ಬಿಜೆಪಿ ಅಧ್ಯಕ್ಷರ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೇಸ್

ಬೆಂಗಳೂರು,ಮಾ.1- ಉಗ್ರರ ವಿರುದ್ಧ ಸೈನಿಕರು ನಡೆಸಿದ ಕಾರ್ಯಾಚರಣೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರ ಬಗ್ಗೆ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪುಲ್ವಾಮದಲ್ಲಿ ಹೇಡಿ ಉಗ್ರಗಾಮಿಗಳಿಂದ ನಡೆದ ಆತ್ಮಾಹುತಿ ದಾಳಿಯಲ್ಲಿ 44 ವೀರಯೋಧರು ಪ್ರಾಣತ್ಯಾಗ ಮಾಡಿದ ಘಟನೆ ನಂತರ ನಡೆದ ಸೇನಾ ಕಾರ್ಯಾಚರಣೆಗೆ ಪ್ರತಿಪಕ್ಷಗಳು ಸಂಪೂರ್ಣ ಬೆಂಬಲ ನೀಡಿ ಕೇಂದ್ರ ಸರ್ಕಾರದ ಸೈನ್ಯದ ಪರವಾಗಿ ನಿಂತಿದ್ದರೆ, ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರು ಪಾಕಿಸ್ತಾನದಲ್ಲಿ ನಡೆದ ಸ್ಟ್ರಜಿಕಲ್ ಸ್ಟ್ರೈಕ್ ದಾಳಿಯಿಂದ ರಾಜ್ಯದಲ್ಲಿ 22 ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂದು ಹೇಳಿ ಸೈನಿಕರ ಬಲಿದಾನವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದು ಸಮಿತಿ ಅಧ್ಯಕ್ಷ ಜಿ.ಜನಾರ್ಧನ್ ಆರೋಪಿಸಿದ್ದಾರೆ.

ಪಾಕಿಸ್ತಾನದ ವಿರುದ್ಧ ವಾಯುಸೇನೆ ಮಾಡಿದ ದಾಳಿಯಲ್ಲಿ ಬಂಧಿತರಾಗಿ ಭಾರತಕ್ಕೆ ಆಗಮಿಸುತ್ತಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ದೇಶದ ಸ್ವಾಗತ ಕೋರುತ್ತಿದೆ. ಇಂಥ ಸಂದರ್ಭದಲ್ಲಿ ಬಿಜೆಪಿ ರಾಜಕಾರಣಕ್ಕೆ ಮುಂದಾಗಿದೆ. ಸೇನಾ ಕಾರ್ಯಾಚರಣೆಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದರು.

ಪಾಕಿಸ್ತಾನದ ಮೇಲೆ ಈಗಾಗಲೆ ನಾಲ್ಕು ಬಾರಿ ಯುದ್ಧವಾಗಿದೆ. ಇಂದಿರಾಗಾಂಧಿ, ಜವಹಾರ್‍ಲಾಲ್ ನೆಹರು, ವಾಜಪೇಯಿ ಅವರ ಅವಧಿಯಲ್ಲೂ ಯುದ್ಧ ನಡೆದು ಗೆಲುವು ಸಾಧಿಸಲಾಗಿದೆ. ಆ ಸಂದರ್ಭದಲ್ಲಿ ಸಂಭ್ರಮವನ್ನು ರಾಜಕಾರಣಕ್ಕೆ ಯಾರು ಬಳಸಿಕೊಂಡಿರಲಿಲ್ಲ.

ಅದರೆ ಭಯೋತ್ಪಾದಕರ ವಿರುದ್ಧ ದಾಳಿ ನಡೆಸಿದ್ದರಿಂದ ಕರ್ನಾಟಕದಲ್ಲಿ 22 ಲೋಕಸಭಾಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗಲಿದೆ ಎಂದು ಯಡಿಯೂರಪ್ಪನವರ ಹೇಳಿಕೆ ತಲೆತಗ್ಗಿಸುವಂತದ್ದು. ಯಡಿಯೂರಪ್ಪನವರ ಹುತಾತ್ಮ ಯೋಧರ ಕುಟುಂಬಗಳ ಕ್ಷಮೆಯಾಚಿಸಬೇಕೆಂದು ಮನೋಹರ್ ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ