ರಾಯಪುರ್: ಪಾಕಿಸ್ತಾನದ ಹ್ಯಾಕರ್ ಗಳು ಛತ್ತೀಸಗಢ್ ಬಿಜೆಪಿ ರಾಜ್ಯ ಘಟಕದ ವೆಬ್ಸೈಟ್ ಅನ್ನು ಹ್ಯಾಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನಾವು ಪಾಕಿಸ್ತಾನದ ಸೈಬರ್ ಅಟ್ಯಾಕರ್ ಎಂದು ವೆಬ್ಸೈಟ್ಗೆ ಮೆಸೇಜ್ ಕಳುಹಿಸಿದ್ದಾರೆ. ಸರಣಿ ಸ್ಫೋಟದ ದಾಳಿಯ ಬೆದರಿಕೆ ಒಡ್ಡಿದ್ದು, ಪಾಕಿಸ್ತಾನದ ಧ್ವಜ ಹಾಗೂ ಅವರ ಆರ್ಮಿ ಫೋಟೋಗಳನ್ನು ವೆಬ್ಸೈಟ್ನಲ್ಲಿ ಹಾಕಲಾಗಿದೆ. ಕಾಶ್ಮೀರದ ಮೇಲೆ ಹಿಡಿತವನ್ನು ಸಾಧಿಸುವ ಯೋಚನೆ ಮಾಡಬೇಡಿ ಎನ್ನುವ ಮೆಸೇಜ್ ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಛತ್ತೀಸಗಢ ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಡಿ.ಮಶಾಕೆ ಮಾಹಿತಿ ನೀಡಿದ್ದು, ನಮ್ಮ ವೆಬ್ಸೈಟ್ ಸೇರಿದಂತೆ 100ಕ್ಕೂ ಹೆಚ್ಚು ವೆಬ್ಸೈಟ್ ಗಳನ್ನು ಪಾಕಿಸ್ತಾನ ಮೂಲದವನು ಎನ್ನಲಾದ ವ್ಯಕ್ತಿಗಳು ಹ್ಯಾಕ್ ಮಾಡಿದ್ದಾರೆ. ಈ ಸಂಬಂಧ ಸೈಬರ್ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ತಿಳಿಸಿದ್ದಾರೆ.
Chhattisgarh: BJP state website hacked by Pakistani hackers