಿದರು.
ಹಾವೇರಿಯಲ್ಲಿ ನಡೆದ ಪರಿವರ್ತನಾ ರ್ಯಾಲಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ವಾಮ ಮಾರ್ಗದ ಮೂಲಕ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಬಿಜೆಪಿ ಮಾಡಬಾರದ ಕೆಲವನ್ನು ಮಾಡುತ್ತಿದೆ. ಇವರಿಗೆ ತಕ್ಕ ಪಾಠ ಕಲಿಸಲು ಜನರು ಮುಂದಾಗಬೇಕಿದೆ.
ಇಂದು ಮೋದಿ ಬರಿ ಸುಳ್ಳು ಹೇಳಿಕೊಂಡ ಕಾಲ ಹರಣ ಮಾಡುತ್ತಿದ್ದಾರೆ. ಇಂದು ಯಾವುದೇ ಅಭಿವೃದ್ಧಿ ಮಾಡದೇ, ಬರಿ ಪ್ರಚಾರಕ್ಕೆ ಸಾವಿರಾರು ಕೋಟಿ ಹಣ ಖರ್ಚು ಮಾಡುತ್ತಿದ್ದಾರೆ. ಜೊತೆಗೆ ಯುವಕರಿಗೆ ಉದ್ಯೋಗ ಕೊಡುವಲ್ಲಿ ವಿಫಲವಾಗಿದೆ.ಇಂದು ವ್ಯವಸ್ಥೆ ಏನಾಗಿದೆ ಎಂದರೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರೀಟಿಷರ್ ಗುಲಾಮರಾಗಿದ್ದವರು. ಇಂದು ದೇಶ ಭಕ್ತಿಯ ಪಾಠ ಮಾಡುತ್ತಿದ್ದಾರೆ. ಇಂದು ಮೋದಿ ಹಾಗೂ ಬಿಜೆಪಿ ವಿರುದ್ಧ ಮಾತನಾಡಿದರೆ, ದೇಶ ವಿರೋಧಿ ಪಟ್ಟ ಕೊಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.