ಪುಲ್ವಾಮಾ ಉಗ್ರರ ದಾಳಿ ಪ್ರಧಾನಿ ಮೋದಿ- ಇಮ್ರಾನ್ ಖಾನ್ ನಡುವಿನ ಮ್ಯಾಚ್ ಫಿಕ್ಸಿಂಗ್ ಎಂದ ಬಿ.ಕೆ.ಹರಿಪ್ರಸಾದ್

ಬೆಂಗಳೂರು: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಡುವೆ ಮೊದಲೇ ಆಗಿದ್ದ ಮ್ಯಾಚ್ ಫಿಕ್ಸಿಂಗ್ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪುಲ್ವಾಮಾ ದಾಳಿ ಬಗ್ಗೆ ಮಾತನಾಡಿರುವ ಹರಿಪ್ರಸಾದ್, ಗೋಮಾಂಸವನ್ನು ಪತ್ತೆ ಹಚ್ಚುವ ಬಿಜೆಪಿ ನಾಯಕರಿಗೆ ಗಡಿಯಲ್ಲಿ ಇದ್ದ ಆರ್ ಡಿ ಎಕ್ಸ್ ಪತ್ತೆ ಹಚ್ಚಲು ಆಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ 350 ಕೆಜಿ ಆರ್ ಡಿಎಕ್ಸ್ ಪುಲ್ವಾಮಾ ಪ್ರದೇಶಕ್ಕೆ ಹೇಗೆ ಬಂತು? ಇದು ಪ್ರಧಾನಿ ಮೋದಿಗೆ ಗೊತ್ತಿಲ್ಲವೇ? ಪುಲ್ವಾಮ ದಾಳಿ ಪ್ರಧಾನಿ ಮೋದಿ ಮತ್ತು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ನಡುವಿನ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರು ಸಾಗುತ್ತಿದ್ದ ಬಸ್ ಗೆ ಜೈಶ್ ಎ ಮೊಹಮ್ಮದ್ ಉಗ್ರ ಆರ್ ಡಿ ಎಕ್ಸ್ ತುಂಬಿದ್ದ ಕಾರನ್ನು ಗುದ್ದಿ ಸ್ಫೋಟ ಕ್ಕೆ ಕಾರಣವಾಗಿದ್ದ. ಈ ಭೀಕರ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು.

BK Hariprasad Controversial Statement: PM Modi had a match fixing with Pakistan over Pulwama Attack

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ