ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್. ಧೋನಿ ಈಗ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಧೋನಿ ಅಬ್ಬರದ ಬ್ಯಾಟಿಂಗ್ ಮಾಡಿದಿದ್ರೆ ತಂಡ ಗೆಲ್ಲುತ್ತಿತ್ತು ಅನ್ನೋದು ಎಲ್ಲರ ಅಭಿಪ್ರಾಯ ಆಗಿದೆ.
ಕಳೆದ ತಿಂಗಳಷ್ಟೆ ಇದೇ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧ ಶತಕಗಳನ್ನ ಸಿಡಿಸಿ ಐತಿಹಾಸಿಕ ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಮಾಹಿ ಅಂದು ಬೊಂಬಾಟ್ ಬ್ಯಾಟಿಂಗ್ ಮಾಡಿ ಮಿಂಚಿದ್ರು.
ಸ್ಲೋ ಬ್ಯಾಟಿಂಗ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಮಾಹಿ
ಮೊನ್ನೆ ವಿಶಾಖಪಟ್ಟಣ ಅಂಗಳದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಧೋನಿ ಸ್ಲೋ ಬ್ಯಾಟಿಂಗ್ ಮಾಡಿ ಭಾರೀ ಟೀಕೆಗಳಿಗೆ ಗುರಿಯಾಗಿದ್ರು.
ಮೊನ್ನೆ ಮೊದಲ ಪಂದ್ಯದಲ್ಲಿ ತಂಡದ ಪರ ಕೆ.ಎಲ್. ರಾಹುಲ್ ಹೈಯೆಸ್ಟ್ ಸ್ಕೋರರ್ ಎನಿಸಿದ್ರು. ಇದು ಬಿಟ್ಟರೇ ಅಜೇಯ 29 ರನ್ಗಳಿಸಿದ ಧೋನಿ ಸೆಕೆಂಡ್ ಹೈಯೆಸ್ಟ್ ಸ್ಕೋರರ್ ಎನಿಸಿದ್ರು.
ಧೋನಿ ಕಣ್ಣ ಮುಂದೆ ಉರುಳಿ ಬಿತ್ತು 5 ವಿಕೆಟ್
ರಿಷಭ್ ಪಂತ್ ಔಟಾದ ನಂತರ ಐದನೇ ಕ್ರಮಾಂಕದಲ್ಲಿ ಬಂದ ಧೋನಿ ತಮ್ಮ ಕಣ್ಣೆದುರಿಗೆ ಐದು ವಿಕೆಟ್ಗಳ ಉರುಳಿ ಬಿದ್ದಿದ್ದನ್ನ ನೋಡಿದ್ರು. ಐoತಿeಡಿ oಡಿಜeಡಿನಲ್ಲಿ ಬಂದ ದಿನೇಶ್ ಕಾರ್ತಿಕ್ ಮತ್ತು ಕೃನಾಲ್ ಪಾಂಡ್ಯ ಧೋನಿಗೆ ಉತ್ತಮ ಸಾಥ್ ಸಿಗಲಿಲ್ಲ. ಇದರ ಪರಿಣಾಮ ವೇ ಧೋನಿ Sಟoತಿ ಚಿಟಿಜ sಣeಚಿಜಥಿ ಇನ್ನಿಂಗ್ಸ್ ಕಟ್ಟಿಕೊಟ್ರು.
ಮೊದಲ ಪಂದ್ಯದಲ್ಲಿ ಧೋನಿ ಸಾಧನೆ
ಎಸೆತ : 37
ರನ್ : 29
6 : 1
ಸ್ಟ್ರೈಕ್ ರೇಟ್ : 78.38
37 ಎಸೆತಗಳನ್ನ ಎದುರಿಸಿದ ಧೋನಿ ಕೇವಲ 29 ರನ್ ಗಳಿಸಿದ್ರು. ಒಂದು ಸಿಕ್ಸರ್ ಬಾರಿಸಿದ ಧೋನಿ ಒಟ್ಟು 78.38 ಸ್ಟ್ರೈಕ್ ರೇಟ್ ಪಡೆದ್ರು.
ಧೋನಿ ಫ್ಲಾಪ್ ಶೋ
ಧೋನಿ ದಯವಿಟ್ಟು ನಿವೃತ್ತಿಯಾಗಿ ಅಥವಾ ಹುಷಾರಿಲ್ಲ ಅಂತ ಹೇಳಿ . ವಿಶ್ವಕಪ್ಗೆ ಹೋಗುವ ಫ್ಲೈಟ್ನಲ್ಲಿ ನಿಮ್ಮನು ನೋಡಲು ನಮಗೆ ಇಷ್ಟವಿಲ್ಲ. ದಯವಿಟ್ಟು ಈ ಹಿಂದಿನ ಒಳ್ಳೆಯ ನೆನಪುಗಳನ್ನ ಹಾಳುಮಾಡಬೇಡಿ.
ವಿಕಾಸ್ ಕುಮಾರ್
ಧೋನಿ ಅವರು ತಾನು ಮಾತ್ರ ಬ್ಯಾಟಿಂಗ್ ಮಾಡಬಹುದೆಂದು ಭಾವಿಸಿದ್ರಾ ?
ಓಂಭತ್ತನೆ ಬ್ಯಾಟ್ಸ್ಮನ್ಗೆ ಸ್ಟ್ರೈಕ್ ಬಿಟ್ಟು ಕೊಡಬಹುದಿತ್ತು ಎನ್ನುವ ದೃಷ್ಟಿ ಕೋನವೂ ನಿಮಗಿಲ್ವಾ ? ಹೋಗಲಿ ನೀವಾದ್ರು ರನ್ ಕಲೆ ಹಾಕ್ತಿರಾ ಅದು ಇಲ್ಲ
ಅಕ್ಷಯ್ ಹೆಗಡೆ
ಎಂ.ಎಸ್.ಧೋನಿ ಗ್ರೇಟ್ ಬ್ಯಾಟ್ಸ್ಮನ್. ಗೆಲುವಿಗೆ ಅನೇಕ ಬಾರಿ ಕಾರಣರಾಗಿದ್ದಾರೆ.
ಕೆಲವು ಬಾರಿ ಭಾರತಕ್ಕೆ . ಇನ್ನು ಕೆಲವೊಮ್ಮೆ ಎದುರಾಳಿಗಳಿಗಾಗಿ
ರಾಜಾ ಬಾಬು
ಈ ದಿನಗಳಲ್ಲಿ ಇಬ್ಬರು ಆಟಗಾರರು ನಿರೀಕ್ಷೆಗಳಿಗೆ ತಕ್ಕಂತೆ ಆಡುತ್ತಿದ್ದಾರೆ.
ಧೋನಿ ಡಾಟ್ಸ್ ಕೊಟ್ಟರೇ. ಉಮೇಶ್ ಡಾಟ್ಸ್ ಕೊಡದಂತೆ ಬೌಲಿಂಗ್ ಮಾಡ್ತಾರೆ
ಗಬ್ಬರ್
ಧೋನಿ ಪರ ಬ್ಯಾಟಿಂಗ್ ಮಾಡಿದ ಗ್ಲೇನ್ ಮ್ಯಾಕ್ಸ್ವೆಲ್
ತಂಡದ ಸೋಲಿಗೆ ಧೋನಿ ಬ್ಯಾಟಿಂಗ್ ಕೂಡ ಕಾರಣ ಅಂತಾ ಅಭಿಮಾನಿಗಳು ಆಕ್ರೋಶಗೊಂಡಿದ್ರೆ , ಇತ್ತ ಆಸಿಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಗ್ಲೇನ್ ಮ್ಯಾಕ್ಸ್ ವೆಲ್ ನಿನ್ನೆಯ ಪಂದ್ಯದಲ್ಲಿ ಮ್ಯಾಚ್ ಫಿನಿಷರ್ ಧೋನಿ ಅವರಂತಹ ಆಟಗಾರರಿಗೂ ಬ್ಯಾಟಿಂಗ್ ಮಾಡುವುದು ಕಷ್ಟವಾಗಿತ್ತು ಧೋನಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ಒಟ್ನಲ್ಲಿ ಧೋನಿ ಮೊದಲ ಪಂದ್ಯದಲ್ಲಿ ಫ್ಲಾಪ್ ಪರ್ಫಾಮನ್ಸ್ ಕೊಟ್ಟಿರಬಹುದು ಆದರೆ ನಾಳೆ ಬೆಂಗಳೂರಿನಲ್ಲಿ ನಡೆಯುವ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾಮನ್ಸ್ ಕೊಟ್ಟು ಪಂದ್ಯವನ್ನ ಡ್ರಾ ಮಾಡಿಸಿಕೊಳ್ಳಬೇಕಿದೆ.