ಶ್ರೀನಗರ: ಆಕ್ರಮಣಕಾರಿ ಪ್ರವೃತ್ತಿ ಬಿಡುವಂತೆ ಪಾಕ್ಗೆ ಜಾಗತಿಕವಾಗಿ ಒತ್ತಡ ಹೇರಲಾಗುತ್ತಿದ್ದರೂ ಗಡಿಯಲ್ಲಿ ಮಾತ್ರ ಅಪ್ರಚೋದಿತ ದಾಳಿ ಮೂಲಕ ವಿಕೃತಿ ತೋರುತ್ತಲೇ ಇದೆ.
ನಿನ್ನೆ ಸಂಜೆಯಿಂದಲೂ ಜಮ್ಮು ಮತ್ತು ಕಾಶ್ಮೀರದ ಬರಮುಲ್ಲಾದ ಉರಿಯಲ್ಲಿ ಪಾಕ್, ಭಾರತೀಯ ಸೇನಾ ನೆಲೆಯ ಮೇಲೆ ಅಪ್ರಚೋದಿತ ದಾಳಿ ನಡೆಸುತ್ತಿದೆ. ಕಮಲಕೋಟೆಯ ಮೇಲೂ ಪಾಕ್ ದಾಳಿ ನಡೆಸಿದ್ದು, ಪರಿಣಾಮ ಒಬ್ಬ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಭಾರತೀಯ ಸೇನೆಯೂ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಎದುರಾಗಿರುವ ನಡುವೆಯೂ ಪಾಕ್ನ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದು ಎರಡು ರಾಷ್ಟ್ರಗಳ ಸಂಬಂಧವನ್ನ ಮತ್ತಷ್ಟು ಹಾಳುಗೆಡುವುತ್ತಿದೆ. ಇದರಿಂದ ಗಡಿಯಲ್ಲಿ ಮತ್ತಷ್ಟು ಉದ್ವಿಗ್ನತೆ ನಿರ್ಮಾಣವಾಗಿದೆ