
ಬೀಜಿಂಗ್: ಪಾಕಿಸ್ಥಾನ ಬೆನ್ನಿಗೆ ನಿಂತು, ಭಾರತದ ರಾಜತಾಂತ್ರಿಕ ಕೂಗಿಗೆ ಮನ್ನಣೆ ನೀಡದ ಚೀನಾ ಇದೀಗ ಎರಡೂ ರಾಷ್ಟ್ರಗಳನ್ನು ನ್ಯೂಕ್ಲಿಯರ್ ರಾಷ್ಟ್ರಗಳೆಂದು ತಾನು ಪರಿಗಣಿಸಿಯೇ ಇಲ್ಲ ಎಂದು ಹೇಳಿದೆ.
ದಕ್ಷಿಣ ಕೊರಿಯಾವನ್ನು ನ್ಯೂಕ್ಲಿಯರ್ ದೇಶವೆಂದು ಚೀನಾ ಪರಿಗಣಿಸಿ, ಕಿಮ್ ಹಾಗೂ ಟ್ರಂಪ್ರ ನ್ಯೂಕ್ಲಿಯರ್ ಒಪ್ಪಂದ ಮುರಿದು ಬಿದ್ದಿದ್ದರ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಇಂತಹ ಹೇಳಿಕೆ ನೀಡಿದೆ.
ಚೀನಾ ಎಂದಿಗೂ ಭಾರತ ಹಾಗೂ ಪಾಕಿಸ್ತಾನವನ್ನು ನ್ಯೂಕ್ಲಿಯರ್ ದೇಶಗಳು ಎಂದು ಪರಿಗಣಿಸಿಯೇ ಇಲ್ಲ. ಅಲ್ಲದೆ, ನಮ್ಮ ಈ ನಿಲುವು ಎಂದಿಗೂ ಬದಲಾಗುವುದಿಲ್ಲ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲು ಕಾಂಗ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಚೀನಾ ಈಗಾಗಲೆ, ನ್ಯೂಕ್ಲಿಯರ್ ಪೂರೈಕೆದಾರರ ಗುಂಪಿ(NSG)ನಿಂದ ಭಾರತವನ್ನು ಬ್ಲಾಕ್ ಮಾಡಿದೆ. ಕಾರಣ ಭಾರತವು ನ್ಯೂಕ್ಲಿಯರ್ ಪ್ರಸರಣ ಮಾಡದ ಒಪ್ಪಂದ (NPT)ಕ್ಕೆ ಸಹಿ ಹಾಕಿಲ್ಲ. ಭಾರತ ಎನ್ಎಸ್ಜಿ ಗುಂಪಿನಲ್ಲಿ ಸದಸ್ಯತ್ವ ಪಡೆಯಲು ಅರ್ಜಿ ಸಲ್ಲಿಸಿದ ಬೆನ್ನಲ್ಲೆ, ಪಾಕ್ ಸಹ ಸಲ್ಲಿಸಿತ್ತು. ಇದಕ್ಕೆ ಆಕ್ಷೇಪ ಮಾಡಿದ್ದ ಚೀನಾ ಮೊದಲು ಎರಡೂ ರಾಷ್ಟ್ರಗಳು ಎನ್ಪಿಟಿಯಿಂದ ಎನ್ಎಸ್ಜಿ ರಾಷ್ಟ್ರಗಳಾಗಬೇಕು. ಆನಂತರ ಮುಂದಿನ ಮಾತಕತೆ ಎಂದಷ್ಟೇ ಹೇಳಿತ್ತು.