ಬೆಂಗಳೂರು, ಫೆ.27- ವಾರಸುದಾರರಿಲ್ಲದ ಏಳು ದ್ವಿಚಕ್ರ ವಾಹನಗಳನ್ನು ಮಾ.2ರಂದು ಮಧ್ಯಾಹ್ನ 12.30ಕ್ಕೆ ಉಪ್ಪಾರಪೇಟೆ ಪೊಲೀಸ್ ಠಾಣೆ ಆವರಣದಲ್ಲಿ ಬಹಿರಂಗ ಹರಾಜು ಹಾಕಲಾಗುತ್ತಿದೆ.
ವಾಹನಗಳ ಮಾಲೀಕರು ಪತ್ತೆಯಾಗದ ಕಾರಣ ನ್ಯಾಯಾಲಯದ ಆದೇಶದಂತೆ, ಆರ್ಟಿಒ ಅಧಿಕಾರಿಗಳಿಂದ ಮೌಲ್ಯ ನಿರ್ಧರಿಸಿ ದ್ವಿಚಕ್ರ ವಾಹನಗಳನ್ನು ಬಹಿರಂಗ ಹರಾಜು ಹಾಕಲಾಗುತ್ತಿದೆ ಎಂದು ಉಪ್ಪಾರಪೆಟೆ ಸಂಚಾರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.