ಇಬ್ಬರು ಶಂಕಿತ ಉಗ್ರರ ಬಂಧನ

ಲಖನೌ: ಜೈಷ್​ ಎ ಮೊಹಮ್ಮದ್​ ಉಗ್ರ ಸಂಘಟನೆಯ ಇಬ್ಬರು ಶಂಕಿತ ಉಗ್ರರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.

ಬಂಧಿತರನ್ನು ಕುಲ್ಗಾಂನ ಶಾನವಾಜ್ ಅಹ್ಮದ್ ಮತ್ತು ಪುಲ್ವಾಮಾದ ಅಕಿಬ್​ ಅಹ್ಮದ್ ಮಲಿಕ್ ಎಂದು ಗುರುತಿಸಲಾಗಿದೆ. ಇವರಿಬ್ಬರನ್ನು ಉತ್ತರ ಪ್ರದೇಶದ ದಿಯೋಬಂದ್​ ಮತ್ತು ಶಹರಾನ್ಪೂರದಲ್ಲಿ ಬಂಧಿಸಿರುವುದಾಗಿ ಪೊಲೀಸ್​ ಮಹಾನಿರ್ದೇಶಕರಾದ ಒ.ಪಿ. ಸಿಂಗ್​ ತಿಳಿಸಿದ್ದಾರೆ.

ಬಂಧಿತ ಶಾನವಾಜ್, ಜೈಷ್​​ ಎ ಮೊಹಮ್ಮದ್​ ಉಗ್ರ ಸಂಘಟನೆಗೆ ಹೊಸದಾಗಿ ನೇಮಕಗೊಂಡ ಸದಸ್ಯನಾಗಿದ್ದಾನೆ. ಬಂದಿತ ಉಗ್ರರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ.

Uttar Pradesh anti terror unit arrests 2 JeM men

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ