56 ಗಂಟೆಗಳ ಕುಪ್ವಾರಾ ಕಾರ್ಯಾಚರಣೆ ಅಂತ್ಯ; ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಕುಪ್ವಾರಾದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ 56 ಗಂಟೆಗಳಿಂದ ನಡೆದಿದ್ದ ಗುಂಡಿನ ಚಕಮಕಿ ಅಂತ್ಯಗೊಂಡಿದೆ. ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಆದರೆ ಭದ್ರತಾಪಡೆಯ ಐವರು ಸಿಬ್ಬಂದಿ ಹುತಾತ್ಮರಾಗಿದ್ದಾರೆ.

ಶುಕ್ರವಾರ ಬೆಳಗ್ಗೆ ಆರಂಭವಾದ ಕಾರ್ಯಾಚರಣೆ ನಾಗರಿಕನೊಬ್ಬನ ಸಾವಿನ ಬಳಿಕ ಚುರುಕು ಪಡೆದುಕೊಂಡಿತ್ತು. ಸತ್ತಂತೆ ನಟಿಸಿದ್ದ ಉಗ್ರನೊಬ್ಬ ಹಠಾತ್ತನೆ ಮೇಲೆದ್ದು ಗುಂಡಿನ ದಾಳಿ ನಡೆಸಿದ್ದರಿಂದ ಸಿಆರ್​ಪಿಎಫ್​ನ ಮೂವರು ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್​ ಪಡೆಯ ಇಬ್ಬರು ಅಧಿಕಾರಿಗಳು ಹುತಾತ್ಮರಾಗಿದ್ದರು.

ಅಂತಿಮವಾಗಿ 56 ಗಂಟೆಗಳ ಉಗ್ರರ ವಿರುದ್ಧದ ಕಾರ್ಯಾಚರಣೆ ಇಬ್ಬರು ಉಗ್ರರ ಹತ್ಯೆಯೊಂದಿಗೆ ಕೊನೆಗೊಂಡಿದೆ.

56-hour-long Kupwara encounter ends; 5 security personnel, 2 terrorists killed

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ