ವೈಮಾನಿಕ ದಾಳಿಯಲ್ಲಿ 25 ಜೈಷ್ ಕಮಾಂಡರ್ ಗಳ ಹತ್ಯೆ

ನವದೆಹಲಿ: ಎಲ್ ಒಸಿ ದಾಟಿ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ 25 ಜೈಷ್ ಉಗ್ರ ಕಾಮಾಂಡರ್ ಗಳನ್ನು ಹತ್ಯೆ ಮಾಡಲಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಂಪುಟ ಸಮಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದ ಖೈಬರ್ ಪಖ್ತೂನ್‌ವಾ ಪ್ರಾಂತ್ಯಕ್ಕೆ ನುಗ್ಗಿದಭಾರತೀಯ ವಾಯುಪಡೆ ಯುದ್ಧ ವಿಮಾನಗಳು ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿವೆ. ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಸುಮಾರು 1000 ಕೆಜಿ ಬಾಂಬ್‌ ಅನ್ನು ಉಗ್ರರ ನೆಲೆ ಮೇಲೆ ಹಾಕಲಾಗಿದೆ. ಒಟ್ಟು 12 ಮಿರಾಜ್‌ ಯುದ್ಧ ವಿಮಾನಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, 21 ನಿಮಿಷಗಳ ಕಾಲ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿ 12 ವಾಯುಪಡೆ ವಿಮಾನಗಳು ಸುರಕ್ಷಿತವಾಗಿ ವಾಪಸ್‌ ಆಗಿವೆ.

ವೈಮಾನಿಕ ದಾಳಿಯಲ್ಲಿ ಜೈಷ್ ಇ ಮೊಹಮದ್, ಲಷ್ಕರ್ ಸೇರಿದಂತೆ ವಿವಿಧ ಸಂಘಟನೆಗಳಿಗೆ ಸೇರಿದ 350 ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಅವರಲ್ಲಿ ನಾಲ್ವರು ಮೋಸ್ಟ್ ವಾಂಟೆಡ್ ಉಗ್ರರಾದ ಮಸೂದ್ ಅಜರ್ ಸೋದರ ತಲ್ಲಾ ಸೈಫ್, ಮುಫ್ತಿ ಅಜರ್ ಖಾನ್, ಮೌಲಾನಾ ಅಮ್ಮರ್, ಇಬ್ರಾಹಿಂ ಅಜರ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

IAF air-strike,across LoC, destroy terror camp, Ajit Doval

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ