ಚಿನ್ನಸ್ವಾಮಿ ಅಂಗಳದಲ್ಲಿ ಕೊಹ್ಲಿ ವಿರಾಟ ರೂಪ

ಒಂದನೇ ಕ್ರಮಾಂಕದಲ್ಲಿ ಬಂದ ವಿರಾಟ್ ಕೊಹ್ಲಿ ಆರಂಭದಲ್ಲಿ ಸ್ಲೋ ಅಂಡ್ ಸ್ಟಡಿ ಇನ್ನಿಂಗ್ಸ್ ಕಟ್ಟಿದ್ರು. ಆದರೆ 8ನೇ ಓವರ್ನಂತರ ಓಪನರ್ ಕೆ.ಎಲ್. ರಾಹುಲ್, ಶಿಖರ್ ಧವನ್ ಮತ್ತು ರಿಶಬ್ ಪಂತ್ ಬೇಗನೆ ಪೆವಿಲಿಯನ್ ಸೇರಿದ್ದು ತಂಡಕ್ಕೆ ಹಿನ್ನಡೆಯಾಯಿತು.,

ಧೋನಿ ಸಾಥ್ ಪಡೆದು ಅಬ್ಬರಿಸಿದ ವಿರಾಟ್ ಕೊಹ್ಲಿ
ಪ್ರಮುಖ ಮೂರು ವಿಕೆಟ್ಗಳನ್ನ ಕಳೆದುಕೊಂಡಿದ್ದಾಗ ಧೋನಿ ವಿರಾಟ್ಗೆ ಉತ್ತಮ ಸಾಥ್ ನೀಡಿದ್ರು. ಧೋನಿಯ ಸಾಥ್ ಪಡೆದ ಕೊಹ್ಲಿ ಬೌಂಡರಿ ಸಿಕ್ಸರ್ಗಳ ಸುರಿಮಳೆಗೈದ್ರು. ಕೊಹ್ಲಿ ಡೈನಾಮಿಕ್ ಬ್ಯಾಟಿಂಗ್ಗೆ ಆ್ಯರಾನ್ ಫಿಂಚ್ ಪಡೆ ಪಂಚರ್ ಆಗಿ ಹೋಯ್ತು.

ಸಿಕ್ಸರ್ನಲ್ಲಿ ಶತಕ ಬಾರಿಸಿದ ಕಿಂಗ್ ವಿರಾಟ್
ಕೊಹ್ಲಿಯ ಬ್ಯಾಟಿಂಗ್ ವೈಭವ ಹೇಗಿತ್ತೆಂದರೆ 16ನೇ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ಗಳನ್ನ ಬಾರಿಸಿ ಶಾಕ್ ಕೊಟ್ರು. ಪೇಸರ್ ಕೌಲ್ಟರ್ ನೈಲ್ ಆ ಓವರ್ನ ಕೊನೆಯ ಮೂರು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿದ್ರು. ಇದರೋಂದಿಗೆ ಟಿ20 ಫಾರ್ಮೆಟ್ನಲ್ಲಿ ಸಿಕ್ಸರ್ ನಲ್ಲಿ ನೂರರ ಗಡಿ ದಾಟಿಸಿದ್ರು. ಇಷ್ಟೆ ಅಲ್ಲ ಮಿಸ್ಟರ್ 360 ಎಬಿಡಿ ವಿಲಿಯರ್ಸ್ ಅಚವರ ದಾಖಲೆ ಅಳಿಸಿ ಹಾಕಿದ್ರು. ಎಬಿಡಿ ವಿಲಿಯರ್ಸ್ 102 ಸಿಕ್ಸರ್ ಬಾರಿಸಿದ್ರು. ಇದೀಗ ಕೊಹ್ಲಿ ಸಿಕ್ಸರ್ ಬಾರಿಸೋದ್ರಿಲ್ಲಿ ಎಬಿಡಿಯನ್ನ ಕೊಹ್ಲಿ ಹಿಂದಿಕ್ಕಿದ್ದಾರೆ. ಕೊಹ್ಲಿ ಒಟ್ಟು 106 ಸಿಕ್ಸರ್ ಗನ್ನ ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.

ಅರ್ಧ ಶತಕ ಬಾರಿಸಿದ ಕಿಂಗ್ ಕೊಹ್ಲಿ
ಆಸಿಸ್ ಬೌಲರ್ಗಳ ಮನಬಂದಂತೆ ಚೆಂಡಾಡಿದ ವಿರಾಟ್ ಕೊಹ್ಲಿ ಕೇವಲ 29 ಎಸೆತದಲ್ಲಿ ಅರ್ಧ ಶತಕ ಪೂರೈಸಿ ಸಂಭ್ರಮಿಸಿದ್ರು. ಇದರೊಂದಿಗೆ ಟಿ20ಯಲ್ಲಿ 20ನೇ ಅರ್ಧ ಶತಕ ಬಾರಿಸಿದ ಗೌರವಕ್ಕೆ ಪಾತ್ರರಾದ್ರು.

ಕೇವಲ 38 ಎಸೆತಗಳನ್ನ ಎದುರಿಸಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ 72 ರನ್ ಗಳಿಸಿದ್ರು. 2 ಬೌಂಡರಿ 6 ಸಿಕ್ಸರ್ ಬಾರಿಸಿ ಅಬ್ಬರಿಸಿದ ಕೊಹ್ಲಿ 189.47 ಸ್ಟ್ರೈಕ್ ರೇಟ್ ಪಡೆದ್ರು.

ದಿಲ್ಶಾನ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ
ಜಬರ್ದಸ್ತ್ ಬ್ಯಾಟಿಂಗ್ ಮಾಡಿ ಎರಡು ಬೌಂಡರಿಗಳನ್ನ ಬಾರಿಸಿದ ಕೊಹ್ಲಿ ಶ್ರೀಲಂಕಾ ತಂಡದ ಮಾಜಿ ಓಪನರ್ ದಿಲ್ಶಾನ್ ಅವರ ದಾಖಲೆಯನ್ನ ಸರಿಗಟ್ಟಿದ್ರು. ಟಿ20ಯಲ್ಲಿ ಕೊಹ್ಲಿ ಒಟ್ಟು 223 ಬೌಂಡರಿಗಳನ್ನ ಬಾರಿಸಿದ ಸಾಧನೆ ಮಾಡಿದ್ದಾರೆ.

ರೋಹಿತ್ ದಾಖಲೆ ಸರಿಗಟ್ಟಿದ ರನ್ ಮಷೀನ್
ವೀರಾವೇಶದ ಬ್ಯಾಟಿಂಗ್ ಮಾಡಿ ಅರ್ಧ ಶತಕ ಬಾರಿಸಿದ ಕ್ಯಾಪ್ಟನ್ ಕೊಹ್ಲಿ ಹಿಟ್ಮ್ಯಾನ್ ರೋಹಿತ್ ಶರ್ಮಾ ಅವರ ದಾಖಲೆಯನ್ನ ಅಳಿಸಿ ಹಾಕಿದ್ರು. ಟಿ20 ಫಾರ್ಮೆಟ್ನಲ್ಲಿ ಅರ್ಧ ಶತಕವನ್ನ 20 ಕ್ಕೂ ಹೆಚ್ಚು ಬಾರಿ ಅರ್ಧ ಶತಕ ಬಾರಿಸಿ ರೋಹಿತ್ ಸರಿಸಮಾನವಾಗಿ ದಾಖಲೆ ಬರೆದ್ರು.

ಕ್ಯಾಪ್ಟನ್ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ತಂಡವನ್ನ ಕಾಪಾಡಿದಲ್ಲದೇ ಹಲವಾರು ದಾಖಲೆಗಳನ್ನ ಬರೆದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ