ಪಣಜಿ: ಅನಾರೋಗ್ಯದಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರ ಆರೋಗ್ಯ ವಿಚಾರಿಸಿ ಮುಂದಿನ ಚಿಕಿತ್ಸೆ ನೀಡಲು ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯಕೀಯ ತಂಡ ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾವಿಸಿದೆ.
ಏಮ್ಸ್ ನ ವೈದ್ಯ ಡಾ ಪ್ರಮೋದ್ ಗಾರ್ಗ್ ನೇತೃತ್ವದ ತಂಡ ಪಣಜಿಗೆ ಆಗಮಿಸಿದ್ದು ಪರಿಕ್ಕರ್ ಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಕಳೆದ ವರ್ಷ ಮನೋಹರ್ ಪರ್ರಿಕರ್ ಅವರಿಗೆ ಪ್ಯಾಂಕಿಯಾಟ್ರಿಕ್ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ನಂತರ ಮುಂಬೈ,ದೆಹಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾದ ನ್ಯೂಯಾರ್ಕ್ ಗೆ ಕೂಡ ಹೋಗಿ ಬಂದಿದ್ದರು.
ಕಳೆದ ರಾತ್ರಿ 8.30ರ ಸುಮಾರಿಗೆ ಅಧಿಕೃ ಪ್ರಕಟಣೆ ಹೊರಡಿಸಿದ ಸರ್ಕಾರದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ಏಮ್ಸ್ ವೈದ್ಯ ಡಾ ಗಾರ್ಗ್ ಮತ್ತು ಅವರ ತಂಡ ಪರೀಕ್ಷೆ ನಡೆಸುತ್ತಿದೆ. ಪರ್ರಿಕರ್ ಅವರಿಗೆ ಕೆಲವು ಔಷಧಗಳನ್ನು ಬದಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸದ್ಯ ಸ್ಥಿರವಾಗಿದೆ ಎಂದರು.
Goa CM Manohar parrikar,check up on his health,AIIMS,Dr Garg