ಭಾರತದ ಮೂರನೇ ಕ್ಲೀನೆಸ್ಟ್ ನಗರವಾಗಿ ಮೈಸೂರು ಆಯ್ಕೆ

ಬೆಂಗಳೂರು, ಮಾ.6- ಭಾರತದ ಮೂರನೆ ಕ್ಲೀನೆಸ್ಟ್ ಸಿಟಿಯಾಗಿ ಸಾಂಸ್ಕøತಿಕ ನಗರಿ ಮೈಸೂರು ಆಯ್ಕೆಯಾಗಿದ್ದು, ಈ ಬಾರಿಯೂ ಬೆಂಗಳೂರಿಗೆ ಕ್ಲೀನ್ ಸಿಟಿಯ ಭಾಗ್ಯ ದೊರೆಯಲಿಲ್ಲ.

ಕಳೆದ ಎರಡು ವರ್ಷಗಳ ಹಿಂದೆ ಮೈಸೂರು ಸ್ವಚ್ಛ ನಗರಿ ಎಂದು ದೇಶದಲ್ಲೇ ಪ್ರಥಮ ಸ್ಥಾನ ಪಡೆದಿತ್ತು. ಈ ಬಾರಿ ಮೈಸೂರು ಮತ್ತು ಬೆಂಗಳೂರು ಎರಡಕ್ಕೂ ಪ್ರಶಸ್ತಿಯ ನಿರೀಕ್ಷೆ ಮಾಡಲಾಗಿತ್ತು. ಆದರೆ, ಮೈಸೂರು ಮೈಸೂರು ಮೂರನೆ ಸ್ಥಾನ ಪಡೆದರೆ ಬೆಂಗಳೂರು ಲಿಸ್ಟ್ಗೆ ಇಲ್ಲದಂತಾಗಿದೆ.

ಸ್ವಚ್ಛ ನಗರಿ ಸ್ಥಾನ ಪಡೆಯಲು ಅಧಿಕಾರಿಗಳು ನಡೆಸಿದ ಪ್ರಯತ್ನ ಹೊಳೆಯಲ್ಲಿ ಹುಣಸೆಹಣ್ಣು ಕದರಿದಂತಾಗಿದೆ. ದೇಶದಲ್ಲಿ ಅತ್ಯಂತ ಸ್ವಚ್ಛ ನಗರಿ ಎಂದು ಇಂದೋರ್ ಪ್ರಥಮ ಸ್ಥಾನ ಪಡೆದುಕೊಂಡರೆ, ಎರಡನೆ ಸ್ಥಾನ ಅಂಬಿಕಾಪುರಿ ಪಾಲಾಗಿದ್ದು, ಮೂರನೆ ಸ್ಥಾನಕ್ಕೆ ಮೈಸೂರು ತೃಪ್ತಿಪಟ್ಟುಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ