ಐತಿಹಾಸಿಕ ಟಿ20 ಸರಣಿ ಗೆದ್ದ ಆಸ್ಟ್ರೇಲಿಯಾ

ಆಸಿಸ್ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೆ ಮುಗ್ಗರಿಸಿ ಬಿದ್ದು ಸರಣಿಯನ್ನ ಕೈಚೆಲ್ಲಿ. 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ ತಂಡ ಭಾರತ ನೆಲದಲ್ಲಿ ಮೊದಲ ಬಾರಿಗೆ ಟಿ20 ಸರಣಿ ಗೆದ್ದು ಸ್ಮರಣಿವಾಗಿರಿಸಿಕೊಂಡಿತು.

ಹಾಗಾದ್ರೆ ಬನ್ನಿ ಟೀಂ ಇಂಡಿಯಾ ಸೋತಿದ್ದು ಹೇಗೆ ಅನ್ನೋದನ್ನ ತೋರಿಸ್ತಿವಿ..
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಟೀಂ ಇಂಡಿಯಾಕ್ಕೆ ಓಪನರ್ಗಳಾದ ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಶಿಖರ್ ಧವನ್ ಆeಛಿeಟಿಣ ಓಪನಿಂಗ್ ಕೊಟ್ರು.

ಆರಂಭದಲ್ಲಿ ಸ್ಲೋ ಅಂಡ್ ಸ್ಟಡಿ ಇನ್ನಿಂಗ್ಸ್ ಕಟ್ಟಿಕೊಟ್ಟ ಈ ಜೋಡಿ ನಂತರ ಆಸೀಸ್ ಬೌಲರ್ಸ್ಗಳ ಬೆವರಿಳಿಸಿದ್ರು. ಅದರಲ್ಲೂ ರಾಹುಲ್ ಅಸಿಸ್ ಬೌಲರ್ಸ್ಗಳನ್ನ ಚೆಂಡಾಡಿ ಬೌಂಡರಿ ಸಿಕ್ಸರ್ಸ್ ಗಳ ಸುರಿಮಳೆಗೈದ್ರು.

ಅರ್ಧ ಶತಕದಿಂದ ವಂಚಿತರಾದ ಕನ್ನಡಿಗ ಕೆ.ಎಲ್. ರಾಹುಲ್
ತಂಡಕ್ಕೆ ಒಳ್ಳೆಯ ಓಪನಿಂಗ್ ಕೊಟ್ಟ ಕನ್ನಡಿಗ ರಾಹುಲ್ ಅರ್ಧ ಶತಕಕದ ಅಂಚಿಗೆ ತಲುಪಿದ್ರು. ಆದರೆ 47 ರನ್ ಗಳಿಸಿದ್ದಾಗ ಪೇಸರ್ ಕೌಲ್ಟರ್ ನೈಲ್ ಎಸೆತದಲ್ಲಿ ಖಿhiಡಿಜ ಒಚಿಟಿ ರಿಚರ್ಡ್ಸ್ನ್ಗೆ ಕ್ಯಾಚ್ ನೀಡಿ ಅರ್ಧ ಶತಕದಿಂದ ವಂಚಿತರಾದ್ರು.

ದಿಢೀರ್ ಕುಸಿತ ಕಂಡ ಟೀಂ ಇಂಡಿಯಾ
ರಾಹುಲ್ ಔಟ್ ಆಗುತ್ತಿದ್ದಂತೆ ಟೀಂ ಇಂಡಿಯಾ ದಿಢೀರ್ ಕುಸಿತ ಕಂಡಿತು. ಕ್ಯಾಪ್ಟನ್ ಕೊಹ್ಲಿ ಜೊತೆ ಸ್ಲೋ ಅಂಡ್ ಸ್ಟಡಿ ಇನ್ನಿಂಗ್ಸ್ ಕಟ್ಟುತ್ತಿದ್ದ ಶಿಖರ್ ಧವನ್ ಸ್ಟೋಯ್ನಿಸ್ ಎಸೆತದಲ್ಲಿ ವಿವಾದತ್ಮಾಮಕವಾಗಿ ಟಿ.ವಿ ಅಂಪೈಯರ್ ಕೊಟ್ಟ ಕೆಟ್ಟ ತೀರ್ಪಿಗೆ ಬಲಿಯಾದ್ರು. ಇದಾದ ನಂತರ ನಾಲ್ಕನೆ ಕ್ರಮಾಂಕದಲ್ಲಿ ಬಂದ ರಿಷಭ್ ಪಂತ್ ಕೂಡ ಹೆಚ್ಚು ಹೊತ್ತು ನಿಲ್ಲದೇ ರಿಚರ್ಡ್ಸ್ನ್ಗೆ ಬಲಿಯಾದ್ರು.

74 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಕ್ಯಾಪ್ಟನ್ ಕೊಹ್ಲಿ ಧೋನಿಗೆ ಒಳ್ಳೆಯ ಸಾಥ್ ಕೊಟ್ರು. ಈ ಜೋಡಿ ನಾಲ್ಕನೆ ವಿಕೆಟ್ಗೆ ಬರೋಬ್ಬರಿ 100 ರನ್ಗಳ ಜೋತೆಯಾಟ ನೀಡಿ ಪಂದ್ಯದ ಗತಿಯನ್ನೆ ಬದಲಿಸಿದ್ರು. ವಿರಾಟ್ ಕೊಹ್ಲಿ ಅರ್ಧ ಶತಕ ಬಾರಿಸಿ ಸಂಭ್ರಮಿಸಿದ್ರು.ಈ ವೇಳೆ 40 ರನ್ಗಳಿಸಿ ಅರ್ಧ ಶತಕದತ್ತ ಮುನ್ನಗುತ್ತಿದ್ದ ಧೋನಿ ಕಮಿನ್ಸ್ಗೆ ಬಲಿಯಾದ್ರು.

ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 190 ರನ್
ಕೊನೆಯಲ್ಲಿ ಬಂದ ದಿನೇಶ್ ಕಾರ್ತಿಕ್ 2 ಬೌಂಡರಿ ಬಾರಿಸಿದ್ರೆ ಕೊಹ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಬಿಗ್ ಟಾರ್ಗೆಟ್ ಕೊಡುವಲ್ಲಿ ಸಕ್ಸಸ್ ಆದ್ರು. ಕೊನೆಯಲ್ಲಿ ಟೀಂ ಇಂಡಿಯಾ ನಿಗದಿತ ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು.

ಆರಂಭಿಕ ಆಘಾತ ಅನುಭವಿಸಿದ ಕಾಂಗರೂಸ್
191 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಆಸಿಸ್ ಓಪನರ್ ಮಾರ್ಕಸ್ ಸ್ಟೋಯ್ನಿಸ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಕ್ಯಾಪ್ಟನ್ ಆ್ಯರಾನ್ ಫಿಂಚ್ 8, ಓಪನರ್ ಡಿ ಆರ್ಕಿ ಶಾರ್ಟ್ 40 ರನ್ಗಳಿಸಿ ಶಂಕರ್ಗೆ ಬಲಿಯಾದ್ರು.

ಶತಕ ಬಾರಿಸಿ ಅಬ್ಬರಿಸಿದ ಗ್ಲೇನ್ ಮ್ಯಾಕ್ಸ್ವೆಲ್
95 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಸ್ಪೋಟಕ ಬ್ಯಾಟ್ಸ್ಮನ್ ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ಪೀಟರ್ ಹ್ಯಾನ್ಸ್ ಕೋಬ್ ಜೊತೆಗೂಡಿ ಟೀಂ ಇಂಡಿಯಾ ಬೌಲಿಂಗ್ ಅಟ್ಯಾಕ್ನ್ನ ಉಡೀಸ್ ಮಾಡಿದ್ರು. ಗ್ಲೇನ್ ಮ್ಯಾಕ್ಸ್ವೆಲ್ 50 ಎಸೆತದಲ್ಲಿ ಶತಕ ಬಾರಿಸಿದ್ರು.

ಕೊನೆಯ ಓವರ್ನಲ್ಲಿ 8 ರನ್ ಬೇಕಿದ್ದಾಗ ಗ್ಲೇನ್ ಮ್ಯಾಕ್ಸ್ ವೆಲ್ ಸಿಕ್ಸ್ ಬಾರಿಸಿ ತಂಡಕ್ಕೆ 7 ವಿಕೆಟ್ಗಳ ಜಯ ತಂದುಕೊಟ್ರು.,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ