ನವದೆಹಲಿ: ಭಯೋತ್ಪಾದನೆ ಅನೇಕ ಜೀವಗಳನ್ನು ಬಲಿ ಪಡೆಯುತ್ತಿದೆ. ಪ್ರಾಂತ್ಯಗಳನ್ನು ಅಸ್ಥಿರಗೊಳಿಸುತ್ತಿದೆ ಹಾಗೂ ಇಡೀ ವಿಶ್ವವನ್ನೇ ಗಂಡಾಂತರಕ್ಕೆ ನೂಕುತ್ತಿದೆ. ಭಯೋತ್ಪಾದನಾ ಸಂಘಟನೆಗಳಿಗೆ ಬೆಂಬಲ ನೀಡುವ ಮತ್ತು ಹಣಕಾಸಿನ ನೆರವನ್ನು ಒದಗಿಸುತ್ತಿರುವ ದೇಶಗಳು ಅವುಗಳನ್ನು ನಿಲ್ಲಿಸುವಂತೆ ಒತ್ತಡ ಹೇರಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಇಸ್ಲಾಮಿಕ್ ಸಂಘಟನೆಗಳ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಗೆಸ್ಟ್ ಆಫ್ ಆನರ್ ಸಲ್ಲಿಕೆ ಮಾಡಲಾಯಿತು. ಈ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭಾರತ 1.3 ಬಿಲಿಯನ್ ಹಾಗೂ 185 ಮಿಲಿಯನ್ ಮುಸ್ಲಿಂ ಸಹೋದರ ಹಾಗೂ ಸಹೋದರಿಯರು, ಭಾರತದ ವೈವಿದ್ಯತೆಯ ಭಾಗವಾಗಿದ್ದಾರೆ. ಭಾರತ ಮುಸ್ಲಿಂ ಸಮುದಾಯದ ನಂಬಿಕೆ ಹಾಗೂ ಸಾಮರಸ್ಯದ ಬದುಕಿನ ಬಗ್ಗೆ ಗೌರವ ನೀಡುತ್ತದೆ. ನಾವು ವೈವಿಧ್ಯತೆಯಲ್ಲಿ ಏಕತೆಯನ್ನ ಕಾಣಬಯಸುತ್ತೇವೆ ಎಂದು ಸುಷ್ಮಾ ಸ್ವರಾಜ್ ಘೋಷಿಸಿದರು.
ಭಯೋತ್ಪಾದಕರ ನಿಧಿ ಮತ್ತು ಅವರಿಗೆ ಆಶ್ರಯವನ್ನು ಒದಗಿಸುವ ರಾಷ್ಟ್ರಗಳಿಗೆ ಉಗ್ರರಿಗೆ ನೀಡುವ ಮೂಲಸೌಕರ್ಯವನ್ನು ತೆಗೆದುಹಾಕುವಂತೆ ನಾವು ಅಂತಹ ರಾಷ್ಟ್ರಗಳಿಗೆ ತಿಳಿಸಬೇಕಿದೆ. ಭಯೋತ್ಪಾದನೆ ವಿರುದ್ಧದ ಹೋರಾಟವು ಯಾವುದೇ ಧರ್ಮದ ವಿರುದ್ಧದ ಹೋರಾಟವಲ್ಲ. ಅದು ಸಾಧ್ಯವೂ ಇಲ್ಲ. ಪವಿತ್ರ ಗ್ರಂಥ ಕುರಾನ್, ಗುರು ಗ್ರಂಥ ಸಾಹೀಬ್ ಮತ್ತು ಋಗ್ವೇದವನ್ನು ಉಲ್ಲೇಖಿಸಿ ಮಾತನಾಡಿ, ಭಯೋತ್ಪಾದನೆ ಮತ್ತು ಉಗ್ರಗಾಮಿತ್ವವು ವಿಭಿನ್ನ ಹೆಸರು ಮತ್ತು ಗುರುತುಪಟ್ಟಿಯನ್ನು ಹೊಂದಿವೆ. ಇವು ವ್ಯತಿರಿಕ್ತ ಪರಿಣಾಮಗಳನ್ನು ಹೊಂದಿವೆ. ಆದರೆ, ಪ್ರತಿಯೊಂದು ಪ್ರಕರಣದಲ್ಲಿಯೂ ಅದು ಧರ್ಮದ ವಿರೂಪತೆಯಿಂದ ಪ್ರೇರೇಪಿಸಲ್ಪಟ್ಟಿರುತ್ತದೆ ಮತ್ತು ಅದರ ಶಕ್ತಿಯಿಂದ ಯಶಸ್ವಿಯಾಗಲು ಸಾಧ್ಯ ಎಂಬ ತಪ್ಪು ಕಲ್ಪನೆಯಿದೆ ಎಂದು ಹೇಳಿದರು.
Sushma Swaraj addresses Islamic meet in UAE