
ಶ್ರೀ ಹರಿಕಥಾಮೃತ ಸಾರದಲ್ಲಿ ಭಗವಂತನ ವ್ಯಾಪ್ತಿಯ ಉಪಾಸನೆಯನ್ನು ಶ್ರೀ ಮಾನವಿ ದಾಸರು ಹೇಳಿದ್ದಾರೆ.
ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು
ಬಿಂಬೋಪಾಸನೆಯಲ್ಲಿ ಸಿದ್ಧಿಯನ್ನು ಪಡೆದ,ಶ್ರೀ ಐಕೂರು ನರಸಿಂಹ ಆಚಾರ್ಯರಿಗೆ,ಪರಮಾತ್ಮನ ವ್ಯಾಪ್ತತ್ವ ವನ್ನು ಕಾಣುವಂಥ ದಿವ್ಯ ಚಕ್ಷು ಅವರಿಗೆ ಲಭ್ಯವಾಗಿತ್ತು..
ಹೆಚ್ಚಾಗಿ
ಅವರು ಚಲ ಪ್ರತಿಮೆಗಳಲ್ಲಿಯೇ ಭಗವಂತನನ್ನು ಕಾಣುವಂಥ ವ್ಯಾಪ್ತೋಪಾಸಕರಾಗಿದ್ದರು..
ಒಂದು ಸಲ ತಮ್ಮ ಮನೆಯಲ್ಲಿ ಭಾಗವತ ಪುರಾಣ ಮಂಗಳ ಏರ್ಪಾಡಾಗಿತ್ತು.ನೂರಾರು ಜನ ಅತಿಥಿ, ಅಭ್ಯಾಗತರು ಇವರ ಮನೆಗೆ ಬಂದಿದ್ದರು.ಭಕ್ಚ್ಯ ಭೋಜ್ಯಗಳ ಅಡಿಗೆ ಸಿದ್ಧವಾಗಿತ್ತು.
ಘಮಘಮಿಸುವ ಹಾಲಿನ ಪಾಯಸವನ್ನು ನೋಡಿದ ಒಂದು ಮಗು (ಬಂದಂತಹ ಅತಿಥಿ ಗಳ ಪೈಕಿ) ತನಗೆ ಪಾಯಸ ಬೇಕೆಂದು ವಿಪರೀತ ಹಠ ಮಾಡಿತು…
ಆ ಮಗುವಿನ ತಂದೆ ತಾಯಿಗಳು ಎಷ್ಟೋ ಸಮಾಧಾನ ಮಾಡಿದರು ಆ ಮಗುವಿನ ಹಟ ಜೋರಾಯಿತೇ ಹೊರತು ಕಡಿಮೆಯಾಗಲಿಲ್ಲ.
ಪೂಜೆಯಲ್ಲಿ ಕುಳಿತ ಐಕೂರು ಆಚಾರ್ಯರಿಗೆ ಇದು ಕಿವಿಗೆ ಬಿದ್ದಿತು.
ತಕ್ಷಣವೇ
ದೇವರ ಕಟ್ಟಿ ಇಂದ ಎದ್ದು ಬಂದು ಆ ಕೂಸನ್ನು ಕರೆದರು..
ಆ ಮಗುವಿನ ತಂದೆ ತಾಯಿಗಳಿಗೆ ಆಚಾರ್ಯರು ಹೇಳ್ತಾರೆ
ಇಂದು ಈ ಪುಟ್ಟ ಗೋಪಾಲಕೃಷ್ಣ. ಪಾಯಸವನ್ನು ಆಪೇಕ್ಚಿಸಿದ್ದಾನೆ..
ಅದಕ್ಕೆ ನೀವುಗಳು ಯಾಕೆ ಅಡ್ಡಿ ಮಾಡ್ತಾ ಇದ್ದೀರಿ.??ಮೊದಲು ಆ ಕೂಸಿಗೆ ಪಾಯ
ಸ ಕುಡಿಸ್ರೀ..!!
ಪಾಯಸ ಒಂದು ಬಿಟ್ಟು ಉಳಿದ ಪದಾರ್ಥ ಗಳನ್ನೂ ದೇವರಿಗೆ ನೈವೇದ್ಯ ಮಾಡಿದರೆ ಆಯಿತು ಅಂತ ತಮ್ಮ ಪರಿವಾರದವರಿಗೆ ಹೇಳಿ ತಾವು ಹೋಗಿ ಪಾಯಸವನ್ನು ಬಟ್ಟಲಿನಲ್ಲಿ ತಂದು ಆ ಕೂಸಿನ ಮುಂದಿಟ್ಟು ಶ್ರೀಕೃಷ್ಣಾರ್ಪಣಮಸ್ತು ಅಂತ ಹೇಳಿ? ಕೈ ಮುಗಿದರು..
ಅದೇ ನಾವುಗಳು ಆಗಿದ್ದರೆ ಕೂಸಿಗೆ ಅವರ ಮನೆಯಾಗ ಇರುವವರಿಗೆಲ್ಲ ಬೈಯ್ದು ಇನ್ನೋಂದು ಸಾರಿ ಅವರು ಕೂಸಿನ ಕಟ್ಟಿಕೊಂಡು ಎಲ್ಲಿ ಬರಬಾರದು ಹಾಗೆ ಅವರಿಗೆ ಅನ್ನಿಸುವ ಹಾಗೆ ನಮ್ಮ ವರ್ತನೆ ಇರುತ್ತಾ ಇತ್ತು.
ಇಂತಹ ವಿಶಾಲ ಹೃದಯ ಸಾಮಾನ್ಯ ಜನರಲ್ಲಿ ಬರುವದು ಬಹು ಕಠಿಣ, ಹಾಗು ವಿರಳ.
ಶ್ರೀ ಐಕೂರು ಆಚಾರ್ಯರಂತ ಜ್ಞಾನಿಗಳಿಗೆ, ಈ ತರಹದ ಭಗವಂತನ ವ್ಯಾಪ್ತೊಪಾಸನೆಯ ಚಿಂತಕರಿಗೆ ಇದು ಮಾತ್ರ ಸಾಧ್ಯ..
ಶ್ರೀ ಐಕೂರು ಆಚಾರ್ಯರ ಅಂತರ್ಯಾಮಿಯಾದ ಶ್ರೀ ಹರಿ ಪ್ರೀತಿಯಾಗಲಿ.
ಶ್ರೀ ಕೃಷ್ಣಾರ್ಪಣಮಸ್ತು?
ಶ್ರೀ ಐಕೂರು ಆಚಾರ್ಯರ ಆರಾಧನಾ ಇಂದು ನಾಳೆ ಮತ್ತು ನಾಡಿದ್ದು
ಅದರ ಪ್ರಯುಕ್ತ ಅವರ ಬಗ್ಗೆ ಪುಟ್ಟ ಲೇಖನ.
??.
ರಂಗಂಪೇಟೆಯಲ್ಲಿ ಗುರುಸ್ವಾಮಿ,ನರಸಯ್ಯ ಅಂತ ಇಬ್ಬರು ಅಣ್ಣತಮ್ಮಂದಿರು, ವ್ಯಾಪಾರ ಅವರ ವೃತ್ತಿ.
ಶ್ರೀ ಐಕೂರು ಆಚಾರ್ಯರು ಅವರ ಅಂಗಡಿಇಂದ ಮನೆಗೆ ಬೇಕಾಗುವ ಸಾಮಾನುಗಳ ನ್ನು ತರಿಸುತ್ತಾ ಇದ್ದರು.
ಗುರುಸ್ವಾಮಿಗೆ ತೊನ್ನು ರೋಗ ಬಂದಾಗ,ಮಂತ್ರಾಲಯಕ್ಕೆ ಹೋಗಿ ರಾಯರ ಸೇವಾ ಮಾಡಬೇಕೆಂದು ನಿರ್ಧಾರ ಮಾಡಿದ.
ಅಂದೇ ರಾತ್ರಿ
ರಾಯರು ಅವನ ಸ್ವಪ್ನದಲ್ಲಿ ಕಾಣಿಸಿಕೊಂಡು
ಮಂತ್ರಾಲಯಕ್ಕೆ ಯಾಕ ಬರ್ತಿಯಾಪ್ಪಾ?ಐಕೂರಿನ್ಯಾಗ ನನ್ನ ಭಕ್ತ ನರಸಿಂಹಚಾರ ಅಂತ ಇದ್ದಾರೆ.ಅವರು ಊಟಕ್ಕೆ ಕುಳಿತಾಗ,ಎಲ್ಯಾಗಿನ ಉಚ್ಚಿಷ್ಟ ನಿನ್ನ ಕೈಯಾಗ ಹಾಕು ಅಂತ ಬೇಡಿಕೋ.ನಿನಗೆ ಛೊಲೋ ಆಗ್ತದಾ ಅಂತ ಸೂಚನೆ ಕೊಡುತ್ತಾರೆ..
ಸಮಯ ನೋಡಿಕೊಂಡು ಗುರುಸ್ವಾಮಿ ಐಕೂರಿಗೆ ಬಂದು ಆಚಾರ್ಯರು ಊಟಕ್ಕ ಕುಳಿತಾಗ ಹೋಗಿ ನಿಂತುಕೊಂಡ.
ಇದನ್ನು ಕಂಡ ಆಚಾರ್ಯರು ಊಟ ಮಾಡಿಕೊಂಡು ಹೋಗಿಯಂತ ಕೂಡು ಅಂತ ಹೇಳಿದರು..
ಅವಾಗ ಗುರುಸ್ವಾಮಿ
ಅಪ್ಪಾರ!! ನಂಗ ನಿಮ್ಮ ಎಲ್ಯಾಗಿನದು ಸ್ವಲ್ಪ ಉಚ್ಚಿಷ್ಟ ನಂಗ ಕೈಯಾಗೆ ಹಾಕ್ರೀ.. ಸ್ವಾಮೇರಾ ಅಂತ ಬಹು ದೈನ್ಯದಿಂದ ಬೇಡಿಕೊಂಡ.
ಅಚಾರ್ಯರು ಕಿಂಚಿತ್ತೂ ಯೋಚನೆ ಮಾಡದೆ ಅವನಿಗೆ ಕೈ ಒಡ್ಡು ಎಂದರು.ಆತ ಕೂಡಲೇ ಕೈ ಒಡ್ಡಿದ ತಕ್ಷಣ ಅವರ ಎಲೆಯಲ್ಲಿ ಇದ್ದ ಉಚ್ಚಿಷ್ಟ ಅವನ ಕೈಯಲ್ಲಿ ಬಿತ್ತು.
ಸ್ವಲ್ಪ ದಿನದಲ್ಲಿ ಅವನ ತೊನ್ನು ರೋಗ ವಾಸಿಯಾಯಿತು
ಮನೆಯ ಹಾಗು ಊರಿನವರಿಗೆ ಆಶ್ಚರ್ಯ ಹೇಗೆ ವಾಸಿಯಾಯಿತು ಅಂತ.ನಿಜ ವಿಷಯ ತಿಳಿದಾಗ ಜನರೆಲ್ಲ ಆಚಾರ್ಯರನ್ನು ಪ್ರಶಂಸೆಯನ್ನು ಮಾಡಿದಾಗ ಅವರ ಪ್ರಶಂಸೆ ಕೇಳಬಾರದೆಂದು ಆಚಾರ್ಯರು ಸಂಚಾರಕ್ಕೆ ಹೊರಡುತ್ತಾರೆ ಮತ್ತು ಆ ಗುರುಸ್ವಾಮಿಯ ಅಂಗಡಿಯ ಬಾಕಿ ಹಣವನ್ನು ಕೊಟ್ಟು ತಮ್ಮ ಮನೆಯವರೆಗೆ ಅಲ್ಲಿ ಇಂದ ಏನು ಸಾಮಾನು ತರಬ್ಯಾಡ್ರೀ!! ಅಂತ ಸೂಚನೆ ನೀಡುತ್ತಾರೆ
ಎಂತಹ ನಿರ್ಲಿಪ್ತತೆ,ಆಚಾರ್ಯರದ್ದು.
ಇಂತಹ ಘಟನೆಗಳು ನಡೆದಾಗ ಅವರು
ನಿತ್ಯ ಭಗವಂತನಲ್ಲಿ ಅತಿ ದೈನ್ಯದಿಂದ
ಇದು ನಿನ್ನ ಮಹಿಮಾ ಅಂತ ಎಲ್ಲಾ ರ ತಲ್ಯಾಗ ಹಾಕು ಸ್ವಾಮಿ..ನಂದು ಇದರಾಗ ಏನು ಇಲ್ಲ… ಅಂತ ಪ್ರಾರ್ಥನಾ ಮಾಡುತ್ತಾ ಇದ್ದರು.
ಇಂತಹ ಅನೇಕ ಶ್ರೀ ಹರಿಯ ಮಹಾತ್ಮೆ ಮತ್ತು ಅನೇಕ ಹರಿದಾಸರ ಹರಿಭಕ್ತರ ಚರಿತ್ರೆ ,ನಿತ್ಯ ಕೇಳುತ್ತಾ ಇರಬೇಕು…
ಪುನಃ ಪುನಃ ಕೇಳುತ್ತಾ ಓದುತ್ತಾ ಇರಬೇಕು…
ಹೇಗೆ ಮನೆಯಲ್ಲಿ ಕಸವನ್ನು ಒಂದೇರಡು ಬಾರಿ ಬಳಿದು ಸ್ವಚ್ಛ ಮಾಡುತ್ತೇವೆಯೋ.
ಹಾಗೇ ಇಂತಹ ವರ ಚರಿತ್ರೆ ಪದೇ ಪದೇ ಕೇಳಿದಾಗ ನಮ್ಮ ಮನಸ್ಸಿನ ಒಳಗಡೆ ಇರುವ ದುರ್ಬುದ್ದಿ ಗಳು ಸಹ ಹೋಗಿ ಮನಸ್ಸು ಸ್ವಚ್ಛ ವಾಗುತ್ತದೆ.
ಹಾಗಾಗಿ ಪದೇ ಪದೇ ಭಗವಂತನ ಮತ್ತು ಅವನ ಭಕ್ತರ ಚರಿತ್ರೆ ನಿತ್ಯ ಕೇಳಬೇಕು…
ಶ್ರೀ ಐಕೂರು ಆಚಾರ್ಯರು ಅಂತರ್ಯಾಮಿಯಾದ ಶ್ರೀ ಹರಿ ಪ್ರೀತಿಯಾಗಲಿ.
ಶ್ರೀ ಕೃಷ್ಣಾರ್ಪಣಮಸ್ತು?
ಪ್ರಾತಃ ಕಾಲ ಇಂತಹ ಮಹಾನುಭಾವ ರ ಸ್ಮರಣೆ ಅವಶ್ಯಕ.
??
ಧರಣಿ ವಲಯದಿ ಇವರ ಚರಿತೆ ತಿಳಿಯದೆ|
ಜರಿವ ಮನುಜರು ಘೋರ ನಿರಯ ಪಾತ್ರರು|
?ಅ.ವಿಜಯವಿಠ್ಠಲ?
ಚಿತ್ರ ಲೇಖನ.
??.
ಶ್ರೀ ಐಕೂರು ಆಚಾರ್ಯರು ಕಟ್ಟಿ ಚಿತ್ರ ಇವತ್ತಿನದು .
?ಅ.ವಿಜಯವಿಠ್ಠಲ ?