
ಐರ್ಲೆಂಡ್ ವಿರುದ್ಧ ಡೆಹರಾಡೂನ್ನಲ್ಲಿ ನಡೆದ ಟಿ-20 ಪಂದ್ಯದಲ್ಲಿ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ತಂಡ 5 ವಿಶ್ವದಾಖಲೆ ಅಳಿಸಿ ಹಾಕುವ ಮೂಲಕ ವಿಶ್ವ ದಿಗ್ಗಜ ತಂಡಗಳನ್ನೇ ಬೆಚ್ಚಿಬೀಳಿಸಿದೆ.ವಿಶ್ವ ಕ್ರಿಕೆಟ್ನಲ್ಲಿ ಈಗಷ್ಟೆ ಅಂಬೆಗಾಲಿಟ್ಟು ದೊಡ್ಡ ದೊಡ್ಡ ತಂಡಗಳಿಗೆ ಶಾಕ್ ಕೊಟ್ಟು ಅಚ್ಚರಿ ನೀಡಿರುವ ಅಫ್ಘಾನಿಸ್ತಾನ ತಂಡ ಐರ್ಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸುವ ಜೊತೆಗೆ ಹಲವಾರು ವಿಶ್ವ ದಾಖಲೆಗಳನ್ನ ಬರೆದಿದೆ. ಹಾಗಾದ್ರೆ ಅಫ್ಘಾನಿಸ್ತಾನ ಬರೆದ ಐದು ಪ್ರಮುಖ ದಾಖಲೆಗಳೇನು ಅನ್ನೋದನ್ನ ನಾವ್ ತೋರಿಸ್ತೀವಿ ನೋಡಿ
ಮೊದಲ ವಿಕೆಟ್ಗೆ ಗರಿಷ್ಠ ರನ್ಗಳ ಜೊತೆಯಾಟ
ಓಪನರ್ಸ್ಗಳಾದ ಹಜರತ್ಹುಲ್ಲಾ ಝಾಝೈ ಹಾಗೂ ಉಸ್ಮಾನ್ ಘಾನಿ ತಂಡಕ್ಕೆ Decent Opening ಕೊಟ್ಟರು. ಮೊದಲ ವಿಕೆಟ್ಗೆ ಈ ಜೋಡಿ 236 ರನ್ಗಳ ಜೊತೆಯಾಟ ನಡೆಸಿ ವಿಶ್ವದಾಖಲೆ ನಿರ್ಮಿಸಿದರು. ಇದಕ್ಕು ಮೊದಲು 2018 ರಲ್ಲಿ ಆಸ್ಟ್ರೇಲಿಯಾದ ಫಿಂಚ್ ಹಾಗೂ ಡಾರ್ಕಿ ಶಾರ್ಟ್ ಜಿಂಬಾಬ್ವೆ ವಿರುದ್ಧ 223 ರನ್ಗಳ ಜೊತೆಯಾಟದ ಮೂಲಕ ದಾಖಲೆ ಬರೆದಿದ್ರು.
ಟಿ-20 ಫಾರ್ಮೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಹಜರತ್ಹುಲ್ಲಾ
ಹಜರತ್ಹುಲ್ಲಾ ಝಾಝೈ ಈ ಪಂದ್ಯದಲ್ಲಿ 16 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. 2013 ರಲ್ಲಿ ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 14 ಸಿಕ್ಸರ್ ಸಿಡಿಸಿದ್ದದ್ದು ಇದುವೆಗಿನ ದಾಖಲೆಯಾಗಿತ್ತು. ಟಿ20ಯಲ್ಲಿ ಕೆರೆಬಿಯನ್ ದೊರೆ ಕ್ರಿಸ್ ಗೇಲ್ ಬಾಂಗ್ಲಾದೇಶ ಪ್ರೀಮಿಯರ್ನಲ್ಲಿ 18 ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ರು.
ಎರಡನೇ ಅತಿ ಹೆಚ್ಚು ರನ್ ಕಲೆ ಹಾಖಿದ ಹಜರತ್ಹುಲ್ಲಾ
ಹಜರತ್ಹುಲ್ಲಾ ಝಾಝೈ ಈ ಪಂದ್ಯದಲ್ಲಿ 162 ರನ್ ದಾಖಲಿಸುವ ಮೂಲಕ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಎಂಬ ಹಿರಿಮೆಗೆ ಪಾತ್ರರಾದರು. ಈ ಹಿಂದೆ ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್172 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಕ್ರಿಸ್ ಗೇಲ್ ಆರ್ಸಿಬಿ ಪರ 175 ರನ್ ಗಳಿಸಿದ ದಾಖಲೆ ಹೊಂದಿದ್ದಾರೆ.
ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಅಫ್ಘಾನಿಸ್ತಾನ
ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ 22 ಸಿಕ್ಸರ್ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ತಂಡ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿತು. 2016ರಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತದ ವಿರುದ್ಧ 21 ಸಿಕ್ಸರ್ ಸಿಡಿಸಿದೆ. 2017 ರಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ 21 ಸಿಕ್ಸರ್ ಗಳಿಸಿದ ದಾಖಲೆ ನಿರ್ಮಿಸಿತ್ತು.
ಅತಿ ಹೆಚ್ಚು ರನ್ ಗಳಿಸಿದ ತಂಡ ಅಫ್ಘಾನಿಸ್ತಾನ
ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ 20 ಓವರ್ಗಳಲ್ಲಿ 278 ರನ್ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾ ನಿರ್ಮಿಸಿದ್ದ 263 ರನ್ಗಳ ದಾಖಲೆಯನ್ನು ಪುಡಿಗಟ್ಟಿತು. 2016ರಲ್ಲಿ ಆಸೀಸ್ ತಂಡದ ಪರ ಮ್ಯಾಕ್ಸ್ವೆಲ್ 145 ರನ್ ಗಳಿಸಿದ್ರು..
ಒಟ್ನಲ್ಲಿ ಟಿ20 ಫಾರ್ಮೆಟ್ಗೆ ಹೇಳಿ ಮಾಡಿಸಿದ ತಂಡ ಎಂಬ ಗೌರವಕ್ಕೆ ಪಾತ್ರವಾಗಿರುವ ಅಫ್ಘಾನಿಸ್ತಾನ ತಂಡ ಐದು ದಾಖಲೆಗಳನ್ನ ಬರೆದು ದೊಡ್ಡ ತಂಡಗಳಿಗೆ ಎಚ್ಚರಿಕೆ ನೀಡಿದೆ.