ಲೋಕಸಭೆ ಸ್ಥಾನ ಹಂಚಿಕೆ ನಾಯಕರ ಚರ್ಚೆಗೆ ಬಿಟ್ಟಿದ್ದೇವೆ-ಮುಖ್ಯಮಂತ್ರಿ ಕುಮಾರಸ್ವಾಮಿ

ಹಾಸನ, ಫೆ.26-ಲೋಕಸಭೆ ಸ್ಥಾನ ಹಂಚಿಕೆ ಪಕ್ಷದ ನಾಯಕರ ಚರ್ಚೆಗೆ ಬಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಹಾಸನದ ರಾಮನಾಥಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಲೋಕಸಭೆ ಸ್ಥಾನ ಹಂಚಿಕೆ ಸಂಬಂಧ ಯಾವುದೇ ಸಮಸ್ಯೆಯಿಲ್ಲ. ಒಮ್ಮತದ ತೀರ್ಮಾನವಾಗುವ ವಿಶ್ವಾಸವಿದೆ ಎಂದರು.

ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ತಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದರು.

ರಕ್ಷಣಾ ಇಲಾಖೆಯಿಂದ ಪಾಕ್ ಆಕ್ರಮಿತ ಪ್ರದೇಶದಲ್ಲಿ ನಡೆದ ವಾಯುದಾಳಿ ಸ್ವಾಗತಾರ್ಹ ಎಂದಿರುವ ಕುಮಾರಸ್ವಾಮಿ, ಇದಕ್ಕೆ ದೇಶದ ಜನರ ಒಮ್ಮತದ ಅಂಗೀಕಾರವಿದೆ ಎಂದರು.

ರಾಜ್ಯದ ವಿವಿಧೆಡೆ ಕಾಡ್ಗಿಚ್ಚು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲಾ ಕಡೆ ಬೆಂಕಿ ಅವಘಡ ತಹಬದಿಗೆ ಬಂದಿದೆ. ಈ ವಿಚಾರದಲ್ಲಿ ಆತಂಕ ಬೇಡ ಎಂದು ಹೇಳಿದರು.

ಪ್ರಧಾನಿ ಮೋದಿಯವರು ಕಾರ್ಮಿಕರ ಪಾದ ತೊಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಪ್ರಧಾನಿಯವರು ಜನರ ಮನ ಗೆಲ್ಲಲು ಏನು ಬೇಕಾದರೂ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ