ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆ: ಭಾರತದ ರಾಜತಾಂತ್ರಿಕತೆಗೆ ದೊಡ್ಡ ಗೆಲುವು

ಇಸ್ಲಾಮಾಬಾದ್: ಭಾರತದ ಒತ್ತಡಕ್ಕೆ ಮಣಿದ ಪಾಕಿಸ್ತಾನ ಕೊನೆಗೂ ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಬಿಡುಗಡೆಮಾಡಲು ನಿರ್ಧರಿಸಿದೆ.

ಈ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಪಾಕ್ ಸಂಸತ್ತಿನಲ್ಲಿ ಘೋಷಿಸಿದ್ದು, ಅಭಿನಂದನ್ ಅವರನ್ನು ನಾಳೆ ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದಾರೆ. ಶದ್ದುದೇಶದಿಂದಾಗಿ ಅಭಿನಂದನ್ ಬಿಡುಗಡೆಗೆ ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.

ಈ ಮೂಲಕ ಭಾರತೀಯ ರಾಜತಾಂತ್ರಿಕತೆಗೆ ಬಹುದೊಡ್ಡ ಗೆಲುವು ಸಿಕ್ಕಂತಾಗಿದೆ. ಈ ನಿಟ್ಟಿನಲ್ಲಿ ನಾಳೆ ವಿಂಗ್ ಕಮಾಂಡರ್ ಅಭಿನಂದನ್ ಅವರು ನಾಳೆ ತವರಿಗೆ ವಾಪಸ್ ಆಗಲಿದ್ದಾರೆ.

ಬುಧವಾರ ಬೆಳಗ್ಗೆ ಭಾರತದ ವಾಯು ಗಡಿ ದಾಟಿ ಬಂದಿದ್ದ ಮೂರು ಪಾಕ್​ ವಿಮಾನಗಳನ್ನು ನಮ್ಮ ಯುದ್ಧ ವಿಮಾನಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದವು. ಈ ಸಂದರ್ಭದಲ್ಲಿ ವಾಯು ಪಡೆಯ ಪೈಲಟ್​ ವಿಂಗ್​ ಕಮಾಂಡರ್​ ಅಭಿನಂದನ್​​ ಅವರು ಪಾಕ್​ನ ಎಫ್​-16 ವಿಮಾನವನ್ನು ಹೊಡೆದುರುಳಿಸಿದ್ದರು. ಆದರೆ, ಅಭಿನಂದನ್​ ಅವರ ಯುದ್ಧ ವಿಮಾನವನ್ನು ಪಾಕ್​ ಹೊಡೆದುರುಳಿಸಿತ್ತು. ವಿಮಾನದಿಂದ ಹೊರಜಿಗಿದ ಅಭಿನಂದನ್​ ಅವರನ್ನು ಪಾಕ್​ ಸೇನೆ ಬಂಧಿಸಿತ್ತು.

We will release Indian pilot tomorrow as peace gesture: Pakistan PM Imran Khan

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ