ಭಾರತ ದಾಳಿ ನಡೆಸಿದ್ದ ಸ್ಥಳದಿಂದ 35 ಉಗ್ರರ ಶವ ಸಾಗಿಸಿದ್ದ ಪಾಕ್ ಸೇನೆ

ಇಸ್ಲಾಮಾಬಾದ್: ಭಾರತೀಯ ವಾಯುಪಡೆ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಬಾಲಕೋಟ್ ಕ್ಯಾಂಪ್ ಮೇಲೆ ನಡೆಸಿದ ವೈಮಾನಿಕದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಭಾರತ ಹಾಕಿರುವ ಬಾಂಬ್ ಖಾಲಿ ಪ್ರದೇಶದಲ್ಲಿ ಬಿದ್ದಿದೆ ಎಂಬ ಹೆಳಿಕೆಯನ್ನು ಪಾಕ್ ಸೇನೆ ವಾದಿಸುತ್ತಲೆ ಇತ್ತು. ಆದರೆ ಭಾರತ ಬಾಲ್ ಕೋಟ್ ಉಗ್ರರ ಕ್ಯಾಂಪ್ ಧ್ವಂಸಗೊಳಿಸಿಇದ ಬಳಿಕ 35 ಉಗ್ರರ ಶವಗಳನ್ನು ಪಾಕ್ ಸೇನೆ ಆಂಬುಲೆನ್ ಮೂಲಕ ಸಾಗಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಭಾರತೀಯ ವಾಯು ಪಡೆ ನಡೆಸಿದ್ದ ದಾಳಿ ಬಳಿಕ ಪಾಕ್ ನಿವಾಸಿಗಳೇ 35 ಶವಗಳನ್ನು ಸಾಗಿಸಿದ ದೃಶ್ಯ ನೋಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಭಾರತೀಯ ವಾಯು ಪಡೆಯ ಮಿರಜ್2000 ಯುದ್ಧ ವಿಮಾನದ ಮೂಲಕ ಬಾಲಕೋಟ್ ಉಗ್ರರ ಶಿಬಿರದ ಮೇಲೆ ಫೆಬ್ರವರಿ 26ರಂದು ದಾಳಿ ಮಾಡಲಾಗಿತ್ತು. ಹೀಗಾಗಿ ದಾಳಿ ನಡೆದ ಸ್ಥಳಕ್ಕೆ ಸಾರ್ವಜನಿಕರು ಹೋಗದಂತೆ ಪಾಕ್ ಸೈನ್ಯ ಸುತ್ತುವರಿದಿತ್ತು. ಅಷ್ಟೇ ಅಲ್ಲದೆ ಘಟನಾ ಸ್ಥಳದ ಸಮೀಪದ ಠಾಣೆಯ ಪೊಲೀಸರಿಗೂ ಅವಕಾಶ ಕೊಡಲಿಲ್ಲವೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ವಿದೇಶಿ ಪ್ರತಕರ್ತೆಯೊಬ್ಬರು ವರದಿ ಮಾಡಿದ್ದಾರೆ.

ವಿದೇಶಿ ಪತ್ರಕರ್ತೆ ಫ್ರಾನ್ಸೆಸ್ಸಾ ಮಾರಿನೋ ಎಂಬವರು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆಹಾಕಿ ಪಾಕಿಸ್ತಾನದ ಸುಳ್ಳು, ಮೊಂಡುವಾದವನ್ನು ವರದಿಯ ಮೂಲಕ ಬಯಲು ಮಾಡಿದ್ದಾರೆ. ತನಗೆ ಸಿಕ್ಕ ಮಾಹಿತಿಗಳ ಪ್ರಕಾರ 40-50 ಉಗ್ರರು ಈ ದಾಳಿಯಲ್ಲಿ ಹತರಾಗಿದ್ದಾರೆ ಎಂದು ಮಾರಿನೋ ಹೇಳಿದ್ದಾರೆ.

ಪಾಕಿಸ್ತಾನದ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿ ಕರ್ನಲ್​ ಸಲೀಂ ಎಂಬುವರು ದಾಳಿಗೆ ಬಲಿಯಾಗಿದ್ದಾರೆ. ಹಾಗೇ ಕರ್ನಲ್​ ಝರಾರ್​ ಝಕ್ರಿ ಗಾಯಗೊಂಡಿದ್ದಾರೆ. ಜೈಶ್​-ಎ ಮೊಹಮ್ಮದ್​ ಸಂಘಟನೆಯಲ್ಲಿ ತರಬೇತುದಾರನಾಗಿದ್ದ ಪೇಶಾವರ ಮೂಲದ ಮುಫ್ತಿ ಮುಯೀನ್​, ಸುಧಾರಿತ ಸ್ಫೋಟಕಗಳ ತಯಾರಿಕಾ ತಜ್ಞ ಉಸ್ಮಾನ್​ ಘನಿ ಎಂಬುವರು ಕೂಡ ಹತರಾಗಿದ್ದಾರೆಂದು ಪತ್ರಕ್ಷ್ಯದರ್ಶಿಗಳು ಖಚಿತ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ari stricke, balkot,deadbody,pakistan-army

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ