ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ದಾಳಿ ನಡೆದಿದ್ದು ಹೇಗೆ?

ನವದೆಹಲಿ: ಪಾಕ್​ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದ ಖೈಬರ್​ ಕಣಿವೆಯ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸ್ಥಳೀಯ ಬೇಹುಗಾರಿಕೆ ಮೂಲಗಳು ನೀಡಿದ ಮಾಹಿತಿಯನ್ನ ಆಧರಿಸಿ ಪಕ್ಕಾ ಗ್ರೌಂಡ್​ ರಿಪೋರ್ಟ್ ಪಡೆದು ಭಾರತ ಪಾಕ್​ ನೆಲದಲ್ಲಿ ಏರ್​ ಸ್ಟ್ರೈಕ್​ ಮಾಡಲಾಗಿದೆ ಎಂದು ಸೇನಾ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಭಾರತೀಯ ವಾಯುಪಡೆಯ  ಮಿರಾಜ್​ ಜೆಟ್​ ಪಾಕಿಸ್ತಾನದ ಖೈಬರ್​ ಕಣಿವೆಯಲ್ಲಿ ನಿಖರವಾದ ಸ್ಥಳವನ್ನ ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿರುವುದನ್ನ ಸರ್ಕಾರದ ಮೂಲಗಳೇ ದೃಢಪಡಿಸಿವೆ.

ಭಾರತದ ದಾಳಿಯನ್ನ ಗುರುತಿಸಿದ ಪಾಕಿಸ್ತಾನ ಅಮೆರಿಕ ಎಫ್​ -16 ವಿಮಾನಗಳನ್ನ ಕಳುಹಿಸಿ ಮಿರಾಜ್ ಹೊಡೆದುರುಳಿಸಿರುವ  ಯೋಜನೆ ರೂಪಿಸಿತ್ತು. ಎಫ್​- 16 ಟೆಕ್​ ಆಫ್​ ಆಗುವಷ್ಟರಲ್ಲಿ ಮಿರಾಜ್​ ತನ್ನ ಕೆಲಸ ಮುಗಿಸಿ ಭಾರತದ ನೆಲಕ್ಕೆ ವಾಪಸ್​ ಆಗಿತ್ತು.

ಈ ನಡುವೆ, ಪಾಕಿಸ್ತಾನ ಸರ್ಕಾರ ತುರ್ತು ಸಭೆ ನಡೆಸಿ ದಾಳಿ ಬಗ್ಗೆ ಗಂಭೀರ ಸಮಾಲೋಚನೆ ನಡೆಸಿದ್ದು, ಮುಂದೇನು ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.   ಪಾಕ್​ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ನೇತೃತ್ವದಲ್ಲಿ ಈ ಸಭೆ ನಡೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ