ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಕಳ್ಳಿಯ ಬಂಧನ

ಮೈಸೂರು, ಫೆ.28- ವೃದ್ಧೆಯರಿಂದ ಆರಭರಣ ಕಳವು ಮಾಡುತ್ತಿದ್ದ ಕಳ್ಳಿಯೊಬ್ಬಳನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿ 581ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಎನ್.ಆರ್.ಮೊಹಲ್ಲಾದ ಗಣೇಶನಗರದ ಸೆಂಟ್ ಮೇರಿಸ್ ರಸ್ತೆಯ 12ನೇ ಕ್ರಾಸ್ ನಿವಾಸಿ ಸುವರ್ಣ (28) ಬಂಧಿತ ಕಳ್ಳಿ.

ಆರೋಪಿಯು ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆಯರನ್ನು ಪರಿಚಯ ಮಾಡಿಕೊಂಡು ನಂತರ ನಿದ್ರೆ ಮಾತ್ರೆ ಮಿಶ್ರಿತ ಜ್ಯೂಸ್ ಅನ್ನು ನೀಡಿ ಅವರು, ಪ್ರಜ್ಞೆ ತಪ್ಪಿದ ನಂತರ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದಳು.

ಈಕೆಯಿಂದ 18ಲಕ್ಷ ರೂ. ಮೌಲ್ಯದ 581ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ನಗರದ ಲಷ್ಕರ್ ಠಾಣೆ , ವಿಜಯನಗರ, ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣ ಹಾಗೂ ಬೆಂಗಳೂರಿನ ಬ್ಯಾಟರಾನಪುರದಲ್ಲಿ ಮೂರು ಪ್ರಕರಣ ಸೇರಿದಂತೆ ಒಟ್ಟು 13 ಪ್ರಕರಣಗಳು ಬೆಳಕಿಗೆ ಬಂದಿವೆ.

ಈಕೆ ಕದ್ದ ಆಭರಣಗಳನ್ನು ಮೈಸೂರು ಮಣಿಪುರಂ ಫೈನಾನ್ಸ್, ಮುತ್ತೂಟ್ ಫೈನಾನ್ಸ್‍ನಲ್ಲಿ ಗಿರವಿ ಇಟ್ಟಿರುವುದು ತನಿಖೆಯಿಂದ ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ