ನವದೆಹಲಿ: ಪಂಜಾಬ್ನ ಫಿರೋಜ್ ಪುರದಲ್ಲಿ ಪಾಕಿಸ್ತಾನದ ಬೇಹುಗಾರನನ್ನು ಬಂಧಿಸಲಾಗಿದೆ.
ಗಡಿ ಭದ್ರತಾ ಪಡೆ(ಬಿಎಸ್ಎಫ್) ನಿಂದ ಪಾಕ್ ಬೇಹುಗಾರನ ಬಂಧನವಾಗಿದೆ. ಅತ್ತ ಪಾಕ್ ಶಾಂತಿ ಮಂತ್ರವನ್ನು ಪಠಿಸುತ್ತಿದೆ. ಆದರೆ ಇತ್ತ ಬೇಹುಗಾರನನ್ನು ಕಳುಹಿಸುವ ಮೂಲಕ ಮತ್ತೆ ಪಾಕಿಸ್ತಾನ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸಿದೆ.
ಈಗಾಗಲೇ ಕುಲ್ದೀಪ್ ಭೂಷಣ್ ಪಾಕಿಸ್ತಾನದಲ್ಲಿ ಇದ್ದಾರೆ. ಈ ಬಗ್ಗೆ ಅಂತರಾಷ್ಟ್ರೀಯ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತದೆ. ಅಲ್ಲದೇ ಇದೀಗ ಪಾಕ್ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರನ್ನು ಶಾಂತಿ ಸ್ಥಾಪನೆಯ ಉದ್ದೇಶದಿಂದ ಬಿಡುಗಡೆ ಮಾಡುತ್ತೇವೆ ಎಂದು ಹೇಳಿತ್ತು. ಆದ್ರೆ ಈ ಮಧ್ಯೆ ಬೇಹುಗಾರನೊಬ್ಬನನ್ನು ಭಾರತಕ್ಕೆ ಕಳುಹಿಸಿದ್ದು, ಇದೀಗ ಆತ ಸಿಕ್ಕಿಹಾಕಿಕೊಂಡಿದ್ದಾನೆ. ಈ ಬಗ್ಗೆ ಪಾಕಿಸ್ತಾನ ಏನು ಉತ್ತರ ಕೊಡುತ್ತದೆ ಹಾಗೂ ಭಾರತ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಅಷ್ಟೆ ಅಲ್ಲದೆ ಮುಂಜಾನೆ ಪಾಕಿಸ್ತಾನದ ಭಯೋತ್ಪಾದಕರು ಭದ್ರತಾ ಪಡೆಯ ಮೇಲೆ ಗುಂಡಿನ ಚಕಮಕಿ ನಡೆಸಿದ್ದಾರೆ. ನಮ್ಮ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿತ್ತು. ಜೊತೆಗೆ ಮೂವರು ಉಗ್ರರನ್ನು ಸುತ್ತುವರಿದಿದೆ.