ಪುಲ್ವಾಮ ದಾಳಿಯನ್ನ ಖಂಡಿಸಿ ಪಾಕ್ ವಿರುದ್ಧ ಎಲ್ಲ ಸಂಬಂದಗಳನ್ನ ಕಡಿದುಕೊಳ್ಳುವ ಜೊತೆಗೆ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಆಡೋದು ಬೇಕೋ ಬೇಡವೋ ಎನ್ನುವುದರ ಬಗ್ಗೆ ಭಾರೀ ಚೆರ್ಚೆ ನಡೆಯುತ್ತಿದೆ.
ಒಂದು ವೇಳೆ ಜೂನ್ 16ರಂದು ಮ್ಯಾಂಚೆಸ್ಟರ್ನಲ್ಲಿ ನಡೆಯುವ ಪಂದ್ಯದಲ್ಲಿ ಟೀಂ ಇಂಡಿಯಾ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಆಡದಿದ್ದರೆ ವಿಶ್ವಕಪ್ ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆಯು ಇದೆ.
ಒಂದು ವೇಳೆ ಪಾಕ್ ವಿರುದ್ಧ ನಿಗದಿಯಾಗಿರುವ ಲೀಗ್ ಹಂತದಲ್ಲಿ ಆಡಲು ಒಪ್ಪದಿದ್ದರೇ ಐಸಿಸಿ ಟೀಂ ಇಂಡಿಯಾವನ್ನ ಟೂರ್ನಿಯಿಂದಲೇ ಬ್ಯಾನ್ ಮಾಡುವ ಹಕ್ಕು ಕೂಡ ಇದೆ. ಆದರೆ ವಿಶ್ವ ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಬಲಿಷ್ಠ ತಂಡವಾಗಿರೋದರ ಜೊತೆಗೆ ವಿಶ್ವ ವ್ಯಾಪಿ ಅಪಾರ ಅಭಿಮಾನಿಗಳನ್ನ ಪಡೆದುಕೊಂಡಿದೆ. ವಿಶ್ವಕಪ್ನಲ್ಲಿ ಟೀಂ ಇಂಡಿಯಾವನ್ನ ಬ್ಯಾನ್ ಮಾಡಿದರೆ ಐಸಿಸಿ ಕೋಟ್ಯಾಂತರ ರೂಪಾಯಿ ಹಣವನ್ನ ಕಳೆದುಕೊಳ್ಳಲಿದೆ.
ಪಾಕಿಸ್ತಾನ ವಿರುದ್ದ ಆಡುವಂತೆ ಐಸಿಸಿ ಈಗಾಗಲೇ ಬಿಸಿಸಿಐಯನ್ನ ಮನವೊಲಿಸುತ್ತಿದೆ.