ಬೆಂಗಳೂರು,ಫೆ.22- ನಗರ ಪೆÇಲೀಸ್ ಕಂಟ್ರೋಲ್ ರೂಂ 100ಕ್ಕೆ ಕರೆ ಮಾಡಿದ ಅನಾಮಧೇಯ ವ್ಯಕ್ತಿರೈಲ್ವೆ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆಎಂದು ಹೇಳಿ ಕರೆ ಸ್ಥಗಿತ ಗೊಳಿಸಿದ್ದರಿಂದ ಕೆಲಕಾಲ ಆತಂಕ ಉಂಟಾಗಿತ್ತು.
ಇಂದು ಬೆಳಗಿನ ಜಾವ 1.30ರ ಸಮಯದಲ್ಲಿ ಪೆÇಲೀಸ್ ನಿಯಂತ್ರಣ ಕೊಠಡಿ 100ಕ್ಕೆ ಅನಾಮಧೇಯ ವ್ಯಕ್ತಿಕರೆ ಮಾಡಿದ್ದಾನೆ.
ಬೆಂಗಳೂರು ನಗರ ಪೆÇಲೀಸ್ ನಿಯಂತ್ರಣ ಕೊಠಡಿಯಲ್ಲಿ ಕರೆ ಸ್ವೀಕರಿಸಿದ ಸಿಬ್ಬಂದಿ ತಕ್ಷಣರೈಲ್ವೆ ಪೆÇಲೀಸರಿಗೆ ತಿಳಿಸಿದ್ದಾರೆ.
ರೈಲ್ವೆ ಪೆÇಲೀಸರು ಜಾಗೃತರಾಗಿ ನಗರದ ಎಲ್ಲಾರೈಲ್ವೆ ನಿಲ್ದಾಣ ಹಾಗೂ ಜಂಕ್ಷನ್ಗಳಲ್ಲಿ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಪರಿಶೀಲನೆ ನಡೆಸಿದ್ದು, ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ. ಇದು ಹುಸಿ ಕರೆಎಂದು ತಿಳಿದು ಪೆÇಲೀಸರು ನಿಟ್ಟುಸಿರುಬಿಟ್ಟರು.
ಒಟ್ಟಾರೆರೈಲ್ವೆ ನಿಲ್ದಾಣಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದ್ದು ಹೋಗುವವರು, ಬರುವವರತಪಾಸಣೆ ಮಾಡಲಾಯಿತು.
ಹುಸಿ ಕರೆಯನ್ನುಯಾರು, ಎಲ್ಲಿಂದಕರೆ ಮಾಡಿದನೆಂಬ ಬಗ್ಗೆ ತನಿಖೆಕೈಗೊಂಡಿದ್ದಾರೆ.