ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಹುತಾತ್ಮನಾದ ಯೋಧನ ಪಾರ್ಥಿವ ಶರೀರ ಸ್ವೀಕರಿಸಲು ಬಾರದ ಎನ್ ಡಿಎ ನಾಯಕರು

ಪಟನಾ: ಬಿಹಾರ ಮೂಲದ ಸಿಆರ್‌ಪಿಎಫ್ ಇನ್ಸ್ ಪೆಕ್ಟರ್ ಪಿಂಟು ಕುಮಾರ್ ಸಿಂಗ್ ಅವರು, ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯ ವೇಳೆ ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಶುಕ್ರವಾರ ಹುತಾತ್ಮರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಇಂದು ಪಾಟ್ನಾ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ರಾಜ್ಯದ ಯೋಧನೊಬ್ಬರ ಪಾರ್ಥಿವ ಶರೀರವನ್ನು ಸ್ವೀಕರಿಸಿ, ಅಂತಿಮ ನಮನ ಸಲ್ಲಿಸಲು ಸಿಎಂ ನಿತೀಶ್ ಕುಮಾರ್ ರಿಂದ ಹಿಡಿದು ಸರ್ಕಾರದ ಯಾವೊಬ್ಬ ಪ್ರತಿನಿಧಿ ಕೂಡ ಬಾರದಿರುವುದು ಯೋಧನ ಸಂಬಂಧಿಕರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕುಪ್ವಾರದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯ ವೇಳೆ ಮಡಿದ ಬಿಹಾರ ಮೂಲದ ಸಿಆರ್​ಪಿಎಫ್​ ಇನ್ಸ್​ಪೆಕ್ಟರ್​ ಪಿಂಟು ಕುಮಾರ್​ ಸಿಂಗ್​ ಅವರ ಪಾರ್ಥಿವ ಶರೀರವನ್ನು ಇಂದು ಪಟನಾ ವಿಮಾನ ನಿಲ್ದಾಣಕ್ಕೆ ಹೊತ್ತು ತರಲಾಗಿದ್ದರೂ ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಯೋಧನ ಪಾರ್ಥೀವ ಶರೀರವನ್ನು ಸ್ವೀಕರಿಸುವ ವೇಳೆ ಇರಲಿಲ್ಲ.

ಅಲ್ಲದೆ, ಇಂದು ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಕಲ್ಪ ಯಾತ್ರೆ ನಡೆಯುತ್ತಿದ್ದು, ಇಡೀ ಎನ್​ಡಿಎ ಮೈತ್ರಿ ಕೂಟದ ನಾಯಕರೂ ಅಲ್ಲಿ ಬೀಡು ಬಿಟ್ಟಿದ್ದಾರೆ. ಆದರೂ, ಎನ್​ಡಿಎಯ ಯಾವೊಬ್ಬ ನಾಯಕರೂ ಯೋಧನ ಪಾರ್ಥಿವ ಶರೀರ ಸ್ವೀಕರಿಸಲು ಆಗಮಿಸಿಲ್ಲ ಎಂಬುದು ಬೇಸರದ ಸಂಗತಿ.

ಜಿಲ್ಲಾಧಿಕಾರಿ ಕುಮಾರ್​ ರವಿ, ಹಿರಿಯ ಪೊಲೀಸ್​ ಅಧಿಕಾರಿ ಗರಿಮಾ ಮಲ್ಲಿಕ್​, ಸಿಆರ್​ಪಿಎಫ್​ನ ಅಧಿಕಾರಿಗಳು, ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ಮದನ್​ ಮೋಹನ್​ ಜಾ, ಲೋಕ ಜನಶಕ್ತಿ ಪಕ್ಷದ ಚೌದ್ರಿ ಮೆಹಬೂಬ್​ ಅಲಿ ಕೈಸರ್​ ಪಟನಾ ಏರ್​ಪೋರ್ಟ್​ ಆಗಮಿಸಿ, ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿರುವ ಯೋಧ ಸಿಂಗ್​ ಅವರ ಸೋದರ ಸಂಬಂಧಿ, ” ರಾಜ್ಯದ ಯೋಧನೊಬ್ಬನ ಪಾರ್ಥಿವ ಶರೀರ ರಾಜ್ಯಕ್ಕೆ ಬರುತ್ತಿದ್ದರೂ, ಮುಖ್ಯಮಂತ್ರಿ ತಲೆಕೆಡಿಸಿಕೊಂಡಿಲ್ಲ. ಇದು ಅತ್ಯಂತ ದುರದೃಷ್ಟಕರ ಎಂದು ಹೇಳಿದ್ದಾರೆ.

On Rally Day, No NDA Leader At Patna Airport To Receive Soldier’s Body

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ