ಅತ್ಯುತ್ತಮ ಚಿತ್ರಕ್ಕಾಗಿ ಗ್ರೀನ್ ಬುಕ್, ಬೆಸ್ಟ್ ಡಾಕ್ಯೂಮೆಂಟರಿ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಪಿರಡ್, ಎಂಡ್ ಆಫ್ ಸೆಂಟೆನ್ಸ್ ಗೆ ಆಸ್ಕರ್

ಲಾಸ್ ಏಂಜಲೀಸ್: 2019ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದ್ದು, ಪೀಟರ್ ಫರೇನಿ ನಿರ್ದೇಶನದ ಗ್ರೀನ್ ಬುಕ್ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗಳಿಸಿದೆ.

ಲಾಸ್​ ಏಂಜಲೀಸ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರೀನ್​ ಬುಕ್​ ಸಿನಿಮಾಗೆ ಆಸ್ಕರ್​ ಗೌರವ ನೀಡಲಾಯಿತು.ಈ ವರ್ಷ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ರೋಮಾ ಮತ್ತು ದಿ ಫೇವರಿಟ್ ಚಿತ್ರಗಳು ಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.

ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ – ಭಾರತದ ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಋತುಶ್ರಾವ ಕುರಿತ ‘ಪಿರಡ್, ಎಂಡ್ ಆಫ್ ಸೆಂಟೆನ್ಸ್’ ಸಾಕ್ಷ್ಯಚಿತ್ರ 2019ನೇ ಸಾಲಿನ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ.

ರೋಮಾ ಚಿತ್ರಕ್ಕಾಗಿ ಆಲ್ಫಾನ್ಸೊ ಕ್ಯೂರನ್​ ಅವರು ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ, ದಿ ಫೇವರಿಟ್​ ಸಿನಿಮಾಗಾಗಿ ಒಲಿವಿಯಾ ಕೊಲ್ಮನ್​ ಅವರು ಉತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇನ್ನು ಬೊಹಿಮೆನ್​ ರಾಪ್​ಸೊಡಿ ಸಿನಿಮಾಗಾಗಿ ರಮಿ ಮಾಲಿಕ್​ ಅವರು ಉತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.

ಪ್ರಶಸ್ತಿ ಪಟ್ಟಿ ಇಂತಿದೆ:
ಪೀಟರ್ ಫರೇನಿ ನಿರ್ದೇಶನದ ಗ್ರೀನ್ ಬುಕ್-ಅತ್ಯುತ್ತಮ ಚಿತ್ರ-
ಅಲ್ಫೋನ್ಸೊ ಕ್ಯುರೋನ್ ರೋಮಾ ಚಿತ್ರಕ್ಕಾಗಿ- ಅತ್ಯುತ್ತಮ ನಿರ್ದೇಶಕ
ದಿ ಫೇವರಿಟ್ ಚಿತ್ರಕ್ಕೆ ಒಲಿವಿಯಾ ಕಾಲ್ ಮ್ಯಾನ್-ಉತ್ತಮ ನಟಿ
ರಾಮಿ ಮಲಿಕ್- ಬೊಹೆಮಿಯನ್ ರಫ್ಸೊಡಿ ಚಿತ್ರ -ಉತ್ತಮ ನಟ-
ಮಹೆರ್ಷಲಾ ಆಲಿ- ಗ್ರೀನ್ ಬುಕ್ ಚಿತ್ರ-ಅತ್ಯುತ್ತಮ ಪೋಷಕ ನಟ
ಅತ್ಯುತ್ತಮ ಪೋಷಕ ನಟಿ-ರೆಗಿನಾ ಕಿಂಗ್
ಅತ್ಯುತ್ತಮ ವಿದೇಶಿ ಚಿತ್ರ, ಛಾಯಾಗ್ರಹಣ-ರೋಮಾ(ಮೆಕ್ಸಿಕೊ)
ಅತ್ಯುತ್ತಮ ಅನಿಮೇಟೆಡ್ ಫ್ಯೂಚರ್ ಚಿತ್ರ-ಸ್ಪೈಡರ್ ಮ್ಯಾನ್: ಇನ್ ಟೂ ದ ಸ್ಪೈಡರ್ ವರ್ಸ್
ಅತ್ಯುತ್ತಮ ಮೂಲ ಚಿತ್ರಕಥೆ-ಬ್ಲಾಕ್ ಪ್ಯಾಂಥರ್
ಅತ್ಯುತ್ತಮ ಗೀತೆ-ಶ್ಯಾಲ್ಲೊ, ಎ ಸ್ಟಾರ್ ಈಸ್ ಬಾರ್ನ್ ಚಿತ್ರಕ್ಕೆ
ಉತ್ತಮ ವಿಶಿಷ್ಟ ಸಾಕ್ಷ್ಯಚಿತ್ರ- ಫ್ರೀ ಸೊಲೊ
ಅತ್ಯುತ್ತಮ ಮೂಲ ಗೀತೆ -ಲೇಡಿ ಗಾಗಾ, ಮಾರ್ಕ್ ರಾಮ್ ಸನ್, ಆ್ಯಂಟನಿ ರೊಸ್ಸಾಮಾಂಡೊ, ಆಂಡ್ರ್ಯೂ ವ್ಯಾಟ್
ಮೂಲ ಕಥೆ-ನಿಕ್ ವೆಲ್ಲೆಲಾಂಗ್, ಬ್ರಯಾನ್ ಕ್ಯೂರಿ, ಪೀಟರ್ ಫಾರೆಲ್ಲಿ ಗ್ರೀನ್ ಬುಕ್ ಚಿತ್ರಕ್ಕೆ,
ಉತ್ತಮ ಛಾಯಾಗ್ರಹಣ-ರೊಮಾ ಚಿತ್ರಕ್ಕೆ ಅಲ್ಫೊನ್ಸೊ ಕ್ಯೂರಾನ್
ಉತ್ತಮ ನಿರ್ಮಾಣ ವಿನ್ಯಾಸ-ಬ್ಲಾಕ್ ಪ್ಯಾಂಥರ್
ಉತ್ತಮ ವಸ್ತ್ರ ವಿನ್ಯಾಸ-ಬ್ಲಾಕ್ ಪ್ಯಾಂಥರ್
ಉತ್ತಮ ಧ್ವನಿ ಸಂಕಲನ -ಬೊಹೆಮಿಯನ್ ರಫ್ಸೊಡಿ ಚಿತ್ರ
ಉತ್ತಮ ಸಂಕಲನ-ಬೊಹೆಮಿಯನ್ ರಫ್ಸೊಡಿ
ಉತ್ತಮ ಮೇಕಪ್ ಮತ್ತು ಕೇಶ ವಿನ್ಯಾಸ-ವೈಸ್

Green Book wins Oscar for best picture

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ