ಟಿ20 ಸರಣಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ವಿಶ್ವ ದಾಖಲೆ ಬರೆದ ರಶೀದ್ ಖಾನ್

ಅಫ್ಘಾನಿಸ್ತಾನ ತಂಡದ ರಶೀದ್ ಖಾನ್ ಮತ್ತೊಮ್ಮೆ ಕಮಾಲ್ ಮಾಡಿದ್ದಾರೆ. ರಶೀದ್ ಖಾನ್ ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದು ವಿಶ್ವ ದಾಖಲೆ ಬರೆದಿದ್ದಾರೆ.

ಉತ್ತರಖಂಡನ್ನಲ್ಲಿ ನಡೆದ ಟಿ20 ಸರಣಿಯಲ್ಲಿ ಅಫ್ಘಾನಿಸ್ತಾನ ಐರ್ಲೆಂಡ್ ವಿರುದ್ಧ ಬೊಂಬಾಟ್ ಪರ್ಫಾಮನ್ಸ್ ಕೊಟ್ಟು ಇಡೀ ವಿಶ್ವ ಕ್ರಿಕೆಟ್ಟೆ ನಿಬ್ಬರೆಗಾಗುವಂತ ಸಾಧೆನೆ ಮಾಡಿದೆ. ಇದೀಗ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಅಫ್ಘಾನಿಸ್ತಾನ ತಂಡ ಐರ್ಲೆಂಡ್ ವಿರುದ್ಧ ವೈಟ್ ವಾಶ್ ಮಾಡಿ ಸರಣಿ ಗೆದ್ದುಕೊಂಡಿತ್ತು.

ಇಡೀ ಸರಣಿಯಲ್ಲಿ ದೊಡ್ಡ ಹೈಲೆಟ್ ಅಂದ್ರೆ ಅದು ಮಿಸ್ಟ್ರಿ ಬೌಲರ್ ರಶೀದ್ ಖಾನ್  ಸರಣಿವುದಕ್ಕೂ ಸೂಪರ್ ಸ್ಪೆಲ್ ಮಾಡಿದ ರಶೀದ್ ಖಾನ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಮೊದಲ ಪಂದ್ಯದಲ್ಲಿ ಎರಡು ವಿಕೆಟ್ ಪಡೆದ ರಶೀದ್ ಎರಡನೇ ಪಂದ್ಯದಲ್ಲಿ ಐರ್ಲೆಂಡ್ ಪಾಲಿಗೆ ಮತ್ತೊಮ್ಮೆ ವಿಲನ್ ಆಗಿ ನಾಲ್ಕು ವಿಕೆಟ್ ಪಡೆದಿದ್ರು..

ಮೂರನೇ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ರಶೀದ್
ಮೊನ್ನೆ ಐರ್ಲೆಂಡ್ ವಿರುದ್ಧದ ರಶೀದ್ ಖಾನ್ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ. 16ನೇ ಓವರ್ನ ಓವರ್ನ ಕೊನೆಯ ಎಸೆತದಲ್ಲಿ ಓ ‘ಬ್ರಿಯಾನ್ ಗೆ ಪೆವಲಿಯನ್ ದಾರಿ ತೋರಿಸಿದ್ರು. 18ನೇ ಓವರ್ನಲ್ಲಿ ದಾಳಿಗಿಳಿದ ರಶೀದ್ ಖಾನ್ ಡಾಕ್ರೆಲ್ ಮತ್ತು ಗೆಟೇಕ್ ಅವರ ವಿಕೆಟ್ ಪಡೆದು ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ರು.

ಟಿ20ಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ವಿಶ್ವದ ಮೊದಲ ಸ್ಪಿನ್ನರ್
ಐರ್ಲೆಂಡ್ ವಿರದ್ಧ ರಶೀದ್ ಹ್ಯಾಟ್ರಿಕ್ ವಿಕೆಟ್ಗಳನ್ನ ಪಡೆಯುವ ಮೂಲಕ ಟಿ20 ಫಾರ್ಮೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಸ್ಪಿನ್ನರ್ ಎಂಬ ಹಿರಿಮೆಗೆ ಪಾತ್ರರಾದ್ರು. ಈ ಹಿಂದೆ ಹ್ಯಾಟ್ರಿಕ್ ವಿಕೆಟ್ ಗಳನ್ನ ಪಡೆದ ಬೌಲರ್ಗಳೆಲ್ಲ ಪೇಸ್ ಬೌಲರ್ಸ್ಗಳಾಗಿದ್ರು.

ಸತತ ನಾಲ್ಕು ವಿಕೆಟ್ ಸ್ಪಿನ್ ಮ್ಯಾಜೀಷಿಯನ್
ಸೂಪರ್ ಸ್ಪೆಲ್ ಮಾಡಿ ಐರ್ಲೆಂಡ್ ಬ್ಯಾಟ್ಸ್ಮನ್ಗಳನ್ನ ಥಂಡಾ ಹೊಡೆಸಿದ ರಶೀದ್ ಖಾನ್ ಹ್ಯಾಟ್ರಿಕ್ ವಿಕೆಟ್ ಮಾತ್ರವಲ್ಲ ಸತತ ನಾಲ್ಕು ಪಡೆದು ಹೊಸ ದಾಖಲೆ ಬರೆದ್ರು.

ರಶೀದ್ ಖಾನ್ ಸ್ಪಿನ್ ಮ್ಯಾಜಿಕ್
ಓವರ್ 4
ವಿಕೆಟ್ 5
ರನ್ 27
ಎಕನಾಮಿ ರೇಟ್ 6.75

ಮಿಸ್ಟ್ರಿ ಬೌಲರ್ ರಶೀದ್ ಖಾನ್ ನಾಲ್ಕು ಓವರ್ಗಳನ್ನ ಪೂರೈಸಿ ಐದು ವಿಕೆಟ್ ಪಡೆದು ಮಿಂಚಿದ್ರು. ಕೇವಲ 27ರನ್ ನೀಡಿದ ರಶೀದ್ 6.75 ಎಕನಾಮಿ ರೇಟ್ ಹೊಂದಿದ್ರು.

ಎಲೈಟ್ ಕ್ಲಬ್ ಸೇರಿದ ಅಪ್ಘಾನ್ ಬೌಲರ್
ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ ಮಿಸ್ಟ್ರಿ ಬೌಲರ್ ರಶೀದ್ ಖಾನ್ ವಿಶ್ವ ಟಿ20ಯಲ್ಲಿ ಹೊಸ ದಾಖಲೆ ಬರೆದ್ರು. ಇದರೊಂದಿಗೆ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ಗಳ ಎಲೈಟ್ ಕ್ಲಬ್ ಸೇರಿದ್ರು.

ಒಟ್ಟಾರೆ ರಶೀದ್ ಖಾನ್ ತಾವೊಬ್ಬ ಟಿ20 ಸ್ಪೆಶಲಿಸ್ಟ್ ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿ ವಿಶ್ವದ ಘಾಟಾನುಘಟಿ ಬ್ಯಾಟ್ಸ್ಮನ್ ಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ