ಭಾರತದ ಭೂಶಿರದಲ್ಲಿ ಈ ಹಿಂದೆ ಬಹಳ ಭಯೋತ್ಪಾದನಾ ಕುಕೃತ್ಯಗಳು ನಡೆದಿದ್ದವು ಅದನ್ನು ನೆನಪಿಸುವಂತೆ ಮತ್ತೆ ಫೆಬ್ರವರಿ ೧೪ರಂದು ಜಮ್ಮು ಕಾಶ್ಮೀರದ ಪುಲ್ವಾಮ ಪ್ರಾಂತ್ಯದಲ್ಲಿ ಭಾರತೀಯ ಯೋಧರ ಮೇಲೆ ದಾಳಿ ನಡೆದ ಪರಿಣಾಮವಾಗಿ 40 ಸಿ ಆರ್ ಪಿ ಫ್ ಯೋಧರು ವೀರಮರಣ ಹೊಂದಿದರು.
ಈ ಕುರಿತು ಇವರ ಗೌರವಾರ್ಥವಾಗಿ ಶ್ರೀ ಅನುಪಮ ಕಾಲೇಜು ಆಂದ್ರಹಳ್ಳಿ ಮುಖ್ಯರಸ್ತೆ, ವಿದ್ಯಾರ್ಥಿ ಮತ್ತು ಶಿಕ್ಷಕ ವೃಂದದವರು ದಿನಾಂಕ ೨೩-೨-೨೦೧೯ ಜಾಥಾವನ್ನು ನಡೆಸಿದರು.
ಭಾರತದ ದೇಶದ ಭಾರತ ಮಾತೆಯ ಪರವಾಗಿ ಘೋಷಣೆ ಕೂಗುತ್ತ ಸುಮಾರು 30 ಕಿಲೋಮೀಟರ್ಗಳ ಬೃಹತ್ ಜಾಥಾದಲ್ಲಿ ಮಕ್ಕಳೊಡನೆ ಹಲವಾರು ನಾಗರಿಕ ಬಂಧುಗಳು ಭಾಗವಹಿಸಿದರು. ದೇಶದ ವೀರ ಯೋಧರ ಮೇಲೆ ನಡೆದ ಆಕ್ರಮಣವನ್ನು ಖಂಡನೆಗೆ ಅರ್ಹ ಎಂಬ ಮಾತುಗಳು ಸಾಮಾನ್ಯವಾಗಿತ್ತು.
ಸ್ವಾತಂತ್ರ್ಯ ನಂತರದಿಂದಲೂ ಈ ದೇಶದಲ್ಲಿ ಭಯೋತ್ಪಾದನೆಯ ಪಿಡುಗು ಬಹಳ ಹೆಚ್ಚಾಗಿಯೇ ಕಂಡು ಬಂದಿದೆ ಈ ವಿಚಾರವಾಗಿ ಹಲವು ಸಂಘರ್ಷಗಳು ಉಂಟಾದರೂ ನಮ್ಮ ದೇಶದ ಮೇಲಾಗುತ್ತಿರುವ ಅತಿಕ್ರಮಣವನ್ನು ತಡೆಯಲಾಗದೆ ಇರುವುದು ವಿಷಾದಕರ ಸಂಗತಿ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹಾಗೂ ಸಮಾಜಕ್ಕೆ ಯೋಧರ ಬಗ್ಗೆ ಹಾಗೂ ದೇಶದ ಬಗ್ಗೆ ಇರುವ ಕಾಳಜಿಯನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಈ ಜಾಥಾ ಮಹತ್ತರ ಪಾತ್ರ ವಹಿಸಿತು.