
ನೆಲಮಂಗಲ, ಫೆ. 26- ಬಹು ನಿರೀಕ್ಷೆಯಲ್ಲಿದ್ದ ಜನತೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನೆಲಮಂಗಲ ಪುರಸಭೆಯನ್ನು ನೆಲಮಂಗಲ ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದಾರೆ.
ನೆಲಮಂಗಲ ತಾಲೂಕಿನ 24ಗ್ರಾಮ ಪಂಚಾಯ್ತಿಗಳ ಪೈಕಿ ಅರಿಶಿನಕುಂಟೆ, ವಿಶ್ವೇಶ್ವರಪುರ, ವಾಜರಹಳ್ಳಿ ಹಾಗು ಬಸವನಹಳ್ಳಿ ಗ್ರಾಮ ಪಂಚಾಯ್ತಿಗಳು ಹಾಗೂ ನೆಲಮಂಗಲ ಪುರಸಭೆಯನ್ನು ಒಗ್ಗೂಡಿಸಿ ನೆಲಮಂಗಲ ನರಸಭೆಯನ್ನಾಗಿ ಮಾಡುವ ಶಿಫಾರಸ್ಸನ್ನು ಎಲ್ಲಾ ಗ್ರಾಮ ಪಂಚಾಯಿತಿಗಳು ಸಾಮಾನ್ಯಸಭೆಗಳಲ್ಲಿ ಒಪ್ಪಿಗೆ ಸೂಚಿಸಿದ್ದವು.
ನೆಲಮಂಗಲ ಪುರಸಭೆ ಹಾಗೂ ನಾಲ್ಕು ಗ್ರಾಮ ಪಂಚಾಯ್ತಿಗಳು ಸೇರಿ ನೆಲಮಂಗಲ ನಗರಸಭೇಯಾಗಿದ್ದರಿಂದ ಈ ವ್ಯಾಪ್ತಿಯ ಸಾರ್ವಜನಿಕರು ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ ಅವರಿಗೆ ಅಭಿನಂದಿಸಿದ್ದಾರೆ.