ಚಾಮರಾಜನಗರ: ಬಂಡಿಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಕಾಡ್ಗಿಚ್ಚು ಹಿನ್ನಲೆಯಲ್ಲಿ ಬೆಂಕಿ ನಂದಿಸುವ ಕಾರ್ಯಕ್ಕೆ ಭಾರತೀಯ ವಾಯುಪಡೆಯ 4 ಹೆಲಿಕ್ಯಾಪ್ಟರ್ ನ್ನು ಬಳಸಿಕೊಳ್ಳಲಾಗುತ್ತಿದ್ದಿ, ಕಾರ್ಯಾಚರಣೆ ಚುರುಕುಗೊಂಡಿದೆ.
ರಕ್ಷಿತಾರಣ್ಯ ಪ್ರದೇಶದಲ್ಲಿ ಹಬ್ಬಿರುವ ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ಪಡೆಯಲು ಸೇನಾ ಹೆಲಿಕಾಪ್ಟರ್ ರವಾನಿಸುವಂತೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಮನಿವಿ ಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸ್ಪಂದಿಸಿ, ವಾಯುಪಡೆಯ ಹೆಲಿಕ್ಯಾಪ್ಟರ್ ಕಳುಹಿಸಿಕೊಟ್ಟಿದೆ.
ಬೆಂಗಳೂರಿನ ವಾಯುನೆಲೆಯಿಂದ ಈಗಾಗಲೇ ಬಂಡಿಪುರ ಅರಣ್ಯಕ್ಕೆ ತೆರಳಿರುವ 4 ಹೆಲಿಕ್ಯಾಪ್ಟರ್ ಗಳು ಹೆಚ್ ಡಿ ಕೋಟೆಯ ನುಗು ಜಲಾಶಯದಿಂದ ನೀರನ್ನು ಸಂಗ್ರಹಿಸಿತಂದು ಬೆಂಕಿಬಿದ್ದಿರುವ ಕಾಡಿನ ಜಾಗಕ್ಕೆ ಸಿಂಪಡಿಸಲಾಗುತ್ತಿದೆ. ಅಗ್ನಿಶಾಮಕದಳ, ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇನ್ನು ಒಂದೆಡೆ ಬೆಂಕಿ ನಂದಿಸುವ ಕಾರ್ಯದಲ್ಲಿ ಅರಣ್ಯ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ ಕಾರ್ಯನಿರತವಾಗಿದ್ದರೆ, ಇನ್ನೊಂದೆಡೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸುತ್ತಿದೆ. ಬಂಡಿಪುರ ಅರಣ್ಯದಲ್ಲಿ ಆರಂಭವಾಗಿರುವ ಕಾಡ್ಗಿಚ್ಚಿನ ಆರ್ಭಟ, ಮೈಸೂರಿನ ಚಾಮುಂಡಿ ಬೆಟ್ಟ, ನಂದಿಬೆಟ್ಟ, ನೆಲಮಂಗಲ, ತೀರ್ಥಹಳ್ಳಿ ಮಲೆನಾಡಿನ ಭಾಗಗಳಲ್ಲಿಯೂ ಬೆಂಕಿಯ ರುದ್ರನರ್ತನ ಕಾಣಿಸಿಕೊಂಡಿದೆ. ಒಟ್ಟಾರೆ ರಾಜ್ಯಾದ್ಯಂತ ಬೆಂಕಿಯ ಕೆನ್ನಾಲಿಗೆ ಹೆಚ್ಚುತ್ತಿದ್ದು, ಜನರಲ್ಲಿ ಆತಂಕವನ್ನುಂಟುಮಾಡಿದೆ.
Bandipur forest fire,Indian Air Force,helicopters