ಕಾಶ್ಮೀರಿ ವ್ಯಾಪಾರಿಗಳಿಬ್ಬರನ್ನು ಮನಬಂದಂತೆ ದೊಣ್ಣೆಯಿಂದ ಥಳಿಸಿದ ಕಾರ್ಯಕರ್ತರು

ಲಖನೌ: ಬೀದಿ ಬದಿ ಡ್ರೈಫ್ರೂಟ್ಸ್ ವ್ಯಾಪಾರ ಮಾಡುತ್ತಿದ್ದ ಕಾಶ್ಮೀರಿ ಮೂಲದ ಇಬ್ಬರು ವ್ಯಾಪಾರಿಗಳನ್ನು ಸಾಮಾಜಿಕ ಕಾರ್ಯಕರ್ತರು ಮನಬಂಧಂತೆ ಥಳಿಸಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಲಖನೌ ನಲ್ಲಿ ನಡೆದಿದೆ.

ಲಕ್ನೋನ ಡಾಲಿಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ದೃಶ್ಯವನ್ನು ಕೆಲವರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಘಟನೆ ಬಳಿಕ ಪೊಲೀಸರು ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ತಮ್ಮ ಪಾಡಿಗೆ ಬಿದಿಬದಿ ವ್ಯಾಪಾರ ಮಾಡುತ್ತಿದ್ದ ಇಬ್ಬರು ಕಾಶ್ಮೀರಿ ವ್ಯಾಪಾರಿಗಳಿಗೆ ದೊಣ್ಣೆ ಹಿಡಿದು ಬಂದ ವ್ಯಕ್ತಿ ಏಕಾಏಕಿ ಹೊಡೆಯಲು ಆರಂಭಿಸಿದ್ದಾನೆ. ಕೇಸರಿ ಬಣ್ಣದ ಬಟ್ಟೆ ಧರಿಸಿದ್ದ ಗುಂಪೊಂದು ವ್ಯಾಪಾರಿಗಳಿಗೆ ಮನಬಂದಂತೆ ಥಳಿಸಿದೆ. ಈ ಕುರಿತ ದೃಶ್ಯ ಈಗ ವೈರಲ್ ಆಗಿದೆ.

ಯಾಕೆ ನಮ್ಮನ್ನು ಹೊಡೆಯುತ್ತಿದ್ದೀರಿ ಎಂದು ವ್ಯಾಪಾರಿಗಳು ಪ್ರಶ್ನಿಸಿದ್ದಕ್ಕೆ, ನೀವು ಕಾಶ್ಮೀರದವರು ಅದಕ್ಕೆ ನಿಮ್ಮನ್ನು ಹೊಡೆಯುತ್ತಿದ್ದೇವೆ ಅಂತ ಆರೋಪಿಗಳು ಉತ್ತರಿಸಿದ್ದಾರೆ. ಸುತ್ತ ಮುತ್ತಲ ಜನರು ಬಂದು ಕಾಶ್ಮೀರಿ ವ್ಯಾಪಾರಿಗಳು ರಕ್ಷಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

Called Terrorists, Asked For Aadhaar”: Kashmiri Men Thrashed In Lucknow

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ