ನಾನಿನ್ನೂ ಬದುಕಿದ್ದೇನೆ; ಆರೋಗ್ಯವಾಗಿಯೇ ಇದ್ದೇನೆ: ಉಗ್ರ ಮಸೂದ್ ಅಜರ್ ಆಡಿಯೋ ಬಿಡಿಗಡೆ

ಇಸ್ಲಾಮಾಬಾದ್​: ಜೈಷ್ ಇ ಮೊಹಮ್ಮದ್ ಮುಖ್ಯಸ್ಥ ಮಸೂದ್​ ಅಜರ್​ ಸಾವನ್ನಪ್ಪಿದ್ದಾನೆ, ಆತನ ಆರೋಗ್ಯ ಹದಗೆಟ್ಟಿದೆ ಎಂಬೆಲ್ಲ ಸುದ್ದಿಗಳು ಕೇಳಿಬಂದ ಹಿನ್ನಲೆಯಲ್ಲೇ ಹೇಳಿಕೆ ನೀಡಿರುವ ಉಗ್ರ ಮಸೂದ್ ಅಜರ್, ನಾನು ಜೀವಂತವಾಗಿದ್ದೇನೆ. ಆರೋಗ್ಯವಾಗಿಯೇ ಇದ್ದೇನೆ. ಭಾರತದ ವಿರುದ್ಧ ಜಿಹಾದಿ ಅನುಯಾಯಿಗಳನ್ನು ಸಜ್ಜುಗೊಳಿಸುತ್ತಿದ್ದೇನೆ ಎಂದು ತಿಳಿಸಿದ್ದಾನೆ.

ಸ್ವತಃ ಮಸೂದ್​ ಅಝರ್​ ಮಾತನಾಡಿರುವ ಆಡಿಯೋ ಕ್ಲಿಪ್​ ಬಿಡುಗಡೆಯಾಗಿದ್ದು, ತಾನಿನ್ನೂ ಬದುಕಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

ಅಜರ್​ನ 11.41 ನಿಮಿಷದ ಆಡಿಯೋ ಬಿಡುಗಡೆಗೊಂಡಿದ್ದು, ನಾನು ಮೃತಪಟ್ಟಿದ್ದೇನೆಂದು ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ವರದಿ ಮಾಡಲಾಗುತ್ತಿದೆ. ನಾನು ಚೆನ್ನಾಗಿಯೇ ಇದ್ದೇನೆ. ಅಲ್ಲದೆ ಭಾರತದ ವಿರುದ್ಧ ಹೋರಾಟ ಮಾಡಲು, ಕಾಶ್ಮೀರಿಗಳನ್ನು ಹತ್ತಿಕ್ಕಲು ನನ್ನ ಬೆಂಬಲಿಗರನ್ನು ಅಣಿಗೊಳಿಸುತ್ತಿದ್ದೇನೆಂದು ಹೇಳಿದ್ದಾನೆ.

ಮಸೂದ್​ ಅಝರ್​ ಆರೋಗ್ಯದಲ್ಲಿ ಏರುಪೇರಾಗಿದ್ದು, ಆತ ಮನೆಯಿಂದ ಹೊರಬರಲೂ ಸಾಧ್ಯವಿಲ್ಲದಂಥ ಸ್ಥಿತಿಯಲ್ಲಿದ್ದಾನೆ ಎಂದಿದ್ದ ಪಾಕ್​ ವಿದೇಶಾಂಗ ಸಚಿವ ಖುರೇಶಿ ಪರ ಮಾತನಾಡಿದ ಅಝರ್​, ವಿದೇಶಾಂಗ ಸಚಿವರು ಯಾವುದೋ ಒತ್ತಡಕ್ಕೆ ಮಣಿದು ಹೀಗೆ ಹೇಳಿಕೆ ನೀಡಿದ್ದಾರೆ ಎಂದಿದ್ದಾನೆ.

Jaish Chief Masood Azhar Quashes Rumours of Death With New Audio Clip

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ