ಮೈಸೂರು, ಫೆ.28- ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮೆಗಾಡೈರಿಯನ್ನು ನಾಳೆ ಲೋಕಾರ್ಪಣೆ ಮಾಡಲಾಗುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೈಮುಲ್ (ಮೈಸೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ) ವ್ಯವಸ್ಥಾಪಕ ನಿರ್ದೇಶಕ ಡಾ. ಎಮ್.ಜೆ. ವಿಜಯಕುಮಾರ್ 128ಕೋಟಿ ರೂ. ವೆಚ್ಚದಲ್ಲಿ ಈ ಮೆಗಾಡೈರಿಯನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಇದು 6ಲಕ್ಷ ಲೀಟರ್ ಸಾಮಥ್ರ್ಯದ ಬೃಹತ್ ಘಟಕವಾಗಿರುವ ಈ ಡೈರಿಯನ್ನು ನಾಳೆ ಮಧ್ಯಾಹ್ನ 2ಗಂಟೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸುವರು ಎಂದು ತಿಳಿಸಿದರು.
ಆಲನಹಳ್ಳಿಯ 38.19ಎಕರೆ ಜಾಗದಲ್ಲಿ ಡೈರಿ ನಿರ್ಮಾಣವಾಗಿದೆ. ಇಲ್ಲಿ ಪ್ರತಿದಿನ 2ಲಕ್ಷ ಲೀಟರ್ನಿಂದ 5ಲಕ್ಷ ಲೀಟರ್ವರೆಗೆ ಟೋನ್ಡ್ಮಿಲ್ಕ್, ಶುಭಂ ಮಿಲ್ಕ್, ಹೊಮೋ ಜಿನ್ಸಸಡ್ ಮಿಲ್ಕ್, ಎನ್ಎಸ್ಎಮ್ ಮಿಲ್ಕ್, ಕೌಮಿಲ್ಕ್ ಅನ್ನು ಉತ್ಪಾದಿಸಬಹುದು ಎಂದು ಹೇಳಿದರು.
ಹಾಗೆಯೇ ಲಸ್ಸಿ, ಮಜ್ಜೆಗೆ, ಕಪ್ಕರ್ಡ್, ತುಪ್ಪ, ಮೈಸೂರು ಪಾಕ್, ಗೋಡಂಬಿ ಭರ್ಫಿ, ಕೇಸರ್ಪೇಡಾ, ಪನ್ನೀರ್, ಐಸ್ಕ್ರೀಂ, ಬೆಣ್ಣೆ, ಕೋವಾ ಕೂಡಾ ಉತ್ಪಾದಿಸಲಾಗುತ್ತದೆ ಎಂದು ತಿಳಿಸಿದರು.
ಈ ಡೈರಿಯಲ್ಲಿ 6ಲಕ್ಷ ಲೀಟರ್ ಸಾಮಥ್ರ್ಯದಿಂದ 9ಲಕ್ಷ ಲೀಟರ್ ವರೆಗೆ ಹಾಲು ಉತ್ಪಾದಿಸಬಹುದು ಕರ್ನಾಟಕದಲ್ಲಿ ಇದೇ ಮೊಟ್ಟ ಮೊದಲ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಮೆಗಾ ಡೈರಿಯಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಮಹೇಶ್, ನಿರ್ದೇಶಕರಾದ ಎ.ಟಿ.ಸೋಮಶೇಖರ್, ಕುಮಾರ್, ಲೀಲಾನಾಗರಾಜ್, ಕೆ.ಸಿ.ಬಲರಾಂ ಮತ್ತಿತರರು ಉಪಸ್ಥಿತರಿದ್ದರು.