
ನವದೆಹಲಿ: ರಾಮ ಜನ್ಮಭೂಮಿ -ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೇಮಿಸಿರುವ ತ್ರಿ ಸದಸ್ಯ ಸಮಿತಿಯಲ್ಲಿ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಅವರನ್ನು ನೇಮಿಸಿರುವುದಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರೋಧ ವ್ಯಕ್ತಪಡಿಸಿದ್ದಾರೆ.
ತಟಸ್ಥರಾಗಿರುವವರನ್ನು ಸಂದಾನ ಸಮಿತಿಯಲ್ಲಿ ಸುಪ್ರೀಂಕೋರ್ಟ್ ನೇಮಿಸಿದರೆ ಉತ್ತಮವಾಗುತ್ತದೆ. ರವಿಶಂಕರ್ ಗುರೂಜಿ ಏಕಪಕ್ಷೀಯ ನಿರ್ಧಾರ ಉಳ್ಳವರು ಅವರನೇಮಕ ಸಮಂಜಸವಲ್ಲ ಎಂದು ಓವೈಸಿ ಹೇಳಿದ್ದಾರೆ.
ಈ ನಡುವೆ ಟ್ವೀಟ್ ಮಾಡಿರುವ ರವಿಶಂಕರ್ ಗುರೂಜಿ, ಸಮಾಜದಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ಮೂಲಕ ದೀರ್ಘಕಾಲದ ಘರ್ಷಣೆಯನ್ನು ಅಂತ್ಯಗೊಳಿಸಲು ನಾವು ಎಲ್ಲರೂ ಒಟ್ಟಿಗೆ ಹೋಗಬೇಕು ಎಂದು ಹೇಳಿದ್ದಾರೆ.