
ಕೆಜಿಎಫ್, ಮಾ.7- ತೊಪ್ಪನಹಳ್ಳಿ ಕಾಡಿನ ಅಂಚಿನಲ್ಲಿರುವ ತೋಟದ ಮನೆಯಲ್ಲಿ ಭೀತಿಯನ್ನು ಉಂಟು ಮಾಡುತ್ತಿದ್ದ ಸುಮಾರು 11 ಅಡಿ ಉದ್ದದ ಹೆಬ್ಬಾವನ್ನು ಸ್ನೇಕ್ ರಾಜ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ತೊಪ್ಪನಹಳ್ಳಿಯ ಪಾಪಣ್ಣ ಎಂಬುವರ ತೋಟದಲ್ಲಿ ಹೆಬ್ಬಾವು ಸೇರಿಕೊಂಡಿತ್ತು. ಬಂಡೆ ಸಂದಿಯಲ್ಲಿದ್ದ ಅದು ಶಬ್ಧದ ಮೂಲಕ ಎಲ್ಲರನ್ನೂ ಬೆದರಿಸುತ್ತಿತ್ತು. ಭೀತಿಗೊಂಡ ಪಾಪಣ್ಣ ಅರಣ್ಯ ಇಲಾಖೆಯವರನ್ನು ಸಂಪರ್ಕಿಸಿ ಹಾವನ್ನು ಹಿಡಿಯುವಂತೆ ವಿನಂತಿಸಿದರು.
ಅರಣ್ಯ ಇಲಾಖೆಯವರು ಬೆಮಲ್ ನಗರದ ಸ್ನೇಕ್ ರಾಜ ಅವರನ್ನು ಸ್ಥಳಕ್ಕೆ ಕರೆಸಿಕೊಂಡರು.
ಸುಮಾರು ಒಂದು ಗಂಟೆಗಳ ನಡೆದ ಕಾರ್ಯಾಚರಣೆಯಲ್ಲಿ ಸ್ನೇಕ್ ರಾಜ 11 ಅಡಿ ಉದ್ದದ ಹಾವನ್ನು ಯಶಸ್ವಿಯಾಗಿ ಹಿಡಿದರು.
ನಂತರ ಹಾವನ್ನು ತಮಿಳುನಾಡಿನ ಗಡಿಯಲ್ಲಿ ಬಿಡಲಾಯಿತು.