ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಇಂದು ಮುಂಜಾನೆ ಭಾರತೀಯ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ.
ಪುಲ್ವಾಮಾದ ತ್ರಾಲ್ನಲ್ಲಿ ಭಾರತೀಯ ಭದ್ರತಾಪಡೆಯ ಸಿಬ್ಬಂದಿ ಮೂವರು ಉಗ್ರರನ್ನು ಸುತ್ತುವರೆದು ಎನ್ಕೌಂಟರ್ ನಡೆಸಿದ್ದರು. ಈ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ನಮ್ಮ ಯೋಧರು ಎನ್ಕೌಂಟರ್ ಮಾಡಿದ್ದಾರೆ. ತ್ರಾಲ್ನ ಮನೆಯೊಂದರಲ್ಲಿ ಇಬ್ಬರು ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ದೊರಕಿತ್ತು. ಈ ಮಾಹಿತಿಯ ಆಧಾರದ ಮೇಲೆ ಉಗ್ರರನ್ನು ಭದ್ರತಾ ಪಡೆಯ ಸಿಬ್ಬಂದಿ ಸುತ್ತುವರೆದಿದ್ದು, ಎನ್ಕೌಂಟರ್ ನಡೆಸಲಾಗಿದೆ.
ಎನ್ಕೌಂಟರ್ ನಡೆದ ಹಿನ್ನೆಲೆಯಲ್ಲಿ ಪುಲ್ವಾಮಾದಲ್ಲಿ ಮೊಬೈಲ್ ನೆಟ್ವರ್ಕ್ ಸ್ಥಗಿತಗೊಳಿಸಲಾಗಿದೆ. ಇದೇ ಪುಲ್ವಾಮಾದಲ್ಲಿ ಕಳೆದ ತಿಂಗಳು 14ರಂದು ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿ 40 ಸಿಆರ್ಪಿಎಫ್ ಯೋಧರನ್ನು ಬಲಿಪಡೆದಿದ್ದರು. ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮದ್ ಸಂಘಟನೆ ಈ ದಾಳಿಯನ್ನು ನಡೆಸಿತ್ತು. ಇದಕ್ಕೆ ಪ್ರತೀಕಾರಾವಗಿ ಭಾರತೀಯ ಯುದ್ಧ ವಿಮಾನಗಳು ಪಾಕಿಸ್ತಾನದ ಬಾಲಕೋಟ್ನಲ್ಲಿರುವ ಜೈಷ್ ಸಂಘಟನೆಯ ಅತಿದೊಡ್ಡ ತರಬೇತಿ ಶಿಬಿರವನ್ನು ಧ್ವಂಸಗೊಳಿಸಿತ್ತು.