ಹೂಡಿಕೆಗೆ ನಮ್ಮ ರಾಜ್ಯವೇ ಉತ್ತಮ; ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

ಬೆಂಗಳೂರು; ಐಟಿ ಹಾಗೂ ಕೈಗಾರಿಕಾ ಉದ್ಯಮಕ್ಕೆ ಕರ್ನಾಟಕ ಸರಕಾರ ಸೂಕ್ತ ಸೌಲಭ್ಯ, ವಾತಾವರಣ ನಿರ್ಮಿಸಿ ಕೊಟ್ಟಿರುವುದರಿಂದ ಸಾವಿರಾರು ಹೂಡಿಕೆದಾಋಉ ನಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಏಷಿಯನ್ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ ಬಿಸಿನೆಸ್‌ ಮೀಟ್‌ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಐಟಿ ಕ್ಷೇತ್ರಕ್ಕೆ ಅತಿ ಹೆಚ್ಚು ಸೌಲಭ್ಯ ನೀಡಿರುವ ರಾಜ್ಯಗಳಲ್ಲಿ‌ ಮೊದಲ‌ ಸ್ಥಾನದಲ್ಲಿದೆ.‌ ಸಾವಿರಕ್ಕೂ ಹೆಚ್ಚು ಐಟಿ‌ ಕಂಪನಿಗಳು ಇಲ್ಲಿ‌ ನೆಲೆ ಕಂಡಿವೆ. ಜೊತೆಗೆ ಸ್ಟಾರ್ಟ್‌ ಅಪ್‌ ಪಾಲಿಸಿಯನ್ನು‌ ಮೊದಲ ಬಾರಿಗೆ ಕರ್ನಾಟಕದಲ್ಲಿ ತರಲಾಗಿದೆ. ದೇಶದಲ್ಲಿರುವ ೧೪ ಸಾವಿರ ಸಾರ್ಟ್‌ಅಪ್ಸ್‌ನಲ್ಲಿ ಸಾವಿರ ಸ್ಟಾರ್ಟ್‌ಅಪ್ಸ್‌ ನಮ್ಮಲ್ಲಿಯೇ ಇದೆ. ವಿಶ್ವದಲ್ಲಿ
ತಾಂತ್ರಿಕ ಮಾನವ ಸಂಪನ್ಮೂಲ ಉತ್ಪಾದಿಸುವಲ್ಲಿ ನಮ್ಮ ರಾಜ್ಯ 4ನೇ ಸ್ಥಾನವನ್ನು‌ ಪಡೆದುಕೊಂಡಿದೆ ಎಂದರು.

೮೦ರ ದಶಕದ ಹಿಂದೆ ನಮ್ಮ‌ದೇಶ ಪ್ರತಿಯೊಂದನ್ನು ಆಮದು ಮಾಡಿಕೊಳ್ಳುವ‌ ಮೂಲಕ ಇತರ ರಾಷ್ಟ್ರಗಳನ್ನು ಅವಲಂಬಿಸಿತ್ತು.‌ ಕೈಗಾರಿಕಾ ಕ್ರಾಂತಿ ಬಳಿಕ ಜಾಗತಿಕ‌ ಮಟ್ಟದಲ್ಲಿ ನಮ್ಮ‌ದೇಶ ಅಭಿವೃದ್ಧಿ ಹೊಂದುತ್ತಿದೆ. ವಿದೇಶಿ ಹೂಡಿಕೆ ಸಹ ಹೆಚ್ಚಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಹೂಡಿಕೆ ಮಾಡಲು ಉತ್ತಮ ವಾತಾವರಣ, ಸೌಲಭ್ಯವನ್ನು ಒದಗಿಸಿಕೊಡಲಾಗಿದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ‌ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ